ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Amazon Lay Offs : ಬರೋಬ್ಬರಿ 10,000 ಉದ್ಯೋಗಿಗಳ ವಜಾಕ್ಕೆ ಅಮೆಜಾನ್‌ ಚಿಂತನೆ

|
Google Oneindia Kannada News

ನವದೆಹಲಿ, ನವೆಂಬರ್‌ 15: ಕಳೆದ ಕೆಲವು ತ್ರೈಮಾಸಿಕ ಅವಧಿಗಳಿಂದ ಕಂಪೆನಿಗೆ ಆಗುತ್ತಿರುವ ಆರ್ಥಿಕ ನಷ್ಟ ಹಾಗೂ ವೆಚ್ಚ ಕಡಿತದ ಭಾಗವಾಗಿ ಪ್ರಮುಖ ಇ ಕಾಮರ್ಸ್ ಸಂಸ್ಥೆ ಅಮೆಜಾನ್‌ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಅಮೆಜಾನ್ ಬರೋಬ್ಬರಿ 10,000 ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗುತ್ತಿದೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ತಿಳಿಸಿದೆ.

ಅಮೆಜಾನ್ ತನ್ನ ಕಂಪೆನಿ ಇತಿಹಾಸದಲ್ಲೇ ಭಾರೀ ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು ವಜಾ ಮಾಡಲು ಯೋಜನೆ ಹಾಕಿಕೊಂಡಿದೆ. ಒಮ್ಮೆಗೆ 10,000 ಉದ್ಯೋಗಿಗಳ ಮೇಲೆ ಪರಿಣಾಮ ಬೀರಬಹುದು ಎಂದು ವರದಿ ತಿಳಿಸಿದೆ. ಜಾಗತಿಕವಾಗಿ ಬರೋಬ್ಬರಿ 1.6 ಮಿಲಿಯನ್‌ ಉದ್ಯೋಗಿಗಳನ್ನು ಹೊಂದಿರುವ ಇ ಕಾಮರ್ಸ್‌ ಕಂಪೆನಿಯಿಂದ 10,000 ಉದ್ಯೋಗಿಗಳ ವಜಾಗೊಂಡರೆ ಕಂಪೆನಿಯ ಶೇ. 1ರಷ್ಟು ಉದ್ಯೋಗಿಗಳ ಸಂಖ್ಯೆ ಇಳಿಕೆಯಾಗಲಿದೆ.

ಉದ್ಯೋಗ ಕಡಿತಗೊಳಿಸಲು ಬಯಸಿರುವ ವಿಭಾಗಗವೆಂದರೆ ರಿಟೇಲ್‌ ವಿಭಾಗ, ಮಾನವ ಸಂಪನ್ಮೂಲ (ಎಚ್‌ಆರ್‌) ವಿಭಾಗ ಹಾಗೂ ಅಲೆಕ್ಸಾ ಧ್ವನಿ ಸಹಾಯಕ್ಕೆ ಜವಾಬ್ದಾರರಾಗಿರುವ ಉದ್ಯೋಗಿಗಳ ಗುಂಪನ್ನು ಗುರಿಯಾಗಿಸಿಕೊಳ್ಳಬಹುದು ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಹೇಳಿದೆ.

ಸಂಪತ್ತಿನ ಬಹುಪಾಲು ದಾನ ಮಾಡಲು ಮುಂದಾದ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ಸಂಪತ್ತಿನ ಬಹುಪಾಲು ದಾನ ಮಾಡಲು ಮುಂದಾದ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್

ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾತ್ರವಲ್ಲದೆ ವಾಲ್‌ಸ್ಟ್ರೀಟ್‌ ಜರ್ನಲ್‌ ಕೂಡ ಈ ಬಗ್ಗೆ ವರದಿ ಮಾಡಿದ್ದು, ಕಳೆದ ಕೆಲವು ತ್ರೈಮಾಸಿಕದಲ್ಲಿ ಕಂಪೆನಿ ಆರ್ಥಿಕ ಲಾಭಗಳನ್ನು ಪಡೆಯುತ್ತಿಲ್ಲ. ವೆಚ್ಚಗಳು ಭಾರೀ ಪ್ರಮಾಣದಲ್ಲಿ ಇದ್ದು, ಇದು ಕಂಪೆನಿಗೆ ಹೊರೆಯಾಗುತ್ತಿದೆ. ಆದ್ದರಿಂದ ಕಂಪೆನಿಯ ಕೆಲವು ಘಟಕಗಳಲ್ಲಿ ಉದ್ಯೋಗಿಗಳಿಗೆ ಇತರೆ ಉದ್ಯೋಗ ಅವಕಾಶಗಳನ್ನು ಹುಡುಕಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದಿದೆ.

ಏರುತ್ತಿರುವ ಬೆಲೆಗಳಿಂದ ಗ್ರಾಹಕರು ಹಾಗೂ ಆರ್ಥಿಕ ವ್ಯವಹಾರಗಳು ಕ್ಷೀಣಗೊಂಡಿವೆ. ಇದು ಸಹಜವಾಗಿಯೇ ವ್ಯಾಪಾರ ಕಡಿಮೆಯಾಗುಲು ಕಾರಣವಾಗುತ್ತಿದೆ. ಆದ್ದರಿಂದ ಉದ್ಯೋಗ ಕಡಿತ ಅನಿವಾರ್ಯ ಎಂದು ಅಮೆಜಾನ್ ಹೇಳಿದೆ.

ಉದ್ಯೋಗಿಗಳ ವಜಾ: ಎಲಾನ್ ಮಸ್ಕ್‌ ಹಾದಿಯಲ್ಲಿ ಮಾರ್ಕ್ ಜುಕರ್‌ಬರ್ಗ್ಉದ್ಯೋಗಿಗಳ ವಜಾ: ಎಲಾನ್ ಮಸ್ಕ್‌ ಹಾದಿಯಲ್ಲಿ ಮಾರ್ಕ್ ಜುಕರ್‌ಬರ್ಗ್

ನಿಧಾನಗತಿ ಬೆಳವಣಿಗೆಯಿಂದ ಲಾಭ ಕುಸಿತ

ನಿಧಾನಗತಿ ಬೆಳವಣಿಗೆಯಿಂದ ಲಾಭ ಕುಸಿತ

ಅಮೆಜಾನ್‌ ಕೋವಿಡ್‌ ಬಳಿಕ ಗೋದಾಮುಗಳನ್ನು ತೆಗೆಯಲು ವಿಳಂಬ ಮಾಡಿತು. ಅಲ್ಲದೆ ರಿಟೇಲ್‌ ಗುಂಪಿನಲ್ಲಿ ನೇಮಕಾತಿಯನ್ನು ಸ್ಥಗಿತಗೊಳಿಸಿತ್ತು. ವ್ಯಾಪಾರಿಗಳು ಸಾಂಕ್ರಾಮಿಕ ಪೂರ್ವ ವ್ಯವಹಾರಗಳನ್ನು ಪುನಾನರಾರಂಭಿಸಿರುವುದರಿಂದ ಇ ಕಾಮರ್ಸ್‌ ಬೆಳವಣಿಗೆಯಲ್ಲಿ ತೀಕ್ಷವಾದ ನಿಧಾನಗತಿಗೆ ಹೊಂದಿಕೊಳ್ಳಲು ವಿಶ್ವದ ಅತಿದೊಡ್ಡ ಆನ್‌ಲೈನ್‌ ರೀಟೇಲ್ ವ್ಯಾಪಾರಿ ಸಂಸ್ಥೆ ಅಮೆಜಾನ್‌ ಈ ವರ್ಷ ಹೆಚ್ಚಿನ ಸಮಯವನ್ನು ಕಳೆದಿದೆ.

ಜನರು ಹೊಂದಿರಬೇಕಾದ ಗ್ಯಾಜೆಟ್‌ಗಳಾಗಿಲ್ಲ

ಜನರು ಹೊಂದಿರಬೇಕಾದ ಗ್ಯಾಜೆಟ್‌ಗಳಾಗಿಲ್ಲ

ಈ ಬೆಳವಣಿಗೆಗಳ ಮಧ್ಯೆ ಅಮೆಜಾನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಂಡಿ ಜಾಸ್ಸಿ ನಿಧಾನಗತಿಯ ಮಾರಾಟದ ಬೆಳವಣಿಗೆ ಮತ್ತು ಆರ್ಥಿಕ ಅನಿಶ್ಚಿತತೆಯ ಮಧ್ಯೆ ಕಂಪೆನಿಯ ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ಪ್ರತಿಜ್ಞೆ ಮಾಡಿದ್ದಾರೆ. ಅಮೆಜಾನ್‌ ಅಲೆಕ್ಸಾ ವಿಭಾಗವು ದೀರ್ಘಕಾಲದವರೆಗೆ ಉದ್ಯೋಗಿಗಳನ್ನು ಕಡಿಮೆ ಮಾಡಲು ಮುಂದಾಗಿದೆ. ಕಾರಣ ಗುಂಪಿನ ಧ್ವನಿ ಸಕ್ರಿಯ ಸಾಧನಗಳು ಜನರು ಹೊಂದಿರಬೇಕಾದ ಗ್ಯಾಜೆಟ್‌ಗಳಾಗಿ ಮಾರ್ಪಟ್ಟಿಲ್ಲ.

ಎರಡು ದಶಕಗಳಲ್ಲೇ ಆರ್ಥಿಕ ಬೆಳವಣಿಗೆ ಕುಸಿತ

ಎರಡು ದಶಕಗಳಲ್ಲೇ ಆರ್ಥಿಕ ಬೆಳವಣಿಗೆ ಕುಸಿತ

ಕೋವಿಡ್‌ ಸಾಂಕ್ರಮಿಕ ವರ್ಷಗಳಲ್ಲಿ ಆನ್‌ಲೈನ್ ಗ್ರಾಹಕ ವೆಚ್ಚದಲ್ಲಿ ಕುಸಿತದ ಬೆಳವಣಿಗೆ ಕಂಡು ಬಂದರಿಂದ ದಾಖಲೆ ಪ್ರಮಾಣದಲ್ಲಿ ಆರ್ಥಿಕ ಕುಸಿತ ಕಂಡು ಬಂದಿತು. ಇದು ಅಮೆಜಾನ್‌ನಲ್ಲಿ ಪ್ರತಿಫಲಿತವಾಗಿ ಕಂಪೆನಿಯಲ್ಲಿ ಎರಡು ದಶಕಗಳಲ್ಲೇ ಕಡಿಮೆ ಆರ್ಥಿಕ ಬೆಳವಣಿಗೆಯನ್ನು ತೋರಿಸಿತು ಎಂದು ನ್ಯೂಯಾರ್ಕ್‌ ಟೈಮ್ಸ್‌ ಹೇಳಿದೆ.

ಟ್ವಿಟ್ಟರ್‌ನಿಂದಲೂ ಶೇ. 50ರಷ್ಟು ಉದ್ಯೋಗಿಗಳ ವಜಾ

ಟ್ವಿಟ್ಟರ್‌ನಿಂದಲೂ ಶೇ. 50ರಷ್ಟು ಉದ್ಯೋಗಿಗಳ ವಜಾ


ಅಮೆಜಾನ್‌ ಇತ್ತೀಚಿನ ತಂತ್ರಜ್ಞಾನ ಕಂಪೆನಿಯಾಗಿದೆ. ಇದು ಸಂಭಾವ್ಯ ಆರ್ಥಿಕ ಕುಸಿತಕ್ಕೆ ಕಡಿವಾಣ ಹಾಕಲು ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮುಂದಾಗಿದೆ. ಕಳೆದ ವಾರವಷ್ಟೇ ಮೈಕ್ರೋ ಬ್ಲಾಗಿಂಗ್ ವೇದಿಕೆ ಟ್ವಿಟ್ಟರ್‌ ಕೂಡ ಅದರ ಸರಿಸುಮಾರು ಶೇ. 50ರಷ್ಟು ಉದ್ಯೋಗಿಗಳನ್ನು ವಜಾ ಮಾಡಿತು. ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ ಕೂಡ 11,000 ಉದ್ಯೋಗಿಗಳನ್ನು ವಜಾ ಮಾಡಿತ್ತು.

English summary
The New York Times reports that Amazon is planning to lay off as many as 10,000 employees as part of the company's cost-cutting and financial loss for the past few quarters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X