ಏರ್ ಟೆಲ್ ನಿಂದ 149, 399 ಪ್ರಿಪೇಯ್ಡ್ ಪ್ಯಾಕೇಜ್!
ಬೆಂಗಳೂರು, ಜೂನ್ 11: ಭಾರ್ತಿ ಏರ್ ಟೆಲ್ ತನ್ನ ಜನಪ್ರಿಯ ಯೋಜನೆಗಳಾದ 149 ರು ಹಾಗೂ 399ರು ಪ್ಯಾಕೇಜ್ ಗಳನ್ನು ಬದಲಾಯಿಸಿದ್ದು, ಗ್ರಾಹಕರಿಗೆ ಹೆಚ್ಚಿನ ಇಂಟರ್ನೆಟ್ ಡೇಟಾ ಸಿಗಲಿದೆ.
149 ರು ಪ್ರೀಪೇಯ್ಡ್ ಪ್ಯಾಕೇಜ್ ನಲ್ಲಿ ಗ್ರಾಹಕರಿಗೆ 2ಜಿಬಿ 3ಜಿ/4ಜಿ ಡೇಟಾ ಸಿಗಲಿದೆ, 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಒಟ್ಟಾರೆ, 2.68ರು ನಂತೆ 56ಜಿಬಿ ಡೇಟಾ ಸಿಗಲಿದೆ. ಜತೆಗೆ ವಾಯ್ಸ್ ಕಾಲಿಂಗ್ (ಸ್ಥಳೀಯ, ಎಸ್ಟಿಡಿ ಹಾಗೂ ರೋಮಿಂಗ್) ಹಾಗೂ 100 ಎಸ್ಎಂಎಸ್ ಪ್ರತಿ ದಿನ ಉಚಿತ ಲಭ್ಯವಿದೆ.
ಏರ್ಟೆಲ್ 399 ರೂಪಾಯಿ ಯೋಜನೆಯಲ್ಲಿ ಬದಲಾವಣೆ ಮಾಡಿದೆ. ಈ ಪ್ಲಾನ್ ನಲ್ಲಿ ಪ್ರತಿ ದಿನ 1.4 ಜಿಬಿ ಡೇಟಾ ಸಿಗುತ್ತಿತ್ತು. ಇನ್ಮುಂದೆ 2.4 ಜಿಬಿ 3ಜಿ/4ಜಿ ಡೇಟಾ ಗ್ರಾಹಕರಿಗೆ ಲಭ್ಯವಾಗಲಿದೆ. ಈ ಯೋಜನೆಯ ವ್ಯಾಲಿಡಿಟಿ 84 ದಿನಗಳ ತನಕ ಇದೆ.

ರಿಲಯನ್ಸ್ ಜಿಯೋದ 149 ರು ಪ್ಲಾನ್ ಹಾಗೂ 399 ಪ್ಲಾನ್ ಗೆ ಪೈಪೋಟಿ ನೀಡಲು ಏರ್ಟೆಲ್ ತನ್ನ ಎರಡು ಯೋಜನೆಯನ್ನು ಬದಲಾಯಿಸಿದೆ.












Click it and Unblock the Notifications