ಮಾರ್ಚ್ ಅಂತ್ಯದೊಳಗೆ 70,000 ಕೋಟಿ ರೂ. ವಸೂಲಿ: ಜೇಟ್ಲಿ
ನವದೆಹಲಿ, ಜನವರಿ 3: ಈ ವರ್ಷದ ಮಾರ್ಚ್ ಅಂತ್ಯದ ವೇಳೆಗೆ ವಾಣಿಜ್ಯ ಬ್ಯಾಂಕುಗಳು 70 ಸಾವಿರ ಕೋಟಿ ರೂ. ಕೆಟ್ಟಸಾಲವನ್ನು ವಸೂಲಿ ಮಾಡಲಿವೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
12 ಬೃಹತ್ ಸಾಲ ವಂಚನೆ ಪ್ರಕರಣಗಳ ಮೂಲಕ 70,000 ಕೋಟಿ ರೂ. ಮೊತ್ತದ ಸಾಲವನ್ನು ಮರಳಿ ವಸೂಲಿ ಮಾಡುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
ಭೂಷಣ್ ಪವರ್ ಮತ್ತು ಸ್ಟೀಲ್ ಲಿಮಿಟೆಡ್, ಎಸ್ಸಾರ್ ಸ್ಟೀಲ್ ಇಂಡಿಯಾ ಲಿಮಿಟೆಡ್‌ನಂತಹ ದೊಡ್ಡ ಪ್ರಕರಣಗಳು ನಿರ್ಣಯ ಕೈಗೊಳ್ಳುವ ಹಂತದಲ್ಲಿವೆ. ಇದು ಈ ಹಣಕಾಸು ವರ್ಷದಲ್ಲಿ ಪರಿಹಾರವಾಗುವ ನಿರೀಕ್ಷೆಯಿದೆ ಎಂದು ಜೇಟ್ಲಿ ತಮ್ಮ ಫೇಸ್ ಬುಕ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಸಾಲದಾತ ಬ್ಯಾಂಕುಗಳು ಇದುವರೆಗೂ 66 ಪ್ರಕರಣಗಳಲ್ಲಿ 80 ಸಾವಿರ ಕೋಟಿ ರೂ. ಕೆಟ್ಟಸಾಲವನ್ನು ವಸೂಲಿ ಮಾಡಿವೆ ಎಂದು ಜೇಟ್ಲಿ ತಿಳಿಸಿದ್ದಾರೆ.












Click it and Unblock the Notifications