ಬಿಸಿ ದೋಸೆಯಂತೆ ಬಿಕರಿಯಾದ ಲಕ್ಷ ರುಪಾಯಿಯ ಐಫೋನ್ x

ಆಪಲ್ ಐಫೋನ್ x (10) ಮಾರಾಟ ಭಾರತದಲ್ಲಿ ಶುಕ್ರವಾರದಿಂದ ಭರ್ಜರಿಯಾಗಿ ಆರಂಭವಾಗಿದೆ. ಪ್ರೀ ಬುಕಿಂಗ್ ಮಾಡಿದವರಿಗೆ ಫೋನ್ ಸಿಕ್ಕಿದ್ದು, ಬಹಳ ಮಂದಿ ಖರೀದಿ ಮಾಡಲು ಸಾಧ್ಯವಾಗದೆ ಹಿಂತಿರುಗಿದ ಉದಾಹರಣೆಗಳಿವೆ. ಮೊಬೈಲ್ ಫೋನ್ ಮಾರಾಟ ಕೆಲ ನಿಮಿಷಗಳಲ್ಲೇ ಆಗಿದ್ದರಿಂದ ನಿರಾಸೆ ಪಟ್ಟವರ ಸಂಖ್ಯೆಯೇ ಹೆಚ್ಚಿದೆ.

ಈ ವರೆಗೆ ಆಪಲ್ ತಯಾರಿಸಿದ ಮೊಬೈಲ್ ಫೋನ್ ಗಳಲ್ಲೇ ಇದು ತುಂಬ ವಿಶಿಷ್ಟ ಹಾಗೂ ದುಬಾರಿಯದ್ದಾದರೂ ಕಂಪನಿಯ ಹತ್ತನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಹೊರತಂದಿರುವ ಐಫೋನ್ xಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಐಫೋನ್ 8 ಹಾಗೂ 8 ಪ್ಲಸ್ ಗಿಂತ ಹೆಚ್ಚಿನ ಬೇಡಿಕೆ ಐಫೋನ್ xಗೆ ಇದೆ. ಕಂಪನಿಯಿಂದ ಮಾರಾಟಗಾರರಿಗೆ ನೀಡಿರುವ ಫೋನ್ ಗಳ ಸಂಖ್ಯೆ ನಿಯಮಿತವಾಗಿದೆ. ಆದರೆ ಎಷ್ಟು ಫೋನ್ ಗಳನ್ನು ನೀಡಿದ್ದಾರೆ ಎಂಬುದನ್ನು ಮಾರಾಟಗಾರರು ಬಹಿರಂಗ ಪಡಿಸುತ್ತಿಲ್ಲ.

Apple iPhone X response better than the iPhone 8 series

ಐಫೋನ್ x 64 ಜಿಬಿ ಸಾಮರ್ಥ್ಯಕ್ಕೆ 89 ಸಾವಿರ ರುಪಾಯಿ ಹಾಗೂ 256 ಜಿಬಿ ಸಾಮರ್ಥ್ಯಕ್ಕೆ ರು. 1,02,000 ದರ ನಿಗದಿ ಮಾಡಲಾಗಿದೆ. ಇಷ್ಟು ದುಬಾರಿ ಬೆಲೆ ಇದ್ದರೂ ಬೇಡಿಕೆಯೇನೂ ಕಡಿಮೆ ಆಗಿಲ್ಲ. ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ನವೆಂಬರ್ 3ರಿಂದ ಐಫೋನ್ x ಮಾರಾಟ ಆರಂಭವಾಗಿದ್ದು, ಮಳಿಗೆಗಳ ಎದುರು ಉದ್ದುದ್ದ ಸಾಲು ಕಂಡುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+