ಭಾರತ್ ಪೇ ನಿಂದ ವ್ಯಾಪಾರಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ

ಬೆಂಗಳೂರು, ಜೂನ್6: ಭಾರತದ ಅತಿದೊಡ್ಡ ವ್ಯಾಪಾರಿ ಸೇವಾ ಮತ್ತು ಯುಪಿಐ ಪಾವತಿ ಆ್ಯಪ್ ಆಗಿರುವ ಭಾರತ್ ಪೇ ಇಂದು ಸಣ್ಣ ಮೊತ್ತದ ಅಲ್ಪಾವಧಿಯ ಸಾಲವನ್ನು ವ್ಯಾಪಾರಿಗಳಿಗೆ ವಿತರಿಸುವ ಯೋಜನೆಯನ್ನು ಘೋಷಿಸಿದೆ.

ಕಂಪನಿ ಇದೀಗ ವ್ಯಾಪಾರಿಗಳಿಗೆ ಸಾಲ ನೀಡುವ ನಿಟ್ಟಿನಲ್ಲಿ ಸ್ವಂತ ಸಾಲ ನೀಡಿಕೆ ಲೈಸನ್ಸ್ ಗೆ ಅರ್ಜಿ ಸಲ್ಲಿಸುವ ಬಗ್ಗೆ ಚಿಂತನೆ ನಡೆಸಿದೆ. ಇದೀಗ ಭಾರತ್‍ಪೇ ಕ್ಯೂಆರ್ ಕೋಡ್ ಮೂಲಕ ವ್ಯಾಪಾರಿಗಳು ಪಾವತಿಯನ್ನು ಪಡೆಯುತ್ತಿದ್ದು, ಕಳೆದ ಮೂರು ತಿಂಗಳುಗಳಿಂದ ಸಾಕಷ್ಟು ವಹಿವಾಟುಗಳು ಪ್ಲಾಟ್‍ಫಾರಂನಲ್ಲಿ ಕಂಡುಬರುತ್ತಿದೆ.

ಹೊಸ ಯೋಜನೆಗಾಗಿ ಭಾರತ್‍ಪೇ ಅಪೋಲೊ ಫಿನ್‍ವೆಸ್ಟ್ ಜತೆ ಪಾಲುದಾರಿಕೆ ಮಾಡಿಕೊಂಡಿದ್ದು, 10 ಸಾವಿರ ರೂಪಾಯಿನಿಂದ ಒಂದು ಲಕ್ಷ ರೂಪಾಯಿವರೆಗೆ ಸಾಲ ನೀಡುವ ಇನ್ನೂ ಹೆಚ್ಚಿನ ಪಾಲುದಾರರನ್ನು ಹೊಂದುವ ಕಾರ್ಯ ಪ್ರಗತಿಯಲ್ಲಿದೆ.

ಸಾಲ ನೀಡಿಕೆ ಲೈಸನ್ಸ್ ಪಡೆದ ಬಳಿಕ, ಇತರ ಹಣಕಾಸು ಸಂಸ್ಥೆಗಳ ಜತೆ ಸಹಭಾಗಿತ್ವದಲ್ಲಿ ಸಹ- ಸಾಲ ನೀಡಲು ಉದ್ದೇಶಿಸಿದ್ದು, ಈ ಬಡ್ಡಿದರವನ್ನು ನಿಯಂತ್ರಿಸುವ ನಿಟ್ಟಿನಲ್ಲೂ ಪ್ರಯತ್ನ ನಡೆಸಲಿದೆ.

ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿಕೆ

ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿಕೆ

10 ಸಾವಿರ ರೂಪಾಯಿನಿಂದ ಒಂದು ಲಕ್ಷ ರೂಪಾಯಿವರೆಗೆ ಸಾಲ ನೀಡುವ ಇನ್ನೂ ಹೆಚ್ಚಿನ ಪಾಲುದಾರರನ್ನು ಹೊಂದುವ ಕಾರ್ಯ ಪ್ರಗತಿಯಲ್ಲಿದೆ. ಈ ಸಾಲಕ್ಕೆ ಮಾಸಿಕ 1.67% ಬಡ್ಡಿದರ ವಿಧಿಸಲಾಗುತ್ತಿದ್ದು, ಇದು ಸ್ಥಳೀಯ ಲೇವಾದೇವಿದಾರರು ಈ ವರ್ಗದ ವ್ಯಾಪಾರಿಗಳಿಗೆ ವಿಧಿಸುವ ಬಡ್ಡಿದರಕ್ಕಿಂತ ಕಡಿಮೆ

7 ಲಕ್ಷ ಆಫ್‍ಲೈನ್ ವ್ಯಾಪಾರಿಗಳನ್ನು ಹೊಂದಿದೆ

7 ಲಕ್ಷ ಆಫ್‍ಲೈನ್ ವ್ಯಾಪಾರಿಗಳನ್ನು ಹೊಂದಿದೆ

ಭಾರತ್‍ಪೇ ತನ್ನ ಆಫ್‍ಲೈನ್ ವ್ಯಾಪಾರಿ ನೆಲೆಯನ್ನು ಕ್ಷಿಪ್ರವಾಗಿ ವೃದ್ಧಿಸಿಕೊಂಡಿದ್ದು, ಇದುವರೆಗೆ 7 ಲಕ್ಷ ಆಫ್‍ಲೈನ್ ವ್ಯಾಪಾರಿಗಳನ್ನು ಹೊಂದಿದೆ. ಈ ಪೈಕಿ ಆರೋಗ್ಯಕರ ಶೇಕಡಾವಾರು ವ್ಯಾಪಾರಿಗಳು ಈ ಪ್ಲಾಟ್‍ಫಾರಂನಲ್ಲಿ ಸಕ್ರಿಯರಾಗಿದ್ದಾರೆ. ಇದು ಏಕೀಕೃತ ಪಾವತಿ ಇಂಟರ್‍ಫೇಸ್ ಮೂಲಕ ಪಾವತಿಗಳಿಗೆ ಅವಕಾಶ ಮಾಡಿಕೊಡುತ್ತಿದ್ದು, ಗ್ರಾಹಕರು ಗೂಗಲ್‍ಪೇ, ಪೇಟಿಎಂ ಅಥವಾ ಫೋನ್‍ಪೇ ಹೀಗೆ ಯಾವುದೇ ಯುಪಿಐ ಆ್ಯಪ್ ಬಳಸಿಕೊಂಡು ಪಾವತಿ ಮಾಡಬಹುದಾಗಿದೆ.

ಈಗಾಗಲೇ ದೇಶದ 13 ಕಡೆಗಳಲ್ಲಿ ಅಸ್ತಿತ್ವ ಹೊಂದಿದೆ

ಈಗಾಗಲೇ ದೇಶದ 13 ಕಡೆಗಳಲ್ಲಿ ಅಸ್ತಿತ್ವ ಹೊಂದಿದೆ

ಭಾರತ್‍ಪೇ ಈಗಾಗಲೇ ದೇಶದ 13 ಕಡೆಗಳಲ್ಲಿ ಅಸ್ತಿತ್ವ ಹೊಂದಿದ್ದು, ಈ ಎಲ್ಲ ಸ್ಥಳಗಳಲ್ಲೂ ಆಳವಾಗಿ ಬೇರೂರಿದೆ. ಮುಖ್ಯವಾಗಿ ಅಸಂಘಟಿತ ಸಣ್ಣ ವ್ಯಾಪಾರಿಗಳನ್ನು ಯುಪಿಐ ಆಧರಿತ ವಹಿವಾಟಿಗೆ ಗುರಿ ಮಾಡಿದೆ.

ಕಂಪನಿಯ ವಿತ್ತೀಕರಣ ಯೋಜನೆ

ಕಂಪನಿಯ ವಿತ್ತೀಕರಣ ಯೋಜನೆ

ಕಂಪನಿಯ ವಿತ್ತೀಕರಣ ಯೋಜನೆಯನ್ನು ವ್ಯಾಪಾರಿಗಳು ಬಳಸಿಕೊಳ್ಳಲು ಈ ಸಾಲ ಯೋಜನೆ ನೆರವಾಗುವುದು ಮಾತ್ರವಲ್ಲದೇ, ಸಾಂಪ್ರದಾಯಿಕ ಲೇವಾದೇವಿದಾರರಿಂದ ಸುಲಭವಾಗಿ ಸಾಲ ಪಡೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇದು ಅಗತ್ಯತೆಯೂ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+