ಷೇರುಪೇಟೆ: ಸೆಕೆಂಡುಗಳಲ್ಲಿ 5 ಲಕ್ಷ ಕೋಟಿ ಖಲಾಸ್!
ಮುಂಬೈ, ಫೆಬ್ರವರಿ 06: ಷೇರುಪೇಟೆಯಲ್ಲಿ ಮಂಗಳವಾರದಂದು ಸರಿ ಸುಮಾರು 1,274 ಅಂಕಗಳು ಕುಸಿಯುವ ಮೂಲಕ ಬಂಡವಾಳ ಹೂಡಿಕೆದಾರರಿಗೆ ಕರಾಳ ಮಂಗಳವಾರವಾಗಿ ಪರಿಣಮಿಸಿತು.
ಷೇರುಪೇಟೆ ಕುಸಿತದ ಪರಿಣಾಮವಾಗಿ ಹೂಡಿಕೆದಾರರಿಗೆ ಸೆಕೆಂಡುಗಳಲ್ಲಿ ಸರಿ ಸುಮಾರು 5.4 ಲಕ್ಷ ಕೋಟಿ ರು ನಷ್ಟವಾಗಿದೆ. ಕಳೆದ ಮೂರು ದಿನಗಳಲ್ಲಿ ಸುಮಾರು 9.6 ಲಕ್ಷ ಕೋಟಿ ರು ನಷ್ಟವಾಗಿದೆ.

ಮುಂಬೈ ಷೇರು ಮಾರುಕಟ್ಟೆಯಲ್ಲಿ ವಹಿವಾಟು ಕುಸಿತ ಕಂಡು 1274.30 ಅಂಕಗಳನ್ನು ಕಳೆದುಕೊಂಡು ಅಂತಿಮವಾಗಿ 33,482.81 ಅಂಕಗಳಿಗೆ ಬಿಎಸ್‌ಇ ಇಳಿಯಿತು.
2007 ಬಳಿಕ ಇದೇ ಮೊದಲ ಬಾರಿಗೆ ರೂಪಾಯಿ ಮೌಲ್ಯ ಕೂಡ ಸತತವಾಗಿ ಕುಸಿತ ಕಾಣುತ್ತಿದೆ.ಏಷ್ಯಾದ ಇತರ ಷೇರು ಮಾರುಕಟ್ಟೆಯಲ್ಲೂ ಕುಸಿತ ಉಂಟಾಗಿದ್ದು, ಅಮೆರಿಕದ ವಾಲ್‌ಸ್ಟ್ರೀಟ್‌ನಲ್ಲಿಯೂ ಕುಸಿತವಾಗಿದೆ. ಹೀಗಾಗಿ ಇದನ್ನು ರಕ್ತಪಾತ (ಬ್ಲಡ್ ಬಾತ್) ಎಂದು ಕರೆಯಲಾಗುತ್ತಿದೆ.
ಹಣಕಾಸು ಸಚಿವ ಜೇಟ್ಲಿ ಅವರು ಬಂಡವಾಳ ಹೂಡಿಕೆದಾರರಿಗೆ ಭರವಸೆ ನೀಡದಿದ್ದಲ್ಲಿ ಮಾರುಕಟ್ಟೆಯು ಇನ್ನಷ್ಟು ಕುಸಿಯುವ ಭೀತಿ ಇದೆ ಎನ್ನಲಾಗುತ್ತಿದೆ.












Click it and Unblock the Notifications