ಒರಾಯನ್ ಮಾಲ್‌ನಲ್ಲಿ ಹೊಸ ಫ್ಯಾಷನ್ ಲೋಕ ಅನಾವರಣ

Subscribe to Oneindia Kannada

ಬೆಂಗಳೂರು, ಡಿಸೆಂಬರ್, 10 : ಚಳಿಗಾಲದ ಈ ಸಂದರ್ಭದಲ್ಲಿ ಒರಾಯನ್ ಮಾಲ್ ಗೆ ಒಮ್ಮೆ ಭೇಟಿ ನೀಡಲೇ ಬೇಕು. ಡಿಸೆಂಬರ್ 10, 11, 12 ರಂದು ಬ್ರಿಗೇಡ್ ಗೇಟ್ ವೇನಲ್ಲಿನ ಒರಾಯನ್ ಮಾಲ್ ನ ಲೇಕ್ ಸೈಡ್ ನಲ್ಲಿ ಪ್ರಸಿದ್ಧ ಫ್ಯಾಷನ್ ವೀಕ್ ನಡೆಯಲಿದೆ.

ಅಂತಾರಾಷ್ಟ್ರೀಯ ಹಾಗೂ ಭಾರತೀಯ ಬ್ರಾಂಡ್ ಗಳ ಹೊಚ್ಚಹೊಸ ಸಂಗ್ರಹ ನಿಮಗೆ ಸಿಗಲಿದೆ. ಪ್ರದರ್ಶನನ್ನು, ಫ್ಯಾಷನ್ ಶೋ ವನ್ನು ಕಣ್ಣು ತುಂಬಿಕೊಳ್ಳುವುದಲ್ಲದೇ ನಿಮಗೆ ಬೇಕಾದ ವಸ್ತುಗಳನ್ನು ಮನಮೆಚ್ಚುವ ದರದಲ್ಲಿ ಖರೀದಿ ಮಾಡಲು ಸಾಧ್ಯವಿದೆ.[ಬೆಂಗಳೂರಲ್ಲಿ ಡಿಸೆಂಬರ್ 20 ರಂದು ಕಾರ್ ಫ್ರೀ ಡೇ ಇಲ್ಲ]

Bangalore’s Biggest, In-Mall Fashion Extravaganza is back

ಒರಾಯನ್ ಫ್ಯಾಶನ್ ವೀಕ್ ನಲ್ಲಿ ಇಲೆ, ಆರೋ, ಸೀಲಿಯೋ, ಫ್ಲೈಯಿಂಗ್ ಮೆಶಿನ್, ಎಡ್ ಹಾರ್ಡ್ಲೀ, ರೇಮಂಡ್, ಸೋಚ್, ಸ್ವರೋವ್ ಸ್ಕಿ, ಪ್ರೀಮಿಯಂ ಫ್ಯಾಶನ್, ದಿ ಚಿಲ್ಡ್ರನ್ಸ್ ಪ್ಲೇಸ್, ಪೆಪೆ ಜೀನ್ಸ್ ಮತ್ತು ರಿತು ಕುಮಾರ್ ನಂತಹ ಅಗ್ರಗಣ್ಯ ಬ್ರಾಂಡ್ ಗಳ ಹೊಸ ಟ್ರೆಂಡ್ ಗೆ ಸಂಬಂಧಿಸಿದ ಎಲ್ಲ ವಸ್ತುಗಳು ಒಂದೇ ಕಡೆ ನಿಮ್ಮ ಕೈಗೆ ಸಿಗುತ್ತವೆ.

Bangalore’s Biggest, In-Mall Fashion Extravaganza is back

ಫ್ಯಾಷನ್ ಶೋಸಹ ನಡೆಯಲಿದ್ದು ಹೊಸ ಟ್ರೆಂಡ್ ನ ಕಲ್ಪನೆಯನ್ನು ನೀವು ಲೆಕ್ಕ ಹಾಕಿಕೊಳ್ಳಬಹುದು. ಬಾಲಿವುಡ್ ನಟಿ ಮತ್ತು ಫ್ಯಾಶನ್ ಐಕಾನ್ ಚಿತ್ರಾಂಗದಾ ಸೇನ್ ಅವರು ಡಿಸೆಂಬರ್ 12 ರಂದು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಚಂದನವನದ ಸಂಜನಾ ಮತ್ತು ಕೃತಿ ಕರಬಂಧ ಅವರು ಡಿಸೆಂಬರ್ 10 ಮತ್ತು 11ನೇ ಡಿಸೆಂಬರ್ ನಂದು ಪ್ರದರ್ಶನದ ಕಳೆ ಹೆಚ್ಚಿಸಲಿದ್ದಾರೆ.[ಒರಾಯನ್ ಮಾಲ್ ನಲ್ಲಿ ತೆರೆದುಕೊಂಡ ಕಲಾಲೋಕ]

ಈ ಬಗ್ಗೆ ಮಾಹಿತಿ ನೀಡಿದ ಬ್ರಿಗೇಡ್ ಎಂಟರ್ ಪ್ರೈಸಸ್ ಸಿಇಒ ವಿಶಾಲ್ ಮಿರ್ಚಂದಾನಿ, ಹಿಂದೆಂದಿಗಿಂತಲೂ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಎಲ್ಲಾ ಮೂರು ದಿನಗಳ ಕಾರ್ಯಕ್ರಮಗಳು ಲೇಕ್ ಸೈಡ್ ನಲ್ಲೇ ನಡೆಯಲಿದೆ. ಫ್ಯಾಷನ್, ಗ್ಲಾಮರ್ ಮತ್ತು ಮೋಜನ್ನು ಒಟ್ಟಾಗಿ ಒದಗಿಸುವ ಭರವಸೆಯನ್ನು ಒರಾಯನ್ ಫ್ಯಾಶನ್ ವೀಕ್ ನೀಡಲಿದೆ' ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru: Orion Fashion Week is here and an array of iconic International and Indian brands will showcase their latest collections on 10th, 11th and 12th December, 2015, at the lakeside, Orion Mall at Brigade Gateway. Now in Its fourth edition, this style extravaganza continues to be a celebration of glitz and glamour and a much-awaited event on the fashion calendar. Orion Fashion Week is a class apart, highlighting the newest fashion trends by world-leading brands such as, Elle, Arrow,Celio, Flying Machine, Ed Hardy, Raymond, Soch, Swarovski.
Please Wait while comments are loading...