ಚೀನಾ, ಮ್ಯಾನ್ಮಾರ್, ಬಾಂಗ್ಲಾಕ್ಕೆ ರಾಮದೇವ್ ಪತಂಜಲಿ ಉತ್ಪನ್ನ!

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 17: ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆ ಇದೀಗ ಉತ್ಪನ್ನಗಳನ್ನು ಚೀನಾ, ಮ್ಯಾನ್ಮಾರ್, ಬಾಂಗ್ಲಾದೇಶಗಳಿಗೆ ರಫ್ತು ಮಾಡಲು ಮುಂದಾಗಿದೆ. ಜಾರ್ಖಂಡ್ ರಾಜ್ಯದ ಸಾಹಿಬ್​ಗಂಜ್ ಜಿಲ್ಲೆಯಲ್ಲಿ ಪತಂಜಲಿ ಉತ್ಪಾದನಾ ಬೃಹತ್ ಘಟಕ ನಿರ್ವಿುಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಪತಂಜಲಿ ಸಂಸ್ಥೆ ವಕ್ತಾರರು ಹೇಳಿದ್ದಾರೆ.

ನೇಪಾಳ ಹಾಗೂ ಬಾಂಗ್ಲಾದೇಶದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಿರುವ ಪತಂಜಲಿ, ಮಧ್ಯ ಏಷ್ಯಾದ ಸೌದಿ ಅರೇಬಿಯಾದಲ್ಲೂ ಉತ್ಪನ್ನಗಳಿಗೆ ಭಾರಿ ಬೇಡಿಕೆ ಇದೆ ಎಂದು ತಿಳಿಸಿದೆ.

Baba Ramdev wants to take Patanjali products to China

ಹರಿದ್ವಾರದಲ್ಲಿರುವ ಉತ್ಪಾದನಾ ಘಟಕಕ್ಕಿಂತ ದೊಡ್ಡದಾದ 40 ಲಕ್ಷ ಚದರ ಅಡಿ ವಿಸ್ತೀರ್ಣದ ಘಟಕವನ್ನು ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಮಿಹಾನ್ ​ದಲ್ಲಿ ಆರಂಭಿಸಲು ಪತಂಜಲಿ ಸಂಸ್ಥೆ ಯೋಜನೆ ರೂಪಿಸಿದೆ.

ಉತ್ಪನ್ನಗಳನ್ನು ರಸ್ತೆ, ಜಲ ಹಾಗೂ ವಿಮಾನ ಸಾರಿಗೆ ಮೂಲಕ ನೆರೆ ರಾಷ್ಟ್ರಗಳಿಗೆ ಸಾಗಿಸಲು ಅನುಕೂಲವಾಗುವ ದೃಷ್ಟಿಯಿಂದ ಈ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಜಾರ್ಖಂಡ್ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಈ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೂ ಮನವಿ ಸಲ್ಲಿಸಲಾಗಿದೆ ಎಂದು ವಕ್ತಾರರು ಹೇಳಿದ್ದಾರೆ.

ಯುನೈಟೆಡ್ ಅರಬ್ ಎಮಿರೇಟ್ಸ್, ಇರಾನ್ ಹಾಗೂ ಅಜರ್ ಬೈಜಾನ್ ಗಳಿಗೂ ಪತಂಜಲಿ ಉತ್ಪನ್ನಗಳನ್ನು ವಿಸ್ತರಿಸಲು ಪತಂಜಲಿ ಸಂಸ್ಥೆ ಮುಂದಾಗಿದೆ. 2016ರ ಮಾರ್ಚ್ 31 ರ ಎಣಿಕೆಯಂತೆ 5,000 ಕೋಟಿ ರು ಆದಾಯವನ್ನು ಗಳಿಸಿದೆ. ಪತಂಜಲಿ ಉತ್ಪನ್ನಗಳನ್ನು ರಫ್ತು ಮಾಡುವ ಬಗ್ಗೆ ಭಾರತೀಯ ಆಂತರಿಕ ಜಲಮಾರ್ಗಗಳ ಪ್ರಾಧಿಕಾರ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಮಾತುಕತೆ ಪ್ರಗತಿ ಹಂತದಲ್ಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
According to the Patanjali spokesperson, the company has, in the recent past, received offers from countries like the United Arab Emirates, Iran and Azerbaijan to retail its products in those markets but it hasn’t done so. Baba Ramdev wants to take Patanjali products to China
Please Wait while comments are loading...