Get Updates
Get notified of breaking news, exclusive insights, and must-see stories!

ಫ್ಲಿಪ್ ಕಾರ್ಟಿನಲ್ಲಿ 10 ಲಕ್ಷ ಹೂಡಿ, ಕೋಟಿಗಟ್ಟಲೆ ಬಾಚಿದ ಗುಪ್ತ

ಬೆಂಗಳೂರು, ಮೇ 12: ಹೇಲಿಯಾನ್ ವೆಂಚರ್ಸ್ ಎಂಬ ಆರ್ಥಿಕ ಸಂಸ್ಥೆ ಹುಟ್ಟುಹಾಕಿ, 2009ರಲ್ಲಿ ಫ್ಲಿಪ್ ಕಾರ್ಟ್ ಸಂಸ್ಥೆ 10 ಲಕ್ಷ ನೀಡಿ ಏಂಜೆಲ್ ಇನ್ವೆಸ್ಟರ್ ಎನಿಸಿಕೊಂಡಿದ್ದ ಆಶೀಶ್ ಗುಪ್ತ ಈಗ ಬರೋಬ್ಬರಿ 20 ಮಿಲಿಯನ್ ಡಾಲರ್ ಹೊಂದಲಿದ್ದಾರೆ.

ಬೆಂಗಳೂರು ಮೂಲದ ಭಾರತದ ಇ ಕಾಮರ್ಸ್ ದೈತ್ಯ ಫ್ಲಿಪ್ ಕಾರ್ಟ್ ನ ಶೇ 77ರಷ್ಟು ಪಾಲನ್ನು ಸುಮಾರು 16 ಬಿಲಿಯನ್ ಯುಎಸ್ ಡಾಲರ್ ಮೊತ್ತಕ್ಕೆ ಅಮೆರಿಕದ ವಾಲ್ ಮಾರ್ಟ್ ಖರೀದಿಸಿದೆ. ಇದಾದ ಬಳಿಕ, ಫ್ಲಿಪ್ ಕಾರ್ಟ್ ಷೇರುಗಳನ್ನು ಹೊಂದಿದ್ದವರ ಷೇರು ಮೌಲ್ಯಗಳು ಗಗನಕ್ಕೇರಿವೆ.

ಈ ಒಪ್ಪಂದದ ಬಳಿಕ ಅಮೆರಿಕದ ರೀಟೈಲ್ ಕ್ಷೇತ್ರದ ದಿಗ್ಗಜ ವಾಲ್ ಮಾರ್ಟ್ ಸುಮಾರು 2 ಬಿಲಿಯನ್ ಡಾಲರ್ (ಸುಮಾರು 13000 ಕೋಟಿ ರು) ಈಕ್ವಿಟಿಯನ್ನು ಫ್ಲಿಪ್ ಕಾರ್ಟಿಗೆ ಸೇರಿಸಿ ಇಕಾಮರ್ಸ್ ಕ್ಷೇತ್ರದಲ್ಲಿ ಹೊಸ ಬೆಳವಣಿಗೆಗೆ ಕಾರಣವಾಗಲಿದೆ. ಜತೆಗೆ ಫ್ಲಿಪ್ ಕಾರ್ಟ್ ನಂಬಿ ಹೂಡಿಕೆ ಮಾಡಿದ್ದವರ ಬಾಳು ಬೆಳಕಾಗಿದೆ.

Ashish Gupta, the angel who struck gold in Flipkart sale to Walmart

ಆಶೀಶ್ ಗುಪ್ತಾ: 1998ರಲ್ಲಿ ಜಂಗ್ಲಿ ಎಂಬ ಬೆಲೆ ತುಲನೆ ಮಾಡುವ ಸ್ಟಾರ್ ಅಪ್ ಸಂಸ್ಥೆ ಹುಟ್ಟುಹಾಕಿದ್ದ ಇವರು ನಂತರ ಅಮೆಜಾನ್ ಸಂಸ್ಥೆಗೆ 240 ಮಿಲಿಯನ್ ಡಾಲರ್ ಗೆ ಮಾರಿದ್ದರು. ಎರಡು ದಶಕಗಳ ಬೈಕ ಗುಪ್ತಾ ಅವರು ಅಮೆಜಾನ್ ನ ಎದುರಾಳಿಗಳಾದ ವಾಲ್ಮಾರ್ಟ್ ಹಾಗೂ ಫ್ಲಿಪ್ ಕಾರ್ಟ್ ಡೀಲ್ ನಿಂದಾಗಿ 20 ಮಿಲಿಯನ್ ಡಾಲರ್ ಹೊಂದಲಿದ್ದಾರೆ.

ಫ್ಲಿಪ್ ಕಾರ್ಟ್ ಅಲ್ಲದೆ, ಮೇಕ್ ಮೈ ಟ್ರಿಪ್, ಮ್ಯೂಸಿಗ್ಮಾ ಮುಂತಾದ ಸಂಸ್ಥೆಗೂ ಏಂಜೆಲ್ ಇನ್ವೆಸ್ಟರ್ ಆಗಿದ್ದರು. ಎಲ್ಲದರಿಂದಲೂ ಲಾಭ ಗಳಿಸಿದ್ದಾರೆ. ಯುಎಸ್ ನಲ್ಲಿ ನೆಲೆಸಿರುವ ಗುಪ್ತ ಅವರು ಸ್ಟಾನ್ ಫರ್ಡ್ ವಿವಿಯಿಂದ ಪಿಎಚ್ ಡಿ ಪಡೆದಿದ್ದು, ಐಐಟಿ ಪದವೀಧರರು ಕೂಡಾ ತಾವಂತ್ ಟೆಕ್ನಾಲಜೀಸ್ ಕೂಡಾ ಸಾಕಷ್ಟು ಸದ್ದು ಮಾಡಿತ್ತು.

ಉದ್ಯೋಗ ಸೃಷ್ಟಿ
ಫ್ಲಿಪ್ ಕಾರ್ಟ್ ನ ಈ ಡೀಲ್ ನಿಂದಾಗಿ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗುತ್ತಿದೆಯಲ್ಲದೇ, ಫ್ಲಿಪ್ ಕಾರ್ಟ್ ನ ಸಾವಿರಾರು ಷೇರುದಾರರು ಕೋಟ್ಯಧಿಪತಿಗಳಾಗುತ್ತಿದ್ದಾರೆ.ಫ್ಲಿಪ್ ಕಾರ್ಟ್ ನ 100 ಮಂದಿ ಹಾಲಿ ಹಾಗೂ ಮಾಜಿ ಉದ್ಯೋಗಿಗಳು ಕೋಟ್ಯಧಿಪತಿಗಳಾಗುತ್ತಿದ್ದಾರೆ.

ವಾಲ್ ಮಾರ್ಟ್ ಡೀಲ್ ಬಳಿಕ 1 ಷೇರ್ ಗೆ 150 ಡಾಲರ್ ಅಂದರೆ ಅಂದಾಜು 10 ಸಾವಿರ ರೂಪಾಯಿ ಷೇರು ಮೌಲ್ಯದಂತೆ ಷೇರುಗಳನ್ನು ವಾಪಸ್ ತೆಗೆದುಕೊಳ್ಳಲಾಗುವುದೆಂದು ಫ್ಲಿಪ್ ಕಾರ್ಟ್ ಸಿಇಒ ಬಿನ್ನಿ ಬನ್ಸಾಲ್ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+