ಮಾವನಿಗಾಗಿ ನಟಿ ಕರೀನಾ ಕಪೂರ್ ಸೀರೆ ಹರಾಜು
ನಿನ್ನೆಯಷ್ಟೇ
ಬಾಲಿವುಡ್ ಬೆಡಗಿ ಕರೀನಾ ಕಪೂರಳ ಬಿಕಿನಿ ಪುರಾಣ ಕೇಳಿದ್ದಿರಿ. ಇಂದು ಅದೇ ಕರೀನಾಳ ಚಮಕ್ ಸೀರೆ ಬಗ್ಗೆ ಕೇಳಿ. ಸಾಧ್ಯವಾದರೆ ಅದನ್ನು ಖರೀದಿಸಿ. ಏಕೆಂದರೆ ಸತ್ಕಾರ್ಯಕ್ಕೆಂದು ಸಪೂರ ಕರೀನಾ ತನ್ನ ಸೀರೆಯನ್ನು ಮಾರಾಟಕ್ಕೆ ಇಟ್ಟಿದ್ದಾಳೆ. id="toptextpromo"> id='are-slot-1' class='oiad oi-axt oiadv'>ಕೆಂಪುಕೆಂಪಾದ
ಸೀರೆಯಲ್ಲಿ ಮಾದಕವಾಗಿ ಕಂಡಿದ್ದ ಕರೀನಾ ತಮ್ಮ ಅಭಿಮಾನಿಗಳ ನಿದ್ದೆಗೆಡಿಸಿದ್ದರು. ಯುವಕರು ಸೀರೆಯಲ್ಲಿನ ನೀರೆಯತ್ತ ಕಣ್ಣು ನಿಟ್ಟಿದ್ದರೆ ಹೆಂಗೆಳಯರು ನೀರೆ ಉಟ್ಟಿದ್ದ ಸೀರೆಗೆ ಫಿದಾ ಆಗಿದ್ದರು. ಕೊನೆಗೆ ಅದು ಚಮ್ಮಕ್ ಚಲೋ ಸೀರೆ ಎಂದೇ ಬ್ರ್ಯಾಂಡ್ ಆಯಿತು.id='are-slot-2' class='oiad oi-axt oiadv'>

Chammak Challo ಸೀರೆ
ಹೌದು 'ಚಮ್ಮಕ್ ಚಲೋ' ಹಾಡಿನಲ್ಲಿ ಕುಣಿದುಕುಪ್ಪಳಿಸಿ, ಇನ್ನಿಲ್ಲದ ಖ್ಯಾತಿ ಗಳಿಸಿದ್ದ ಕರೀನಾ ಕಪೂರ್ ಆ ಹಾಡಿಗಾಗಿ ತಾವು ಉಟ್ಟಿದ್ದ ಕೆಂಪು ಸೀರೆಯನ್ನು ಹರಾಜು ಹಾಕಲು ನಿರ್ಧರಿಸಿದ್ದಾರೆ. ಇದರಿಂದ ಬರುವ ದುಡ್ಡನ್ನು Tiger Eye Hospital ಆಸ್ಪತ್ರೆಗೆ ವಿನಿಯೋಗಿಸಲು ಮುಂದಾಗಿದ್ದಾರೆ.

ಮಾವ ಮ್ಯಾಕ್ ಪಟೌಡಿ ಹೆಸರಿನ ಕಣ್ಣಾಸ್ಪತ್ರೆ ಧರ್ಮಾರ್ಥ
ಇದೇನು ಹುಲಿ ಕಣ್ಣಾಸ್ಪತ್ರೆಗೆ ಇಷ್ಟೆಲ್ಲಾ ಸರ್ಕಸ್ ಮಾಡಬೇಕಿತ್ತಾ ನಮ್ ಕರೀನಾ ಕಪೂರ್ ಅಂತ ಅಂದುಕೊಳ್ಳಬೇಡಿ. ಏಕೆಂದರೆ ಇದು ತನ್ನ ಮಾವ ಮ್ಯಾಕ್ ಪಟೌಡಿ ಹೆಸರಿನಲ್ಲಿ ನಿರ್ಮಿಸಿರುವ ಕಣ್ಣಾಸ್ಪತ್ರೆ.

ದ್ರಾವಿಡ್ ಸಹಿ ಹಾಕಿರುವ ಬ್ಯಾಟ್ ಸಹ ಮಾರಾಟಕ್ಕೆ
ಈ ಸಂಬಂಧ ಕರೀನಾ ಕಪೂರ್ ಈಗಾಗಲೇ ಗಂಡ ಸೈಫ್ ಅಲಿಖಾನ್ ಜತೆಗೂಡಿ ಹರಾಜು ಹಾಕಲು ಲಂಡನ್ನಿಗೆ ತೆರಳಿದ್ದಾರೆ. ಖ್ಯಾತ ಲೇಖಕ Jeffrey Archer ಹರಾಕು ಪ್ರಕ್ರಿಯೆ ಗಂಟೆ ಬಾರಿಸಲಿದ್ದಾರೆ. ಗಮನಾರ್ಹವೆಂದರೆ ಇದೇ ಹರಾಜು ಕೇಂದ್ರದಲ್ಲಿ ರಾಹುಲ್ ದ್ರಾವಿಡ್ ಸಹಿ ಹಾಕಿರುವ ಬ್ಯಾಟ್ ಸಹ ಮಾರಾಟಕ್ಕೆ ಇಡಲಾಗಿದೆ.

ಪ್ರಿಯಾಂಕಾ ಚಪ್ಪಲಿ 2.5 ಲಕ್ಷಕ್ಕೆ ಮಾರಾಟ ಮಾಡಿದ್ದರು
ಅಂದಹಾಗೆ ಬಾಲಿವುಡ್ ತಾರೆಯರು ತಮ್ಮ ವಸ್ತುಗಳನ್ನು ಪ್ರತಿಷ್ಠಿತ ಹರಾಜು ಕೇಂದ್ರಗಳಲ್ಲಿ ಹರಾಜಿಗಿಡುವುದು ಹೊಸದೇನೂ ಅಲ್ಲ. ಮೊನ್ನೆಯಷ್ಟೇ ಪ್ರಿಯಾಂಕಾ ಚೋಪ್ರಾ ಚಪ್ಪಲಿಗಳನ್ನು 2.5 ಲಕ್ಷಕ್ಕೆ ಮಾರಾಟ ಮಾಡಿದ್ದರು. ಅದು ಯುನಿಸೆಫ್ ಸಂಸ್ಥೆಯ Save the Girl campaign ಗಾಗಿ ಪ್ರಿಯಾಂಕಾ ಸಲ್ಲಿಸಿದ ಅಳಿಲು ಕಾಣಿಕೆ. ಅಕ್ಷಯ್ ಕುಮಾರ್ ತಮ್ಮ OMG Oh My God suit ಅನ್ನು ಶಾಲಾ ನಿಧಿಗಾಗಿ ಹರಾಜು ಹಾಕಿದ್ದರು.












Click it and Unblock the Notifications