ಎಚ್ಚರಿಕೆ! 32 ಲಕ್ಷ ಡೆಬಿಟ್ ಕಾರ್ಡ್ ಗಳಿಗೆ ಅಪಾಯ

ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಇಂಡಿಯಾ ಸೇರಿದಂತೆ ಖಾಸಗಿ ಬ್ಯಾಂಕುಗಳ ಡೆಬಿಟ್ ಕಾರ್ಡ್ ಗಳಿಗೆ ಭಾರಿ ಅಪಾಯ ಎದುರಾಗಿದೆ.

ಬೆಂಗಳೂರು, ಅಕ್ಟೋಬರ್ 20: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಇಂಡಿಯಾ ಸೇರಿದಂತೆ ಖಾಸಗಿ ಬ್ಯಾಂಕುಗಳ ಡೆಬಿಟ್ ಕಾರ್ಡ್ ಗಳಿಗೆ ಭಾರಿ ಅಪಾಯ ಎದುರಾಗಿದೆ. ಸುಮಾರು 32 ಲಕ್ಷ ಗ್ರಾಹಕರ ಡೆಬಿಟ್ ಕಾರ್ಡ್ ಗಳ ಚಾಲನೆ ಸ್ಥಗಿತಗೊಳಿಸಲು ಬ್ಯಾಂಕ್ ಗಳು ನಿರ್ಧರಿಸಿವೆ.

ಅನೇಕ ಬ್ಯಾಂಕ್ ಗಳು ಡೆಬಿಟ್ ಕಾರ್ಡ್ ಗಳನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿವೆ. ಎಟಿಎಂ ಜಾಲದಲ್ಲಿ ಹಣಕಾಸಿನ ಸೇವೆ ನೀಡುವ ಪ್ರಕ್ರಿಯೆಯಲ್ಲಿ ಉಂಟಾಗಿರುವ ಪ್ರಮಾದದಿಂದ ಈ ಮಟ್ಟದ ದೊಡ್ಡ ಅಪಾಯ ಎದುರಾಗಿದೆ. [ಎಸ್ ಬಿಐನಲ್ಲಿ 412 ಹುದ್ದೆಗಳಿವೆ ಕೂಡಲೇ ಅರ್ಜಿ ಹಾಕಿ]

Banks recall over 32 lakh debit cards due to security breach

ಎಸ್ ಬಿಐ ಸುಮಾರು 6 ಲಕ್ಷ ಡೆಬಿಟ್ ಕಾರ್ಡ್ ಗಳನ್ನು ಹಿಂದಕ್ಕೆ ಪಡೆಯುತ್ತಿದೆ. ಬ್ಯಾಂಕ್ ಆಫ್ ಬರೋಡಾ, ಐಡಿಬಿಐ, ಸೆಂಟ್ರಲ್ ಬ್ಯಾಂಕ್, ಆಂಧ್ರ ಬ್ಯಾಂಕ್ ಗಳು ಈಗಾಗಲೇ ತನ್ನ ಗ್ರಾಹಕರ ಬಳಿ ಇದ್ದ ಡೆಬಿಟ್ ಕಾರ್ಡ್ ಗಳನ್ನು ಬದಲಾಯಿಸಿವೆ.[ಆರು ಲಕ್ಷ ಎಸ್ ಬಿ ಐ ಡೆಬಿಟ್ ಕಾರ್ಡ್ ಸ್ಥಗಿತ]

ಐಸಿಐಸಿಐ, ಎಚ್ ಡಿ ಎಫ್ ಸಿ ಹಾಗೂ ಯೆಸ್ ಬ್ಯಾಂಕ್ ಗಳು ತನ್ನ ಗ್ರಾಹಕರಿಗೆ ಎಟಿಎಂ ಪಿ ನಂಬರ್ ಬದಲಾಯಿಸಲು ಸೂಚಿಸಿವೆ. ಎಚ್ ಡಿಎಫ್ ಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ಎಚ್ ಡಿಎಫ್ ಸಿ ಎಟಿಎಂ ನಲ್ಲಿ ಮಾತ್ರ ವ್ಯವಹರಿಸಲು ನಿರ್ದೇಶಿಸಿದೆ.

ಸುರಕ್ಷಿತ ನಿಯಮಗಳನ್ನು ಮೀರಿ ಗ್ರಾಹಕರು ಎಟಿಎಂನಲ್ಲಿ ಡೆಬಿಟ್‌ ಕಾರ್ಡ್‌ಗಳನ್ನು ಬಳಸುತ್ತಿದ್ದಂತೆಯೇ ಅವುಗಳ ಪಿನ್‌ ಇತ್ಯಾದಿ ರಹಸ್ಯ ಮಾಹಿತಿಗಳನ್ನು ಕದಿಯುವ ಮಾಲ್‌ವೇರ್‌ ತಂತ್ರಾಂಶ ತನ್ನಿಂತಾನೇ ಸಕ್ರಿಯವಾಗುವುದನ್ನು ಶಂಕಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+