Bengaluru Commuters: ಬೈಕ್ ಟ್ಯಾಕ್ಸಿಗಳ ವಿಚಾರದಲ್ಲಿ ಬೆಂಗಳೂರು ಜನರ ಡಿಮ್ಯಾಂಡ್ ಇದು, ಸರ್ಕಾರ ಒಪ್ಪುತ್ತಾ?
ಬೆಂಗಳೂರು ಮಹಾನಗರದಲ್ಲಿ ಬೈಕ್ ಟ್ಯಾಕ್ಸಿ ಅಬ್ಬರ ಮತ್ತೆ ಶುರುವಾಗುತ್ತಿದೆ, ಬೈಕ್ ಟ್ಯಾಕ್ಸಿಗೆ ಈಗ ಅನುಮತಿ ಸಿಕ್ಕ ನಂತರ ಪ್ರಯಾಣಿಕರು ಖುಷಿಯಾಗಿದ್ದಾರೆ. ಆದರೆ ಆಟೋ ಹಾಗೂ ಕ್ಯಾಬ್ ಚಾಲಕರು ಈ ಬಗ್ಗೆ ತೀವ್ರ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಒಬ್ಬರೇ ಪ್ರಯಾಣಿಸುವಾಗ, ಕಡಿಮೆ ದೂರದ ಪ್ರಯಾಣಕ್ಕೆ ಬೈಕ್ ಟ್ಯಾಕ್ಸಿ ಅವಲಂಬಿಸಿರುವ ಲಕ್ಷಾಂತರ ದೈನಂದಿನ ಪ್ರಯಾಣಿಕರು ತಮ್ಮ ದಿನನಿತ್ಯದ ಕಾರ್ಯ ನಡೆಸುತ್ತಿದ್ದಾರೆ. ಹೈಕೋರ್ಟ್ ಆದೇಶದ ನಂತರ ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಇದ್ದ ತೊಡಕು ನಿವಾರಣೆ ಆಗಿದೆ. ಹೀಗಿದ್ದಾಗ ಬೆಂಗಳೂರಿನ ಲಕ್ಷಾಂತರ ಪ್ರಯಾಣಿಕರು ಬೈಕ್ ಟ್ಯಾಕ್ಸಿ ಸೇವೆ ವಿಚಾರದಲ್ಲಿ ಹೊಸ ಡಿಮ್ಯಾಂಡ್ ಇಟ್ಟಿದ್ದಾರೆ.
ಬೆಂಗಳೂರಿನ ನಿವಾಸಿ ಹಾಗೂ ಬೈಕ್ ಟ್ಯಾಕ್ಸಿ ಸೇವೆ ಬಳಸುವ ಪ್ರಯಾಣಿಕರೊಬ್ಬರು ಹೇಳುವಂತೆ, ಈಗ ಬೈಕ್ ಟ್ಯಾಕ್ಸಿ ಸೇವೆಗೆ ಅವಕಾಶ ಸಿಕ್ಕಿರುವುದು ಸಂತಸದ ವಿಚಾರ. ಬೇರೆ ಆಯ್ಕೆಗಳಿಗೆ ಹೋಲಿಸಿದರೆ ಬೈಕ್ ಟ್ಯಾಕ್ಸಿಗಳು ಹತ್ತಿರದ ಜಾಗಗಳನ್ನು ತಲುಪಲು ಕಡಿಮೆ ವೆಚ್ಚ ಹಾಗೂ ವೇಗವಾಗಿರುತ್ತವೆ. ಆದರೆ ಸರ್ಕಾರ ಬೈಕ್ ಟ್ಯಾಕ್ಸಿಗಳ ನಿಯಮದ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಗೆ ತರಬೇಕು ಎನ್ನುವ ಆಗ್ರಹ ಕೂಡ ಮಾಡುತ್ತಾರೆ. ಏಕೆಂದರೆ ಇದೇ ಸಮಯವನ್ನು ಬಳಸಿಕೊಂಡು ಟ್ಯಾಕ್ಸಿ ಅಪ್ಲಿಕೇಷನ್ಸ್ ಹೆಚ್ಚಿನ ಹಣವನ್ನು ಪ್ರಯಾಣಿಕರಿಂದ ವಸೂಲಿ ಮಾಡುವ ಆತಂಕ ಕೂಡ ಇದೆ. ಹೀಗಾಗಿ ಸರ್ಕಾರವೇ ಇದಕ್ಕೆ ನಿಯಂತ್ರಣ ಹೇರಿದರೆ ಒಳ್ಳೆಯದು ಅಂತಿದ್ದಾರೆ ಬೆಂಗಳೂರಿನ ಪ್ರಯಾಣಿಕರು.

ಬೈಕ್ ಟ್ಯಾಕ್ಸಿ ನಿಯಮ ಜಾರಿಗೆ ಒತ್ತಾಯ
ಮತ್ತೊಂದು ಕಡೆ ಬೆಂಗಳೂರು ನಗರದಲ್ಲಿ ಮೆಟ್ರೋ ಜಾಲ ವಿಸ್ತರಣೆ ಆಗಿದ್ದು, 83 ನಿಲ್ದಾಣ ಇರುವ ನಮ್ಮ ಬೆಂಗಳೂರು ಮೆಟ್ರೋದಲ್ಲಿ 96 ಕಿಮೀ ಜಾಲ ವಿಸ್ತರಣೆ ಆಗಿದೆ. ಇನ್ನೂ 79 ಕಿಮೀ ಮಾರ್ಗವು ಕೆಲವೇ ವರ್ಷಗಳಲ್ಲಿ ಸಿದ್ಧವಾಗಲಿದೆ. ಹೀಗಿದ್ದಾಗ ಮೆಟ್ರೋ ನಿಲ್ದಾಣಗಳಿಗೆ ಪ್ರಯಾಣ ಮಾಡಲು ಜನ ಕೂಡ ಬೈಕ್ ಟ್ಯಾಕ್ಸಿ ಸೇವೆ ಮೊರೆ ಹೋಗುವುದು ಮಾಮೂಲು.
ಈ ಎಲ್ಲಾ ವಿಚಾರಗಳನ್ನು ಲೆಕ್ಕಹಾಕಿ ಮತ್ತು ಭವಿಷ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆ ಉತ್ತಮವಾಗಿ ಹಾಗೂ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ರೀತಿ ಇರಲು ಸರ್ಕಾರ ನಿಯಮಗಳನ್ನು ಜಾರಿಗೆ ತರಬೇಕು ಎಂಬ ಆಗ್ರಹ ಇದೀಗ ಪ್ರಯಾಣಿಕರಿಂದ ಕೇಳಿಬರುತ್ತಿದೆ. ಆದರೆ ಸರ್ಕಾರ ಇದನ್ನು ಯಾವ ರೀತಿಯಾಗಿ ಸ್ವೀಕಾರ ಮಾಡುತ್ತೆ? ಎಂಬುದು ಈಗ ಕುತೂಹಲದ ಪ್ರಶ್ನೆಯಾಗಿದೆ.












Click it and Unblock the Notifications