ಜಿಯೋ ಧನ್ ಧನಾ ಧನ್ ವಿರುದ್ಧ ಏರ್ ಟೆಲ್ ತ್ರಿಬ್ಬಲ್ ಆಫರ್

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 19: ರಿಲಯನ್ಸ್ ಜಿಯೋ ನೀಡಿರುವ ಧನ್ ಧನಾ ಧನ್ ಆಫರ್ ವಿರುದ್ಧ ಟೆಲಿಕಾಂ ದೈತ್ಯ ಭಾರ್ತಿ ಏರ್ ಟೆಲ್ ಮತ್ತೊಮ್ಮೆ ತೊಡೆ ತಟ್ಟಿ ನಿಂತಿದೆ. ತನ್ನ ಗ್ರಾಹಕರಿಗೆ ಮೂರು ಹೊಸ ಯೋಜನೆಗಳನ್ನು ಏರ್ ಟೆಲ್ ಪ್ರಕಟಿಸಿದೆ.

ಏರ್ ಟೆಲ್ ತನ್ನ ಗ್ರಾಹಕರಿಗೆ 244 ರು ಗಳಿಗೆ 70ಜಿಬಿ 4ಜಿ ಡಾಟಾ ನೀಡುವುದಾಗಿ ಘೋಷಿಸಿದೆ. ಟೆಲಿಕಾಂ ನಿಯಂತ್ರಕ ಟ್ರಾಲ್ ನಿರ್ದೇಶನದಂತೆ ರಿಲಯನ್ಸ್ ಸಂಸ್ಥೆ ತನ್ನ ಜಿಯೋ ಸಮ್ಮರ್ ಆಫರ್ ಕಡಿತಗೊಳಿಸಿ ಧನ್ ಧನಾ ಧನ್ ಆಫರ್ ಬಿಟ್ಟಿತ್ತು. ಇದರಿಂದ ಮತ್ತೊಮ್ಮೆ ಟೆಲಿಕಾಂ ದರ ಸಮರ ಆರಂಭವಾಗಿದೆ. [ಏನಿದು ಜಿಯೋ ಧನ್ ಧನಾ ಧನ್? ಇಲ್ಲಿದೆ ಫುಲ್ ಡಿಟೇಲ್]

ಧನ್ ಧನಾ ಧನ್ ಆಫರ್ ವಿರುದ್ಧ ಏರ್ ಟೆಲ್ ಮೂರು ಯೋಜನೆಗಳನ್ನು ತನ್ನ ಗ್ರಾಹಕರಿಗೆ ನೀಡುತ್ತಿದೆ.
* ಏರ್ ಟೆಲ್ 244ರು ಯೋಜನೆ

* ಏರ್ ಟೆಲ್ 399 ರು ಯೋಜನೆ

* ಏರ್ ಟೆಲ್ 345 ರು ಯೋಜನೆ

ಯೋಜನೆಗಳ ಬಗ್ಗೆ ವಿವರ ಮುಂದೆ ಇದೆ...

Airtel Rs 244 Plan

Airtel Rs 244 Plan

* 70 ದಿನಗಳ ಮಟ್ಟಿಗೆ ಪ್ರತಿದಿನ 1ಜಿಬಿ ಡಾಟಾ ಗ್ರಾಹಕರಿಗೆ ಲಭ್ಯವಾಗಲಿದೆ.
* ಪ್ರತಿ ದಿನದ ಡಾಟಾ ಮಿತಿ 1ಜಿಬಿ ಮಾತ್ರ.
* ಮೈಏರ್ ಟೆಲ್ ಆಪ್ ನಲ್ಲಿ ಲಭ್ಯವಿರುವ ಮಾಹಿತಿಯಂತೆ, 244ರು ಯೋಜನೆಯಲ್ಲಿ ಎಸ್ಟಿಡಿ ಹಾಗೂ ಸ್ಥಳೀಯ ಕರೆಗಳು ಉಚಿತ.
* ಆದರೆ, ಏರ್ ಟೆಲ್ ನಿಂದ ಏರ್ ಟೆಲ್ ಗೆ 300 ನಿಮಿಷಗಳ ಮಿತಿ ಹಾಕಲಾಗಿದೆ.
* ವಾರವೊಂದಕ್ಕೆ ಬೇರೆ ನೆಟ್ವರ್ಕ್ ಗಳಿಗೆ 1,200 ನಿಮಿಷಗಳ ಕಾಲ ಉಚಿತ ಕರೆ ಮಾಡಬಹುದು.
* ಕಾಲ್ ಮಿತಿ ಮೀರಿದ ಮೇಲೆ ಪ್ರತಿ ನಿಮಿಷಕ್ಕೆ 0.10 ಪೈಸೆಯಂತೆ ದರ ನಿಗದಿಯಾಗಿದೆ.

Airtel Rs 399 Plan

Airtel Rs 399 Plan

* 70 ದಿನಗಳ ಮಟ್ಟಿಗೆ ಪ್ರತಿದಿನ 1ಜಿಬಿ ಡಾಟಾ ಗ್ರಾಹಕರಿಗೆ ಲಭ್ಯವಾಗಲಿದೆ.
* ಮೈಏರ್ ಟೆಲ್ ಆಪ್ ನಲ್ಲಿ ಲಭ್ಯವಿರುವ ಮಾಹಿತಿಯಂತೆ, 244ರು ಯೋಜನೆಯಲ್ಲಿ ಎಸ್ಟಿಡಿ ಹಾಗೂ ಸ್ಥಳೀಯ ಕರೆಗಳು ಯಾವುದೇ ನೆಟ್ವರ್ಕ್ ಉಚಿತ.
* 70ದಿನಗಳ ಕಾಲಮಿತಿ 3,000 ನಿಮಿಷಗಳ ಕಾಲ ಉಚಿತ ಕರೆ ಮಾಡಬಹುದು.
* ಕಾಲ್ ಮಿತಿ ಮೀರಿದ ಮೇಲೆ ಪ್ರತಿ ನಿಮಿಷಕ್ಕೆ 0.10 ಪೈಸೆಯಂತೆ ದರ ನಿಗದಿಯಾಗಿದೆ.

Airtel Rs 345 Plan

Airtel Rs 345 Plan

* 1ಜಿಬಿ ಡಾಟಾವನ್ನು 2 ಜಿಬಿಗೆ ಏರಿಸಲಾಗಿದೆ.
* 28 ದಿನಗಳ ಅವಧಿ ಪ್ರತಿದಿನ 2 ಜಿಬಿ ಲಭ್ಯವಾಗಲಿದೆ.
* 1ಜಿಬಿ ಡಾಟಾ ಗ್ರಾಹಕರಿಗೆ ಲಭ್ಯವಾಗಲಿದೆ.
* 3,000 ನಿಮಿಷಗಳ ಉಚಿತ ಕಾಲ್ ಮಿತಿ ನೀಡಲಾಗಿದೆ.

ಆರಂಭಿಕ ಪ್ಲಾನ್ 309

ಆರಂಭಿಕ ಪ್ಲಾನ್ 309

ಆರಂಭಿಕ ಪ್ಲಾನ್ 309 ರು ನಿಂದ ಎಲ್ಲಾ ಅನಿಯಮಿತ ಪ್ಲಾನ್ ಅನಿಯಮಿತ ಎಸ್‌ಎಂಎಸ್, ಕರೆ ಮತ್ತು ಡಾಟಾ (ಪ್ರತಿದಿನ 4ಜಿ ಸ್ಪೀಡ್‌ನಲ್ಲಿ 1 ಜಿಬಿ ಡಾಟಾ)ವನ್ನು ಮೊದಲ ರಿಚಾರ್ಜ್‌ನ 3 ತಿಂಗಳ ಕಾಲ ನೀಡಲಿದೆ. ಇನ್ನಷ್ಟು ವಿವರಕ್ಕೆ ಕ್ಲಿಕ್ ಮಾಡಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Telecom major Bharti Airtel has launched three new plans to counter Reliance Jio’s Dhan Dhana Dhan offers.
Please Wait while comments are loading...