ಸರ್ಕಾರಿ ಹಳಿಗಳ ಮೇಲೆ ಓಡಲಿವೆಯೇ ಖಾಸಗಿ ರೈಲುಗಳು ?

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 11: ದೇಶದ ಉದ್ದಗಲಕ್ಕೂ ಚಾಚಿರುವ ಭಾರತೀಯ ರೈಲ್ವೇ ಹಳಿಗಳ ಮೇಲೆ ಶೀಘ್ರದಲ್ಲೇ ಇನ್ನು ಖಾಸಗಿ ರೈಲುಗಳು ಓಡಾಡಲಿವೆಯೇ ಎಂಬ ಪ್ರಶ್ನೆ ಈಗ ರೈಲ್ವೇ ಇಲಾಖೆಯಲ್ಲಿ ಚಾಲ್ತಿಗೆ ಬಂದಿದೆ.

ಕೇಂದ್ರ ಸರ್ಕಾರವು, ಖಾಸಗಿ ಕಂಪನಿಗಳ ಸಹಯೋಗದಲ್ಲಿ ರೈಲ್ವೇ ಸಂಚಾರವನ್ನು ಮತ್ತಷ್ಟು ಸರಳೀಕರಣ, ಆಧುನೀಕರಣಗೊಳಿಸಲು ಮುಂದಾಗಿದ್ದು, ಕೆಲವಾರು ಮಾರ್ಗಗಳಲ್ಲಿ ರೈಲು ಓಡಿಸಲು ಖಾಸಗಿ ಕಂಪನಿಗಳಿಗೆ ಅವಕಾಶ ಕಲ್ಪಿಸುವ ಬಗ್ಗೆ ಚಿಂತನೆ ನಡೆಸಿದೆ ಎನ್ನಲಾಗಿದೆ.

Are private trains on right track with independent regulator in the offing?

ಈಗಾಗಲೇ ಕೇಂದ್ರ ಸರ್ಕಾರವು, ರೈಲ್ವೇ ಅಭಿವೃದ್ಧಿ ಮಂಡಳಿಯನ್ನು ಅಸ್ತಿತ್ವಕ್ಕೆ ತರಲು ನಿರ್ಧರಿಸಿದೆ. ಅದರ ಅಡಿಯಲ್ಲೇ ಖಾಸಗಿ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.

ಈ ಚಿಂತನೆಯು ಸಾಕಾರ ರೂಪ ಪಡೆದರೆ, ದೇಶದ ಕೆಲವಾರು ಆಯ್ದ ರೈಲ್ವೇ ಮಾರ್ಗಗಳಲ್ಲಿ ಪ್ರಾಯೋಗಿಕವಾಗಿ ಖಾಸಗಿ ರೈಲುಗಳು ಸಂಚರಿಸಲಿವೆ.

ಅಂದಹಾಗೆ, ಇಂಥದ್ದೊಂದು ಪರಿಕಲ್ಪನೆ ರೈಲ್ವೇ ಇಲಾಖೆಗೆ ಹೊಸತೇನಲ್ಲ. 2006ರಲ್ಲೇ ಸರಕು ಸಾಗಣೆ ರೈಲುಗಳ ವಿಚಾರದಲ್ಲಿ ಖಾಸಗಿಯವರಿಗೂ ಅವಕಾ ನೀಡಲಾಗಿತ್ತು. ಆಗ, ಗೇಟ್ ವೇ ರೈಲ್ ಫ್ರೈಟ್, ಆರ್ಶಿಯಾ ರೈಲ್ ಹಾಗೂ ಎಪಿಎಲ್ ಇಂಡಿಯಾ ಲಿಂಕ್ಸ್ ಎಂಬ ಕಂಪನಿಗಳು ಸರ್ಕಾರದಿಂದ ಪರವಾನಗಿ ಪಡೆದು ತಮ್ಮ ರೈಲುಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದವು.

ಆದರೆ, ಆಗ ಖಾಸಗಿ ಕಂಪನಿಗಳು ರೈಲ್ವೇ ಇಲಾಖೆಗೆ ದುಬಾರಿ ಬಾಡಿಗೆ ನೀಡಬೇಕಿದ್ದರಿಂದಾಗಿ ಆ ಯೋಜನೆ ಅಷ್ಟಾಗಿ ಯಶಸ್ವಿಯಾಗಲಿಲ್ಲ. ಆದರೆ, ಈ ಬಾರಿ ಅತ್ಯಂತ ನಾಜೂಕಾಗಿ, ಖಾಸಗಿಗೂ ಹೊರೆಯಾಗದಂತೆ, ಸರ್ಕಾರಕ್ಕೂ ಹೊರೆಯಾಗದಂತೆ, ಜನರಿಗೂ ತೊಂದರೆಯಾಗದಂಥ ನಿಯಮಾವಳಿಗಳನ್ನು ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Railway department is planning to incorporate private sector into railways, so that, shortly we can see private trains may run across the railway tracks in India.
Please Wait while comments are loading...