Gold Rate Today: ಚಿನ್ನ-ಬೆಳ್ಳಿ ಖರೀದಿಗಾರರಿಗೆ ಭರ್ಜರಿ ಗುಡ್‌ನ್ಯೂಸ್‌, ಎಷ್ಟಿದೆ ಇಂದಿನ ದರ?

ಇನ್ನೇನು ಯುಗಾದಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದೆ. ಈ ಹಿನ್ನೆಲೆ ಯುಗಾದಿಗೆ ಚಿನ್ನ ಖರೀದಿಗೆ ಜನ ಮುಗಿಬೀಳುತ್ತಿದ್ದಾರೆ. ನಿನ್ನೆ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ತುಸು ಇಳಿಕೆ ಕಂಡಿತ್ತು. ಹೀಗಾಗಿ ಚಿನ್ನಾಭರಣ ಮಳಿಗೆಗಳಿಗೆ ಗ್ರಾಹಕರು ಧಾವಿಸಿದ್ದಾರೆ. ಹಬ್ಬಕ್ಕೂ ಮುನ್ನವೇ ಚಿನ್ನ ಹಾಗೂ ಬೆಳ್ಳಿ ಖರೀದಿಗೆ ಮುಂದಾಗಿದ್ದಾರೆ. ಈ ವಾರವಿಡೀ ಚಿನ್ನಾಭರಣ ಮಳಿಗೆಗಳಲ್ಲಿ ಜನಜಂಗುಳಿ ಇರಲಿದ್ದು, ಇಂದಿನ ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ ಗೊತ್ತಾ?

ಬೆಂಗಳೂರಿನಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಎರಡು ಕೂಡ ಕುಸಿತ ಕಂಡಿದೆ. ನಿನ್ನೆ ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್‌ ಚಿನ್ನ 82,300 ರೂಪಾಯಿ ಇದ್ದರೆ, ಅಪರಂಜಿ ಚಿನ್ನದ ಬೆಲೆ 10 ಗ್ರಾಂ.ಗೆ 89,780 ರೂಪಾಯಿ ಇತ್ತು. ಬರೋಬ್ಬರಿ ಚಿನ್ನದ ದರ 440 ಇಳಿಕೆ ಕಂಡಿತ್ತು, 100 ಗ್ರಾಂ ಅಪರಂಜಿ ಚಿನ್ನದ ಮೇಲೆ 4,400 ರೂಪಾಯಿ ಕುಸಿತ ಕಂಡಿತ್ತು.

Bengaluru Gold Silver Rates Today Latest Price On Ugadi 2025

ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ ಹೀಗಿದೆ. 24 ಕ್ಯಾರೆಟ್ ಚಿನ್ನದ ದರವು ಪ್ರತಿ ಗ್ರಾಂಗೆ 8,978 ರೂಪಾಯಿ, 22 ಕ್ಯಾರೆಟ್ ಚಿನ್ನದ ದರ 8,230 ರೂಪಾಯಿ, 18 ಕ್ಯಾರೆಟ್ ಚಿನ್ನದ ದರವು ಪ್ರತಿ ಗ್ರಾಂಗೆ 6,734 ರೂಪಾಯಿ ಇದೆ. ನಿನ್ನೆಯಿಂದಲೂ 22 ಕ್ಯಾರೆಟ್ ಚಿನ್ನ ಒಂದು ಗ್ರಾಂ ದರ 8,230 ಅಷ್ಟೇ ಇದೆ. 8 ಗ್ರಾಂ ಚಿನ್ನದ ದರ ಕೂಡ 65,840 ರೂಪಾಯಿ ಇದೆ. 10 ಗ್ರಾಂ ಚಿನ್ನದ ದರ 82,300 ರೂಪಾಯಿ ಇದ್ದರೆ, 100 ಗ್ರಾಂ ಚಿನ್ನದ ದರವು 8,23,000 ಇದ್ದು ಸದ್ಯಕ್ಕೆ ಯಾವುದೇ ಬದಲಾವಣೆ ಕಂಡಿಲ್ಲ.

24 ಕ್ಯಾರೆಟ್ ಚಿನ್ನದ ದರ ನೋಡುವುದಾದರೆ ಒಂದು ಗ್ರಾಂ ದರವು 8,978 ರೂಪಾಯಿ, 8 ಗ್ರಾಂ ದರ 71,824 ರೂಪಾಯಿ, 10 ಗ್ರಾಂ ದರ 89,780 ರೂಪಾಯಿ ಹಾಗು 100 ಗ್ರಾಂ ಚಿನ್ನದ ದರ 8,97,800 ಇದೆ. ಇದು ಕೂಡ ಸ್ಥಿರವಾಗಿದೆ. 18 ಕ್ಯಾರೆಟ್ ಚಿನ್ನದ ದರವನ್ನು ತಿಳಿಯುವುದಾದರೆ, ಒಂದು ಗ್ರಾಂ ಚಿನ್ನದ ದರ 6,734 ರೂಪಾಯಿ ಇದೆ. 8 ಗ್ರಾಂ ಚಿನ್ನದ ದರವು 53,872 ರೂಪಾಯಿ, 10 ಗ್ರಾಂ ಚಿನ್ನಕ್ಕೆ 67,340 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 6,73,400 ರೂಪಾಯಿ ಇದೆ.

Bengaluru Gold Silver Rates Today Latest Price On Ugadi 2025

ಬೆಳ್ಳಿ-ಪ್ಲಾಟಿನಂ ದರ ಎಷ್ಟಿದೆ?

ಬೆಂಗಳೂರಿನಲ್ಲಿ ಇಂದು ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ 101 ರೂಪಾಯಿ ಹಾಗೂ ಪ್ರತಿ ಕೆಜಿಗೆ 1,01,000 ರೂಪಾಯಿ ತಲುಪಿದೆ. 8 ಗ್ರಾಂ ಚಿನ್ನದ ದರವು 808 ರೂಪಾಯಿ ಇದ್ದರೆ, 10 ಗ್ರಾಂ ಚಿನ್ನದ ದರ 1,010 ರೂಪಾಯಿ ಇದೆ, 100 ಗ್ರಾಂ ಚಿನ್ನದ ದರ 10,100 ರೂಪಾಯಿ ಇದೆ. ಬೆಂಗಳೂರಿನಲ್ಲಿ ಇಂದು ಪ್ಲಾಟಿನಂ ದರ ಪ್ರತಿ ಗ್ರಾಂಗೆ 2,703 ರೂಪಾಯಿ ಹಾಗೂ 10 ಗ್ರಾಂಗೆ 27,030 ರೂಪಾಯಿ ಇದೆ. ಯುಗಾದಿ ಹಬ್ಬದ ವೇಳೆಗೆ ಈ ದರವು ಏರಿಳಿತ ಕಾಣುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+