ಏರ್ಟೆಲ್ ಪ್ರೀಪೇಯ್ಡ್ ಗ್ರಾಹಕರಿಗೆ ಮತ್ತೊಮ್ಮೆ ಭರ್ಜರಿ ಕೊಡುಗೆ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 04: ದೇಶದ ಅಗ್ರಗಣ್ಯ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ ಟೆಲ್ ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ ಮತ್ತೊಮ್ಮೆ ಭರ್ಜರಿ ಆಫರ್ ನೀಡುತ್ತಿದೆ. ಹಾಲಿ ಇರುವ ಜನಪ್ರಿಯ ಯೋಜನೆಗಳ ಡೇಟಾ ಪ್ಲ್ಯಾನ್ ಬದಲಾಯಿಸಿದ್ದು ಪ್ರತಿದಿನ ಹೆಚ್ಚು ಡೇಟಾ ಸಿಗುವಂತೆ ಆಫರ್ ಬದಲಾಯಿಸಲಾಗಿದೆ.

ಪ್ರೀಪೇಯ್ಡ್ ಬಳಕೆದಾರರಿಗೆ ಏರ್ ಟೆಲ್ ನಿಂದ ಭರ್ಜರಿ ಆಫರ್ !

ರಿಲಯನ್ಸ್ ಜಿಯೋ ವಿರುದ್ಧ ಪೈಪೋಟಿಗೆ ಬಿದ್ದಿರುವ ಟೆಲಿಕಾಂ ಸಂಸ್ಥೆಗಳು, ಪ್ರತಿ ತಿಂಗಳು ಹೊಸ ಹೊಸ ಆಫರ್ ಗಳನ್ನು ನೀಡುತ್ತಿದೆ. ಏರ್ಟೆಲ್ ನ 199 ರು, 349, 448, 549, 799 ರೂಪಾಯಿ ಯೋಜನೆಗಳು ಜನಪ್ರಿಯಗೊಳ್ಳುತ್ತಿವೆ. ಏರ್ ಟೆಲ್ ಈಗ ತನ್ನ 349 ಹಾಗೂ 549 ರೂಪಾಯಿ ಪ್ಲಾನ್ ನಲ್ಲಿ ಬದಲಾವಣೆ ತಂದಿದೆ.

Airtel revises Rs 349, Rs 549 prepaid plans to offer more data benefits

349 ರೂ. ಪ್ಲಾನ್ ನಲ್ಲಿ ಇನ್ಮುಂದೆ ಗ್ರಾಹಕರಿಗೆ ಪ್ರತಿದಿನ 2ಜಿಬಿ ಡೇಟಾ ಲಭ್ಯವಾಗಲಿದೆ. ಈವರೆಗೆ 1.5 ಜಿಬಿ ಡೇಟಾ ಗ್ರಾಹಕರಿಗೆ ದೊರಕುತ್ತಿತ್ತು. ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಒಟ್ಟು 56ಜಿಬಿ ಡೇಟಾ ಪ್ರತಿ ತಿಂಗಳಿಗೆ ಸಿಗಲಿದೆ.

549 ರೂ. ಪ್ಲಾನ್ ನಲ್ಲಿ 2.5 ಜಿಬಿ ಡೇಟಾ ಬದಲು ಪ್ರತಿದಿನ 3ಜಿಬಿ ಡೇಟಾ ಸಿಗಲಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಒಟ್ಟು 84 ಜಿಬಿ ಡೇಟಾ ಪ್ರತಿ ತಿಂಗಳಿಗೆ ಸಿಗಲಿದೆ. ಈ ಎರಡೂ ಪ್ಲಾನ್ ವ್ಯಾಲಿಟಿಡಿ 28 ದಿನಗಳಾಗಿದೆ.

ಎರಡು ಪ್ಲಾನ್ ಹೊರಹಾಕಿದ ವೋಡಾಫೋನ್

199 ರು ಪ್ಲ್ಯಾನ್ ನಲ್ಲಿ 28 ದಿನಗಳ ವ್ಯಾಲಿಡಿಟಿ 1ಜಿಬಿ ಡೇಟಾ ಪ್ರತಿದಿನ, ಅನಿಯಮಿತ ವಾಯ್ಸ್ ಕಾಲ್ ಸಿಗಲಿದೆ. 448 ರು ಪ್ಲ್ಯಾನ್ ನಲ್ಲಿ 1ಜಿಬಿ ಡೇಟಾ ಪ್ರತಿದಿನ, ಅನಿಯಮಿತ ವಾಯ್ಸ್ ಕಾಲ್ ಎಸ್ಟಿಡಿ ಹಾಗೂ ರಾಷ್ಟ್ರೀಯ ರೋಮಿಂಗ್ (70ದಿನಗಳ ತನಕ) ಸಿಗಲಿದೆ.
799 ರು ಪ್ಲ್ಯಾನ್ ನಲ್ಲಿ 84ಜಿಬಿ ಡೇಟಾ, ಅನಿಯಮಿತ ಕರೆ, ಎಸ್ಎಂಎಸ್ ಸೌಲಭ್ಯಗಳು 28ದಿನಗಳ ತನಕ ಸಿಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Airtel now revises two of its existing plans -- Rs 349 and Rs 549 with the aim to offer more data.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ