ಜೆಪಿ ನಗರದಲ್ಲಿ ಎಥರ್ ಎನರ್ಜಿ ಇ ಸ್ಕೂಟರ್ ಟೆಸ್ಟ್ ರೈಡ್ ಮಾಡಿ!
ಬೆಂಗಳೂರು, ಜೂನ್ 28: ಭಾರತದ ಮೊದಲ ಇಂಟೆಲಿಜೆಂಟ್ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಕ ಎಥರ್ ಎನರ್ಜಿ ಬೆಂಗಳೂರಿನ ಗ್ರಾಹಕರ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ತನ್ನ ಎರಡನೆಯ ಎಕ್ಸ್‌ಪೀರಿಯೆನ್ಸ್ ಸೆಂಟರ್-ಎಥರ್ ಸ್ಪೇಸ್ ಅನ್ನು ಜೆಪಿ ನಗರದಲ್ಲಿ ಉದ್ಘಾಟಿಸಿದೆ.
ಇದು ಎಥರ್ ಹಲವು ಎಕ್ಸ್‌ಪೀರಿಯೆನ್ಸ್ ಸೆಂಟರ್‌ಗಳನ್ನು ಕರ್ನಾಟಕದ ಮುಂಚೂಣಿಯ ಆಟೊ ರೀಟೇಲರ್ ಬಿಐಎ ವೆಂಚರ್ಸ್ ಸಹಯೋಗದಲ್ಲಿ ಪರಿಚಯಿಸಿದೆ. ಭಾರತದ ಅತ್ಯಂತ ತ್ವರಿತ ಹಾಗೂ ಸ್ಮಾರ್ಟ್ ಸ್ಕೂಟರ್ ಎಥರ್ 450ಎಕ್ಸ್, ಎಥರ್ 450 ಪ್ಲಸ್‍ನೊಂದಿಗೆ ಎಥರ್ ಸ್ಪೇಸ್‍ನಲ್ಲಿ ಟೆಸ್ಟ್ ರೈಡ್ ಮತ್ತು ಕೊಳ್ಳಲು ಲಭ್ಯ.
ಎಥರ್ ಎನರ್ಜಿ ಜನವರಿ 2021ರಿಂದಲೂ ಸುಮಾರು 30 ಪಟ್ಟು ಬೇಡಿಕೆಯಲ್ಲಿ ಹೆಚ್ಚಳ ಕಂಡಿದ್ದು ತನ್ನ ಬಾಗಿಲುಗಳನ್ನು ಎರಡನೆಯ ಎಕ್ಸ್‌ಪೀರಿಯೆನ್ಸ್ ಸೆಂಟರ್ ತೆರೆಯುತ್ತಿದ್ದು ದಕ್ಷಿಣ ಬೆಂಗಳೂರಿನ ಗ್ರಾಹಕರು ಈಗ ಜೆ.ಪಿ.ನಗರದಿಂದ 40ಎಕ್ಸ್ ಟೆಸ್ಟ್ ರೈಡ್ ಮಾಡಬಹುದು.
ಕಳೆದ ಕೆಲ ವಾರಗಳಲ್ಲಿ ಫೇಮ್ 2 ರಿವಿಷನ್‍ಗಳಿಂದ ಶೇ.50ರಷ್ಟು ಸಬ್ಸಿಡಿ ಹೆಚ್ಚಳದಿಂದ ಎಲ್ಲ ವಿದ್ಯುತ್‍ಚಾಲಿತ ದ್ವಿಚಕ್ರ ವಾಹನಗಳ ಬೆಲೆಗಳನ್ನು ಮತ್ತಷ್ಟು ಕಡಿಮೆ ಮಾಡಿದೆ. ಕರ್ನಾಟಕ ಸರ್ಕಾರವು ವಿದ್ಯುಚ್ಚಾಲಿತ ದ್ವಿಚಕ್ರ ವಾಹನಗಳಿಗೆ ನೋಂದಣಿ ಶುಲ್ಕ ಮತ್ತು ರಸ್ತೆ ತೆರಿಗೆಯನ್ನು ಮನ್ನಾ ಮಾಡಿದೆ.

ಎಥರ್ ಎನರ್ಜಿಯ ರವ್‍ನೀತ್ ಫೊಕೆಲಾ ಮಾತನಾಡಿ
ಎಥರ್ ಎನರ್ಜಿಯ ಚೀಫ್ ಬ್ಯುಸಿನೆಸ್ ಆಫೀಸರ್ ರವ್‍ನೀತ್ ಫೊಕೆಲಾ, ''ಬೆಂಗಳೂರಿನಲ್ಲಿ ನಾವು ಸ್ವೀಕರಿಸುತ್ತಿರುವ ಟೆಸ್ಟ್ ರೈಡ್ ಬೇಡಿಕೆಗಳು ಅಪಾರ ಪ್ರಮಾಣದಲ್ಲಿ ಹೆಚ್ಚಾಗಿವೆ. ಅದನ್ನು ಪೂರೈಸಲು ನಾವು ಬೆಂಗಳೂರಿನಲ್ಲಿ ನಮ್ಮ ಎರಡನೆಯ ಎಕ್ಸ್‌ಪೀರಿಯೆನ್ಸ್ ಸೆಂಟರ್ ತೆರೆಯುತ್ತಿದ್ದೇವೆ. ಅಲ್ಲದೆ ಫೇಮ್II ನೀತಿಯ ಹೊಸ ಪರಿಷ್ಕರಣೆಯಿಂದ ಇವಿ ಅಳವಡಿಕೆಯ ಪ್ರಮಾಣ ಹೆಚ್ಚಾಗಲಿದೆ ಮತ್ತು ನಾವು ಬೆಂಗಳೂರು ಹಾಗೂ ಹಲವು ನಗರಗಳಲ್ಲಿ ಹೆಚ್ಚು ಎಕ್ಸ್‌ಪೀರಿಯೆನ್ಸ್ ಸೆಂಟರ್‌ಗಳನ್ನು ತೆರೆಯುವ ನಿರೀಕ್ಷೆ ಹೊಂದಿದ್ದೇವೆ. ಬಿಐಎ ವೆಂಚರ್ಸ್ ಮಹತ್ತರ ಪಾಲುದಾರರಾಗಿದ್ದಾರೆ ಮತ್ತು ಎರಡನೆಯ ಎಕ್ಸ್‌ಪೀರಿಯೆನ್ಸ್ ಸೆಂಟರ್ ತೆರೆಯುವಲ್ಲಿ ಬೆಂಬಲಿಸುತ್ತಿದ್ದಾರೆ. ವಾಹನ ವಲಯದಲ್ಲಿ ಅವರ ಅನುಭವ ಮಹತ್ವಪೂರ್ಣವಾಗಿದೆ ಮತ್ತು ಅವರ ಉತ್ಸಾಹದಿಂದ ತಡ ಮಾಡದೆ ಶೋರೂಂ ತೆರೆಯಲು ಸಾಧ್ಯವಾಗಿದೆ,'' ಎಂದರು.

ಚಾರ್ಜಿಂಗ್ ಮೂಲಸೌಕರ್ಯ ನಿರ್ಮಾಣ
ಎಥರ್ ಎನರ್ಜಿ ಮಾರುಕಟ್ಟೆಗೆ ಬಿಡುಗಡೆಯ ಮುನ್ನವೇ ಚಾರ್ಜಿಂಗ್ ಮೂಲಸೌಕರ್ಯ ನಿರ್ಮಿಸಲು ಕೂಡಾ ಹೂಡಿಕೆ ಮಾಡುತ್ತಿರುವ ಕೆಲವೇ ಒಇಎಂಗಳಲ್ಲಿ ಒಂದಾಗಿದೆ. ಕಂಪನಿಯು ಈಗಾಗಲೇ 33 ಫಾಸ್ಟ್ ಚಾರ್ಜಿಂಗ್ ತಾಣಗಳಾದ ಎಥರ್ ಗ್ರಿಡ್ ಅನ್ನು ವೈಟ್‍ಫೀಲ್ಡ್, ಇಂದಿರಾನಗರ, ಜಯನಗರ, ಜೆಪಿ ನಗರ ಇತ್ಯಾದಿ ಕಡೆಗಳಲ್ಲಿ ಹೊಂದಿದೆ.
ಎಥರ್ ಎನರ್ಜಿಯಿಂದ 22 ನಗರಗಳಲ್ಲಿ 142 ಚಾರ್ಜಿಂಗ್ ಪಾಯಿಂಟ್‍ಗಳನ್ನು ಪ್ರಾರಂಭಿಸಲಾಗಿದ್ದು ಭಾರತದಲ್ಲಿ ಇವಿ ವಾಹನ ಮಾಲೀಕರಿಗೆ ಸುಲಭ ಮತ್ತು ವೇಗದ ಚಾರ್ಜಿಂಗ್ ಸಾಧ್ಯವಾಗಿಸುತ್ತದೆ. ಎಥರ್ ಎನರ್ಜಿ ಗ್ರಾಹಕರಿಗೆ ಅವರ ಹೋಮ್ ಚಾರ್ಜರ್‌ಗಳನ್ನು ಪ್ರಾರಂಭಿಸಲು ಕೂಡಾ ನೆರವಾಗುತ್ತದೆ ಮತ್ತು ನಗರದ 993 ಅಪಾರ್ಟ್‍ಮೆಂಟ್ ಸಂಕೀರ್ಣಗಳಲ್ಲಿ ಕಳೆದ 3 ವರ್ಷಗಳಲ್ಲಿ ಹೋಮ್ ಚಾರ್ಜರ್‌ಗಳನ್ನು ಅಳವಡಿಸಿದೆ.

ಬೆಂಗಳೂರಿನಲ್ಲಿ ಎಥರ್ 450 ಎಕ್ಸ್ ಬೆಲೆ
ಬೆಂಗಳೂರಿನಲ್ಲಿ ಎಥರ್ 450 ಎಕ್ಸ್‌ನ ಹೊಸ ಎಕ್ಸ್-ಶೋರೂಂ ದರ ರೂ.144,500 ಮತ್ತು ಎಥರ್ 450ಗೆ ರೂ.125,490 ಆಗಿದೆ. 125ಸಿಸಿ ಸ್ಕೂಟರ್‌ನ ಮಾಲೀಕತ್ವದ ಒಟ್ಟು ವೆಚ್ಚವನ್ನು ಪರಿಗಣಿಸಿದರೆ ಎಥರ್ 450ಎಕ್ಸ್ ಮತ್ತು ಎಥರ್ 450 ಪ್ಲಸ್ ಮಾಲೀಕರು ತನ್ನ ಹೂಡಿಕೆಯನ್ನು 18-24 ತಿಂಗಳಲ್ಲಿ ಹಿಂಪಡೆಯಬಹುದು ಮತ್ತು ನಂತರದ ವರ್ಷಗಳಲ್ಲಿ ಪ್ರತಿ ಕಿ.ಮೀ.ಗೆ ಸುಮಾರು 2ರೂ. ಉಳಿಸಬಹುದು.
Recommended Video

ಎಥರ್ 450ಎಕ್ಸ್ ಕುರಿತು
ಎಥರ್ 450ಎಕ್ಸ್ ತನ್ನ ವಿಭಾಗದಲ್ಲಿ ಅತ್ಯಂತ ತ್ವರಿತ ಮತ್ತು ಸ್ಮಾರ್ಟ್ ಸ್ಕೂಟರ್‍ಗಳಲ್ಲಿ ಒಂದಾಗಿದ್ದು ನಾಲ್ಕು ಬಣ್ಣಗಳು- ಕಂದು, ಹಸಿರು ಮತ್ತು ಬಿಳಿಯೊಂದಿಗೆ ಸೀಮಿತ ಆವೃತ್ತಿಯ ಸೀರೀಸ್ 1 ಇವೆ. ಈ ಸ್ಕೂಟರ್ 6ಕೆವಿ ಪಿಎಂಎಸ್‍ಎಂ ಮೋಟಾರ್‌ನಿಂದ ಸನ್ನದ್ಧವಾಗಿದ್ದು 2.9ಕೆಡಬ್ಲ್ಯೂಎಚ್ ಲಿಥಿಯಂ-ಅಯಾನ್ ಬ್ಯಾಟರಿ ಹೊಂದಿದ್ದು 4 ರೈಡಿಂಗ್ ಮೋಡ್‍ಗಳೊಂದಿಗೆ ಬಂದಿದೆ. ಇಕೊ, ರೈಡ್ ಮತ್ತು ಸ್ಪೋರ್ಟ್‍ನೊಂದಿಗೆ ಎಥರ್ ಎನರ್ಜಿ ಹೊಸ ಹೈ ಪರ್ಫಾರ್ಮೆನ್ಸ್ ಮೋಡ್ ಪರಿಚಯಿಸಿದೆ. `ವಾರ್ಪ್' ಎಥರ್ 450ಎಕ್ಸ್ ವಾರ್ಪ್ ಮೋಡ್‍ನಲ್ಲಿ ಕೇವಲ 3.3ಸೆಕೆಂಡಿನಲ್ಲಿ ಗಂಟೆಗೆ 0ಯಿಂದ 40 ಕಿ.ಮೀ. ಚಲಿಸುವ ಮೂಲಕ ಇದನ್ನು 125ಸಿಸಿ ವಿಭಾಗದಲ್ಲಿ ಅತ್ಯಂತ ತ್ವರಿತ ಸ್ಕೂಟರ್ ಆಗಿಸಿದೆ ಮತ್ತು ನಗರದ ಟ್ರಾಫಿಕ್ ನಡುವೆ ಸಂಚರಿಸಲು ಅತ್ಯಂತ ಪರಿಪೂರ್ಣ ಆಯ್ಕೆಯಾಗಿಸಿದೆ.
-
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
SWR: ಪ್ರಶಾಂತಿ ಎಕ್ಸ್ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ: ರೈಲುಗಳ ನಿಲುಗಡೆಯಲ್ಲಿ ಬದಲಾವಣೆ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ












Click it and Unblock the Notifications