ಪ್ರೀಪೇಯ್ಡ್ ಬಳಕೆದಾರರಿಗೆ ಏರ್ ಟೆಲ್ ನಿಂದ ಭರ್ಜರಿ ಆಫರ್ !

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 15: ರಿಲಯನ್ಸ್ ಜಿಯೋದ ವಿರುದ್ಧ ಪೈಪೋಟಿಗೆ ಬಿದ್ದಿರುವ ಭಾರ್ತಿ ಏರ್ ಟೆಲ್ ಸಂಸ್ಥೆ ಯನ್ನ ಪ್ರೀಪೇಯ್ಡ್ ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿದೆ.

ಏರ್ ಟೆಲ್ ನಿಂದ ಹೊಸ ಪ್ಲ್ಯಾನ್,ದಿನಕ್ಕೆ 1.5 ಜಿಬಿ ಡೇಟಾ!

ದೇಶದ ಅತಿದೊಡ್ಡ ಟೆಲಿಕಾಂ ಸಂಸ್ಥೆ ಏರ್ಟೆಲ್ ತನ್ನ ಪ್ರೀ ಪೇಯ್ಡ್ ಗ್ರಾಹಕರಿಗೆ ಸರಿಸುಮಾರು ಒಂದು ವರ್ಷದವರೆಗೆ (360 ದಿನ) ಚಾಲ್ತಿಯಲ್ಲಿರುವ ಆಫರ್ ನೀಡುತ್ತಿದೆ.

ಈ ಆಫರ್ ನಂತೆ 3,999 ರೂ. ರೀ ಚಾರ್ಜ್ ಮಾಡಿಸಿದರೆ 360 ದಿನದವರೆಗೆ ಅನಿಯಮಿತ ಕರೆ, ಪ್ರತಿದಿನ 100 ಎಸ್ಎಂಎಸ್ ಹಾಗೂ 360 ದಿನಕ್ಕೆ 300 ಜಿಬಿ ಡೇಟಾ ಲಭ್ಯವಾಗಲಿದೆ. ಈ ಆಫರನ್ನು ನಾನ್ ಕಮರ್ಷಿಯಲ್ ಉಪಯೋಗಕ್ಕೆ ಮಾತ್ರವೆಂದು ಕಂಪನಿ ಷರತ್ತು ವಿಧಿಸಿದೆ.

ಇತ್ತೀಚೆಗೆ ವೋಡಾಫೋನ್ 84 ದಿನಗಳ ವ್ಯಾಲಿಡಿಟಿ ಇರುವ 496ರುಗಳ ಪ್ಲ್ಯಾನ್ ತಂದಿತ್ತು. ಐಡಿಯಾ 498ರುಗೆ ಇಂಥದ್ದೇ ಪ್ಲ್ಯಾನ್ ಹೊಂದಿದೆ. ಈ ಕಂಪನಿಗಳ ವಿಲೀನದ ನಂತರ ಅತಿದೊಡ್ಡ ಟೆಲಿಕಾಂ ಕಂಪನಿ ಎಂಬ ಪಟ್ಟದಿಂದ ಏರ್ ಟೆಲ್ ಕೆಳಗಿಳಿಯಬೇಕಾಗುತ್ತದೆ.

ಪ್ರೀ ಪೇಯ್ಡ್ ಯೋಜನೆ ಹೇಗಿದೆ?

ಪ್ರೀ ಪೇಯ್ಡ್ ಯೋಜನೆ ಹೇಗಿದೆ?

ಈ 300 ದಿನಗಳ ವಾರ್ಷಿಕ ಯೋಜನೆಯನ್ನು ವಿಶ್ಲೇಷಿಸಿದರೆ ಪ್ರತಿ ದಿನಕ್ಕೆ 833 ಎಂಬಿಯಂತೆ ಡೇಟಾ ಸಿಗಲಿದೆ, ವ್ಯಾಲಿಡಿಟಿ, ಒಟ್ಟಾರೆ ಖರ್ಚು ಲೆಕ್ಕ ಹಾಕಿದರೆ ಪ್ರತಿದಿನಕ್ಕೆ 11 ರು ತಗುಲಲಿದೆ. ಕಾಲಿಂಗ್, ಎಸ್ಎಂಎಸ್ ಕೂಡಾ ಇರುವುದರಿಂದ ಬಳಕೆದಾರರು ಸುಲಭವಾಗಿ ಒಪ್ಪಿಕೊಳ್ಳಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

349ರುಗಳ ಯೋಜನೆಯಲ್ಲಿ ಸುಧಾರಣೆ

349ರುಗಳ ಯೋಜನೆಯಲ್ಲಿ ಸುಧಾರಣೆ

ರಿಲಯನ್ಸ್ ಜಿಯೋಗೆ ಪೈಪೋಟಿ ನೀಡಲು ಭಾರ್ತಿ ಏರ್ ಟೆಲ್ ತನ್ನ 349ರುಗಳ ಯೋಜನೆಯಲ್ಲಿ ಸುಧಾರಣೆ ಮಾಡಿದೆ. ಅದೇ ದರಕ್ಕೆ ಹೆಚ್ಚು ಡೇಟಾ ನೀಡಲು ಮುಂದಾಗಿದೆ. ಇದರ ಜೊತೆಗೆ ಏರ್ ಟೆಲ್ ಮತ್ತೊಂದು ಹೊಸ ಪ್ಲಾನ್ ಪರಿಚಯಿಸಿದೆ. 448 ರೂ. ಗೆ ಅನಿಯಮಿತ ಕರೆ ಮತ್ತು ದಿನಕ್ಕೆ 1 ಜಿ.ಬಿ. ಡೇಟಾವನ್ನು 70 ದಿನಗಳ ಅವಧಿಗೆ ನೀಡಲಿದೆ.

ಹೊಸ 448 ರೂ. ಯೋಜನೆ

ಹೊಸ 448 ರೂ. ಯೋಜನೆ

ರಿಲಯನ್ಸ್ ಜಿಯೊ 399 ರೂ. ಪ್ಲಾನ್ ಎದುರಿಸಲು ಏರ್ ಟೆಲ್ ಹೊಸ 448 ರೂ. ಯೋಜನೆಯನ್ನು ಹೊರತಂದಿದೆ. ಆದರೆ, ಈ ಪ್ರೀಪೇಯ್ಡ್ ಯೋಜನೆ ಆಯ್ದ ಗ್ರಾಹಕರಿಗೆ ಮಾತ್ರ ಲಭ್ಯ. 448 ರೂ. ಯೋಜನೆ ಹೊಂದಿರುವ ಏರ್ ಟೆಲ್ ಪ್ರೀಪೇಯ್ಡ್ ಚಂದಾದಾರರು ದಿನಕ್ಕೆ 1 ಜಿ.ಬಿ. 3 ಜಿ ಅಥವಾ 4 ಜಿ ಡೇಟಾವನ್ನು 70 ದಿನಗಳವರೆಗೆ ಪಡೆದುಕೊಳ್ಳುತ್ತಾರೆ. ಈ ಅವಧಿಗೆ ಒಟ್ಟು 70 ಜಿ.ಬಿ. ಡೇಟಾ ದಿನಕ್ಕೆ 1 ಮೀರಿದ ಬಳಿಕ ಡೇಟಾ ವೇಗವು 64 kbps ಗೆ ಇಳಿಯುತ್ತದೆ.

ಏರ್ ಟೆಲ್ 349 ರು ಹೊಸ ಪ್ಲ್ಯಾನ್

ಏರ್ ಟೆಲ್ 349 ರು ಹೊಸ ಪ್ಲ್ಯಾನ್

ಪ್ರತಿ ದಿನಕ್ಕೆ 1.5 ಜಿಬಿ ಡೇಟಾ, ಅನಿಯಮಿತ ಸ್ಥಳೀಯ ಹಾಗೂ ಎಸ್ಟಿಡಿ ಕರೆಗಳು, 3,000 ಎಸ್ಎಂಎಸ್ ಉಚಿತ. ಆದರೆ, ಈ ಯೋಜನೆಯ ವ್ಯಾಲಿಡಿಟಿ 28ದಿನಗಳು ಮಾತ್ರ. ಅನಿಯಮಿತ ಎಂದಿದ್ದರೂ ದಿನಕ್ಕೆ 250ನಿಮಿಷ ಮಾತ್ರ ಉಚಿತವಾಗಿರುತ್ತದೆ ನಂತರ 10 ಪೈಸೆ ಪ್ರತಿ ಕರೆ ದರದಂತೆ ಶುಲ್ಕ ವಿಧಿಸಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Airtel is taking on Reliance Jio with a new prepaid plan offering 300GB data. Now, the prepaid plan actually costs Rs 3,999, but it has a validity of 360 days in total.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ