ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Bank Holidays in December 2022; ಡಿಸೆಂಬರ್‌ ತಿಂಗಳಿನಲ್ಲಿ 14 ದಿನಗಳ ಕಾಲ ಬ್ಯಾಂಕ್‌ಗೆ ರಜೆ

|
Google Oneindia Kannada News

ಬೆಂಗಳೂರು, ನವೆಂಬರ್ 28; ನವೆಂಬರ್ ತಿಂಗಳು ಮುಗಿಯುತ್ತಾ ಬಂದಿದೆ. 2022ರ ಕೊನೆಯ ತಿಂಗಳು ಡಿಸೆಂಬರ್ ಆರಂಭವಾಗಲಿದೆ. ಈ ತಿಂಗಳಿನಲ್ಲಿ ಬ್ಯಾಂಕ್ ಕೆಲಸಗಳ ಬಗ್ಗೆ ಯೋಚಿಸುತ್ತಿರುವವರಿಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಬ್ಯಾಂಕ್ ಕೆಲಸಗಳಿಗೆ ಹೋಗುವವರು ಡಿಸೆಂಬರ್ ತಿಂಗಳಿನಲ್ಲಿ ಯಾವ-ಯಾವ ರಜೆ ಇದೆ ಎಂದು ತಿಳಿಯುವುದು ಅಗತ್ಯ. ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಗ್ ಉಪಯೋಗ ಮಾಡುವವರು ಚಿಂತೆ ಇಲ್ಲದೇ ಇರಬಹುದು.

Holidays List 2023 : ಹೊಸ ವರ್ಷದಲ್ಲಿ ಯಾವಾಗ ರಜೆ ತಿಳಿಯಿರಿ Holidays List 2023 : ಹೊಸ ವರ್ಷದಲ್ಲಿ ಯಾವಾಗ ರಜೆ ತಿಳಿಯಿರಿ

ಡಿಸೆಂಬರ್‌ ತಿಂಗಳಿನಲ್ಲಿ 14 ದಿನಗಳ ಕಾಲ ಬ್ಯಾಂಕ್‌ಗೆ ರಜೆ ಇರುತ್ತದೆ. ಇದರಲ್ಲಿ 2ನೇ ಮತ್ತು 4ನೇ ಶನಿವಾರ, ಭಾನುವಾರ ಸೇರಿದಂತೆ ಎಲ್ಲಾ ರಜೆಗಳು ಸೇರಿವೆ. ಬ್ಯಾಂಕ್‌ಗಳಿಗೆ ಹೋಗುವ ಮುನ್ನ ಇದನ್ನು ತಿಳಿಯಿರಿ.

ಟೀಚರ್ಸ್‌ ಕೋ-ಆಪರೇಟಿವ್ ಬ್ಯಾಂಕ್‌ ನೇಮಕಾತಿ, ಅರ್ಜಿ ಹಾಕಿ ಟೀಚರ್ಸ್‌ ಕೋ-ಆಪರೇಟಿವ್ ಬ್ಯಾಂಕ್‌ ನೇಮಕಾತಿ, ಅರ್ಜಿ ಹಾಕಿ

ಬ್ಯಾಂಕ್ ರಜೆಗಳು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗುತ್ತದೆ. ಗೋವಾ ಲಿಬರೇಷನ್ ಡೇ, ಕ್ರಿಸ್‌ಮಸ್, ಗುರುಗೋವಿಂದ್ ಸಿಂಗ್ ಜಯಂತಿಗೆ ಕೆಲವು ಕಡೆ ರಜೆ ಇರುತ್ತದೆ. ಎಲ್ಲಾ ರಾಜ್ಯಗಳಲ್ಲಿಯೂ ರಜೆ ಇರುವುದಿಲ್ಲ.

ಎಸ್‌ಬಿಐ ನೇಮಕಾತಿ; 65 ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಿ ಎಸ್‌ಬಿಐ ನೇಮಕಾತಿ; 65 ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಿ

ಡಿಸೆಂಬರ್ 3, 4

ಡಿಸೆಂಬರ್ 3, 4

ಡಿಸೆಂಬರ್ 3; ಡಿಸೆಂಬರ್ 3ರ ಶನಿವಾರ ಪಂಜಾಬ್, ಗೋವಾ ಸೇರಿದಂತೆ ಕೆಲವು ರಾಜ್ಯಗಳ ಬ್ಯಾಂಕ್‌ಗಳಿಗೆ ರಜೆ ಇದೆ. ಡಿಸೆಂಬರ್ 4 ಭಾನುವಾರವಾಗಿದ್ದು, ಬ್ಯಾಂಕ್ ಎಲ್ಲಾ ಕಡೆ ರಜೆ ಇರುತ್ತದೆ.

ಡಿಸೆಂಬರ್ 10; ಡಿಸೆಂಬರ್ 10ರಂದು ಎರಡನೇ ಶನಿವಾರದ ರಜೆ ಎಲ್ಲಾ ಕಡೆ ಬ್ಯಾಂಕ್‌ಗಳಿಗೆ ಇರುತ್ತದೆ. ಡಿಸೆಂಬರ್ 11 ಭಾನುವಾರ ರಜೆ ಇದೆ.

ಡಿಸೆಂಬರ್ 12 ಮತ್ತು 18, 19

ಡಿಸೆಂಬರ್ 12 ಮತ್ತು 18, 19

ಡಿಸೆಂಬರ್ 12ರಂದು ಬುಡಕಟ್ಟು ನಾಯಕ ಸಾವನ್ನಪ್ಪಿದ ದಿನದ ಸ್ಮರಣಾರ್ಥ ಮೇಘಾಲಯ ಮತ್ತು ಶಿಲ್ಲಾಂಗ್‌ನಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

ಡಿಸೆಂಬರ್ 18ರಂದು ತಿಂಗಳ 3ನೇ ಭಾನುವಾರವಾಗಿದ್ದು, ಎಲ್ಲಾ ಕಡೆ ಬ್ಯಾಂಕ್ ಮುಚ್ಚಿರುತ್ತದೆ.

ಡಿಸೆಂಬರ್ 19ರಂದು ಗೋವಾದ ಪಣಜಿಯಲ್ಲಿ ಗೋವಾ ವಿಮೋಚನಾ ದಿನದ ಅಂಗವಾಗಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

ಡಿಸೆಂಬರ್ 24, 25, 26

ಡಿಸೆಂಬರ್ 24, 25, 26

ಕ್ರಿಸ್‌ಮಸ್ ಈವ್ ಪ್ರಯುಕ್ತ ಡಿಸೆಂಬರ್ 24ರಂದು ಶಿಲ್ಲಾಂಗ್ ಮತ್ತು ಮೇಘಾಲಯದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಡಿಸೆಂಬರ್‌ 24 4ನೇ ಶನಿವಾರವಾಗಿದ್ದು, ದೇಶದ ಎಲ್ಲಾ ರಾಜ್ಯಗಳಲ್ಲಿ ಸಹ ರಜೆ ಇರುತ್ತದೆ.

ಡಿಸೆಂಬರ್ 25 ಭಾನುವಾರ, ಕ್ರಿಸ್‌ಮಸ್ ಅಂಗವಾಗಿ ಬ್ಯಾಂಕ್‌ಗಳು ಮುಚ್ಚಿರುತ್ತದೆ. ಡಿಸೆಂಬರ್ 26 ಮಿಜೋರಾಂ, ಸಿಕ್ಕಿಂ, ಶಿಲ್ಲಾಂಗ್, ಮೇಘಾಲಯದಲ್ಲಿ ಕ್ರಿಸ್‌ಮಸ್ ಸಂಭ್ರಮದ ಕಾರಣ ಬ್ಯಾಂಕ್ ತೆರೆದಿರುವುದಿಲ್ಲ.

ಡಿಸೆಂಬರ್ 29 ರಿಂದ 31 ರಜೆ

ಡಿಸೆಂಬರ್ 29 ರಿಂದ 31 ರಜೆ

ಡಿಸೆಂಬರ್ 29ರಂದು ಗುರು ಗೋವಿಂದ ಸಿಂಗ್ ಜನ್ಮದಿನದ ಪ್ರಯುಕ್ತ ಚಂಡೀಗಢ್‌ನಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಡಿಸೆಂಬರ್ 30ರಂದು ಶಿಲ್ಲಾಂಗ್‌ನಲ್ಲಿ ಬ್ಯಾಂಕುಗಳು ತೆರೆದಿರುವುದಿಲ್ಲ. ಡಿಸೆಂಬರ್ 31ರಂದು ಹೊಸ ವರ್ಷದ ಈವ್ ಪ್ರಯುಕ್ತ ಮಿಜೋರಾಂನಲ್ಲಿ ಬ್ಯಾಂಕ್‌ಗಳಿಗೆ ರಜೆ ಘೋಷಣೆ ಮಾಡಲಾಗಿದೆ.

English summary
Banks will be closed for up to 14 days in December. Here are the list of Bank holidays in the month of December.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X