ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಚ್ 27 ರಿಂದ ಏ. 4ರ ಅವಧಿಯಲ್ಲಿ ಬ್ಯಾಂಕ್ 2 ದಿನ ಮಾತ್ರ ಕೆಲಸ

|
Google Oneindia Kannada News

ನವದೆಹಲಿ, ಮಾರ್ಚ್ 21: ಮಾರ್ಚ್ ತಿಂಗಳಲ್ಲಿ ಬ್ಯಾಂಕ್ ನೌಕರರ ಒಕ್ಕೂಟವು ನಡೆಸಿದ ಮುಷ್ಕರದಿಂದಾಗಿ ನಾಲ್ಕು ದಿನ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಈಗ ಮಾರ್ಚ್ 27 ಏಪ್ರಿಲ್ 4 ರ ಅವಧಿಯಲ್ಲಿ ಬ್ಯಾಂಕ್ ವ್ಯವಹಾರ ಕಷ್ಟವಾಗಲಿದೆ.

ಮಾರ್ಚ್ 27 ಏಪ್ರಿಲ್ 4 ರ ಅವಧಿಯಲ್ಲಿ ಬ್ಯಾಂಕ್ ವ್ಯವಹಾರ ಕಷ್ಟ. ಈ ಅವಧಿಯಲ್ಲಿ ಕೇವಲ 2 ದಿನಗಳು ಮಾತ್ರ ಬ್ಯಾಂಕ್ ಕಾರ್ಯ ನಿರ್ವಹಿಸಲಿದೆ ಎಂದು ಬ್ಯಾಂಕ್ ರಜಾ ದಿನಗಳ ಪಟ್ಟಿಯಿಂದ ಹೇಳಬಹುದು. ಅದರಲ್ಲೂ ಉತ್ತರ ಭಾರತದಲ್ಲಿ ಸಾಲು ಸಾಲು ರಜೆ ಮಜಾ ಸಿಗಲಿದೆ.

ಮಾರ್ಚ್ 2021 ರಲ್ಲಿ ಎಷ್ಟು ದಿನ ಬ್ಯಾಂಕ್‌ಗಳಿಗೆ ರಜಾದಿನ?ಮಾರ್ಚ್ 2021 ರಲ್ಲಿ ಎಷ್ಟು ದಿನ ಬ್ಯಾಂಕ್‌ಗಳಿಗೆ ರಜಾದಿನ?

ಎಲ್ಲಾ ಭಾನುವಾರ, 2 ಮತ್ತು 4ನೇ ಶನಿವಾರ ಸರ್ಕಾರಿ ರಜೆ ಇರುತ್ತದೆ. ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಬ್ಯಾಂಕ್ ರಜಾದಿನವಿರಲಿದೆ.

Banks Will Open only for two days From March 27 to April 4

ಮಾರ್ಚ್ 27 ನಾಲ್ಕನೇ ಶನಿವಾರ ಎಂದು ರಜೆ ಇರಲಿದೆ. ಮಾರ್ಚ್ 28 ಭಾನುವಾರದ ರಜೆ, ಮಾರ್ಚ್ 29, 30 ರಂದು ಹೋಳಿ ಹಬ್ಬದ ಅಂಗವಾಗಿ ದೇಶದೆಲ್ಲೆಡೆ ರಜೆ ಸಿಗಲಿದೆ. ಮಾರ್ಚ್ 30ರಂದು ಬಿಹಾರ ರಾಜ್ಯ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಆ ರಾಜ್ಯದ ಬ್ಯಾಂಕುಗಳಿಗೆ ಅಂದು ರಜೆ ಇರಲಿದೆ.ಮಾರ್ಚ್ 31 ಆರ್ಥಿಕ ವರ್ಷದ ಕೊನೆ ದಿನದಂದು ಬ್ಯಾಂಕ್ ಜೊತೆಗೆ ಗ್ರಾಹಕರು ವ್ಯವಹರಿಸಲು ಆಸ್ಪದವಿರುವುದಿಲ್ಲ. ಏಪ್ರಿಲ್ 1 ರಂದು ಬ್ಯಾಂಕ್ ಅಕೌಂಟಿಂಗ್ ಕಾರ್ಯ ನಡೆಯಲಿದೆ, ಏಪ್ರಿಲ್ 2ರಂದು ಗುಡ್ ಫ್ರೈಡೇ ಅಂಗವಾಗಿ ರಜೆ ಘೋಷಿಸಲಾಗಿದೆ. ಏಪ್ರಿಲ್ 3ರಂದು ಬ್ಯಾಂಕ್ ಓಪನ್ ಇರಲಿದೆ. ಏಪ್ರಿಲ್ 4 ರಂದು ಭಾನುವಾರದ ರಜೆ ಸಿಗಲಿದೆ.

ಗಣರಾಜ್ಯದಿನ (ಜನವರಿ 26), ಸ್ವಾತಂತ್ರ್ಯೋತ್ಸವ ದಿನ (ಆಗಸ್ಟ್ 15) ಹಾಗೂ ಗಾಂಧಿ ಜಯಂತಿ (ಅಕ್ಟೋಬರ್ 02) ದಿನದಂದು ಸರ್ಕಾರಿಸ್ವಾಮ್ಯದ ಕಚೇರಿ, ಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಗೂ ರಜಾ ದಿನವಿರಲಿದೆ. ಅಸ್ಸಾಂನ ಬಿಹು, ಕೇರಳ ಓಣಂ ಸೇರಿದಂತೆ ಪ್ರಾದೇಶಿಕ ಹಬ್ಬಗಳ ದಿನದಂದು ಆಯಾ ರಾಜ್ಯಗಳಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ.

English summary
Bank Holiday Alert: Banks Will Remain Closed on These Days From March 27 to April 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X