ಆನ್‌ಲೈನ್‌ ಸಿಗುತ್ತಿದೆ ಅಂತಿಮ ಸಂಸ್ಕಾರದ ಸಾಮಗ್ರಿಗಳು!

Posted By: ದೇವರಾಜ ನಾಯಕ್
Subscribe to Oneindia Kannada

ಕಾರವಾರ, ಏಪ್ರಿಲ್ 12: ಈಗಿನ ಆನ್ ಲೈನ್ ಮಾರುಕಟ್ಟೆ ಜಮಾನದಲ್ಲಿ ಏನು ಸಿಗೋದಿಲ್ಲ ಹೇಳಿ. ಕಾಸು ಕೊಟ್ಟರೆ ಎಲ್ಲವೂ ಮನೆ ಬಾಗಿಲಿಗೆ ಡೋರ್ ಡೆಲಿವರಿ ಮಾಡಿ ಹೋಗೋ ಕಾಲ ಇದು.

ಇನ್ನುಮುಂದೆ ಆನ್‌ಲೈನ್ ಮಳಿಗೆಯಲ್ಲೂ ಪತಂಜಲಿ ಉತ್ಪನ್ನ ಲಭ್ಯ

ಹಾಕೋ ಬಟ್ಟೆ, ಬಳಸೊ ಬ್ಯೂಟಿ ಸಾಮಗ್ರಿಗಳಿಂದ ಹಿಡಿದು ಊಟ, ತಿಂಡಿ ಎಲ್ಲವೂ ಆನ್ ಲೈನ್ ನಲ್ಲೇ ಸಿಕ್ಕಿ ಬಿಡುತ್ತದೆ. ಇದೀಗ ಇದೇ ಸಾಲಿನಲ್ಲಿ ಮನುಷ್ಯನ ಕೊನೆಗಾಲಕ್ಕೆ ಬಳಸೊ ಸಾಮಗ್ರಿಗಳು ಕೂಡ ಆನ್ ಲೈನ್ ನಲ್ಲಿ ಸಿಗುತ್ತೆ ಅಂದ್ರೆ ನಂಬ್ತೀರಾ? ನಂಬಲೇಬೇಕು. ಅಂಥದ್ದೊಂದು ಪ್ರಯೋಗ ಇ ಕಾಮರ್ಸ್ ತಾಣ ಅಮೇಜಾನ್ ಮಾಡಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಸರ್ವಪೂಜಾ ಸ್ಪಿರುಚಲ್ ಪ್ರಾಡಕ್ಟ್ಸ್ ಎಂಬ ಏಜೆನ್ಸಿಯು ಸರ್ವಪೂಜಾ ಅಂತಿಮ ಸಂಸ್ಕಾರದ ಸಾಮಗ್ರಿ ಹೆಸರಿನಲ್ಲಿ ಕೊನೆಗಾಲಕ್ಕೆ ಬೇಕಾಗುವ ವಸ್ತುಗಳನ್ನು ಜಗತ್ತಿನಲ್ಲೆ ಪ್ರಥಮ ಬಾರಿಗೆ ಅಮೆಜಾನ್ ನಲ್ಲಿ ಮಾರಾಟ ಮಾಡುತ್ತಿದೆ.

Amazon selling final Rites Antim Kriya Kit in online

ಆರ್ಡರ್‌ ಮಾಡಲು ಇಚ್ಛಿಸುವವರು ಅಮೆಜಾನ್‌ನಲ್ಲಿ Sarvapooja Final Rites Antim Kriya Kit ಎಂದು ಹುಡುಕಬೇಕು.

ಅಂತಿಮ ಸಂಸ್ಕಾರದ ಕಿಟ್‌ನಲ್ಲಿ ಏನೇನಿರುತ್ತೆ?
ಸ್ಟ್ರೆಚರ್, ಟ್ರೈಪಾಡ್, ಬಿಳಿಯ ಬಟ್ಟೆ, ಶಾಲು, ಮ್ಯಾಟ್, ಕಾಟನ್ ಪೀಸ್, ಕಾಟನ್ ಬ್ಯಾಟಿ, ಧೂಪ ದ್ರವ್ಯ ಸ್ಟಿಕ್ಸ್, ವಿಭೂತಿ, ಗೋಮೂತ್ರ, ಪರ್ಫ್ಯೂಮ್, ರೋಸ್ ವಾಟರ್, ಗಂಗಾ ಜಲ, ಜೇನು ತುಪ್ಪ, ಬೆಂಕಿ ಕಡ್ಡಿ ಪೊಟ್ಟಣ, ದಾರ, ನಾಡಾ ಛಾಡಿ, ಕುಂಕುಮ, ಅರಿಶಿನ, ಚಂದನದ ಪೌಡರ್, ಚಂದನದ ತುಂಡು, ಚುರುಮುರಿ, ಅಕ್ಕಿ, ಬ್ಲೇಡ್, ಬಿದಿರಿನ ಸ್ಟ್ರೆಚರ್ (ಯಾವುದೇ ಲೋಹಗಳು, ಮಿಶ್ರಲೋಹಗಳು, ಪ್ಲಾಸ್ಟಿಕ್‌ಗಳು ಅಥವಾ ಸಂಶ್ಲೇಷಿತ ವಸ್ತುಗಳಿಂದ ಮಾಡಿದ್ದಲ್ಲ) ಇರಲಿದೆ. ಇಷ್ಟಕ್ಕೂ ಅಮೆಜಾನ್ ನಿಗದಿ ಪಡಿಸಿರುವ ಬೆಲೆ ರೂ.2950.

Amazon selling final Rites Antim Kriya Kit in online

ಗ್ರಾಹಕರು ಏನಂತಾರೆ?
ಅಮೆಜಾನ್‌ನ ತಾಣದಲ್ಲಿ ಮೂವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅಭಿಪ್ರಾಯಕ್ಕಿಂತಲೂ ಅವರು ಈ ಸಾಮಗ್ರಿಗಳ ಕುರಿತಾಗಿ ಟೀಕಿಸಿದ್ದಾರೆ ಎನ್ನಬಹುದು. ಅಭಿಶೇಕ್ ಎಸ್. ಎನ್ನುವವರು, ಕೋಳಿಯನ್ನು ಇದರ ಜತೆಗೆ ಕರಿದೆ. ಅದು ಚೆನ್ನಾಗಿ ಬೆಂದು, ರುಚಿಯನ್ನು ಕೂಡ ಚೆನ್ನಾಗಿ ಕೊಟ್ಟಿದೆ ಎಂದಿದ್ದಾರೆ.

Amazon selling final Rites Antim Kriya Kit in online

ಇನ್ನೋರ್ವ ಸೂರಜ್ ಸಿಂಗ್, 'ಉತ್ತಮ ಸಾಮಗ್ರಿ. ನನ್ನ ಸ್ನೇಹಿತ ಗುರವ್ ಎಂಬುವವನಿಗಾಗಿ ಇದನ್ನು ಬಳಸಿದೆ. ಅವನು ಚೆನ್ನಾಗಿ ಸುಟ್ಟು ಹೋಗಿದ್ದಾನೆ. ಮತ್ತೆ ಬರುವ ಯಾವುದೇ ಅವಕಾಶಗಳು ಇಲ್ಲ' ಎಂದಿದ್ದಾರೆ. ಯೋಗೇಶ್ ಎಂಬುವವರು, 'ಸಾವಿಗೂ ಮುನ್ನವೇ ಅಥವಾ ಸಾವಿನ ನಂತರ ಇದನ್ನು ಖರೀದಿಸುವುದೋ' ಎಂದು ಪ್ರಶ್ನಿಸಿದ್ದಾರೆ.

ಒಟ್ಟಾರೆ ಅಮೆಜಾನ್ ತಾಣದಲ್ಲಿ ಗ್ರಾಹಕರು ಈ ಪ್ರಾಡಕ್ಟ್ಸ್ ನ ಬಗ್ಗೆ ಹೀಯಾಳಿಸಿದ್ದರೂ, 5ಕ್ಕೆ 5 ರೇಟಿಂಗ್ ಪಡೆದುಕೊಂಡಿದೆ. ಆರ್ಡರ್ ಮಾಡಿದ ಒಂದು ದಿನದಲ್ಲಿ ಇದು ಮನೆಗೆ ತಲುಪಲಿದೆ ಎಂದು ಏಜೆನ್ಸಿ ಅಮೆಜಾನ್ ತಾಣದಲ್ಲಿ ಹೇಳಿಕೊಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
in Amazon now can buy Anthim Kriya kit. sarva pooja spirutual products agency is selling Anthim Kriya kit in Amazon. kit includes ganga jal, matki, bamboo, white cloth and many other things. price is rs.2950.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ