ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ ಇಂಡಿಯಾ 6 ಹೊಸ ತಡೆರಹಿತ ಅಂತಾರಾಷ್ಟ್ರೀಯ ವಿಮಾನ ಪ್ರಾರಂಭಿಸಲು ಸಿದ್ಧತೆ

|
Google Oneindia Kannada News

ನವದೆಹಲಿ, ನವೆಂಬರ್‌ 23: ಮುಂಬೈಯಿಂದ ನ್ಯೂಯಾರ್ಕ್, ಪ್ಯಾರಿಸ್ ಮತ್ತು ಫ್ರಾಂಕ್‌ಫರ್ಟ್‌ನೊಂದಿಗೆ ಸಂಪರ್ಕಿಸುವ ಹೊಸ ವಿಮಾನಯಾನವನ್ನು ಏರ್ ಇಂಡಿಯಾ ಪ್ರಕಟಿಸಿದೆ. ಈ ಮೂಲಕ ಏರ್ ಇಂಡಿಯಾ ತನ್ನ ಜಾಗತಿಕ ಹೆಜ್ಜೆಗುರುತನ್ನು ವಿಸ್ತರಿಸುವುದಾಗಿ ಬುಧವಾರದಂದು ಘೋಷಿಸಿದೆ.

ಇದರೊಂದಿಗೆ ನವದೆಹಲಿಯನ್ನು ಕೋಪನ್‌ಹೇಗನ್, ಮಿಲನ್ ಮತ್ತು ವಿಯೆನ್ನಾದೊಂದಿಗೆ ಸಂಪರ್ಕಿಸುವ ತಡೆರಹಿತ ಅಂತಾರಾಷ್ಟ್ರೀಯ ವಿಮಾನಗಳನ್ನು ಆರಂಭಿಸುವುದಾಗಿ ಕಂಪೆನಿ ತಿಳಿಸಿದೆ.

120 ಕೋಟಿ ಮೌಲ್ಯದ ಡ್ರಗ್ಸ್‌ ವಶ, ಮಾಜಿ ಪೈಲಟ್ ಸೇರಿ 6 ಮಂದಿ ಬಂಧನ120 ಕೋಟಿ ಮೌಲ್ಯದ ಡ್ರಗ್ಸ್‌ ವಶ, ಮಾಜಿ ಪೈಲಟ್ ಸೇರಿ 6 ಮಂದಿ ಬಂಧನ

ಹೊಸದಾಗಿ ಗುತ್ತಿಗೆ ಪಡೆದ ವಿಮಾನಗಳೊಂದಿಗೆ ತನ್ನ ಉದ್ಯೋಗಿಗಳನ್ನು ಹೆಚ್ಚುಸುವಲ್ಲಿ ಮತ್ತು ಅಸ್ತಿತ್ವದಲ್ಲಿರುವ ವಿಮಾನಗಳನ್ನು ಸಕ್ರಿಯ ಸೇವೆಗೆ ಹಿಂದಿರುಗಿಸುವಲ್ಲಿ ಏರ್‌ ಇಂಡಿಯಾ ಕೆಲಸವನ್ನು ಮುಂದುವರೆಸುತ್ತಿರುವುದರಿಂದ ಈ ಬೆಳವಣಿಗೆಯು ನಡೆಯುತ್ತಿದೆ. ಮುಂಬೈ ಹಾಗೂ ನ್ಯೂಯಾರ್ಕ್ ನಡುವೆ ವಿಮಾನ ಸೇವೆಯು ಬಿ777-200 ಎಲ್‌ಆರ್‌ ವಿಮಾನವನ್ನು ಬಳಸಿಕೊಂಡು ಜಾನ್ ಎಫ್ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಫೆಬ್ರವರಿ 14, 2023 ರಿಂದ ಪ್ರತಿದಿನ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗಿದೆ.

Air India is going to start 6 new non-stop international flights to America, Europe

ದೆಹಲಿಯಿಂದ ನ್ಯೂಯಾರ್ಕ್‌ನ ಜಾನ್ ಎಫ್ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಏರ್ ಇಂಡಿಯಾದ ಅಸ್ತಿತ್ವದಲ್ಲಿರುವ ದೈನಂದಿನ ಸೇವೆ ಮತ್ತು ನೆವಾರ್ಕ್ ಲಿಬರ್ಟಿ ವಿಮಾನ ನಿಲ್ದಾಣಕ್ಕೆ 4 ಸಾಪ್ತಾಹಿಕ ವಿಮಾನಗಳನ್ನು ಹಾರಿಸಲಿದೆ. ಇದು ಏರ್ ಇಂಡಿಯಾದ ಭಾರತ ಹಾಗೂ ಯುಎಸ್ ನಡುವೆ ವಾರಕ್ಕೆ 47 ತಡೆರಹಿತ ವಿಮಾನ ಸೇವೆಯನ್ನು ನೀಡಲಿದೆ.

ಏರ್‌ ಇಂಡಿಯಾದಲ್ಲಿ ಇನ್ನೂ ಪೊಡಿ ಇಡ್ಲಿ, ಆಲೂ ಪರಾಠ, ಚಿಕನ್ ಚೆಟ್ಟಿನಾಡು ಲಭ್ಯ!ಏರ್‌ ಇಂಡಿಯಾದಲ್ಲಿ ಇನ್ನೂ ಪೊಡಿ ಇಡ್ಲಿ, ಆಲೂ ಪರಾಠ, ಚಿಕನ್ ಚೆಟ್ಟಿನಾಡು ಲಭ್ಯ!

ಏರ್ ಇಂಡಿಯಾ ಯುರೋಪ್‌ಗೆ ಫೆಬ್ರವರಿ 1, 2023ರಿಂದ ವಾರಕ್ಕೆ ನಾಲ್ಕು ಬಾರಿ ದೆಹಲಿಯಿಂದ ಮಿಲಗೆ ವಿಮಾನ ಸೇವೆ ಇರಲಿದೆ. ಇದಲ್ಲದೆ ದೆಹಲಿ ಹಾಗೂ ವಿಯೆನ್ನಾ ಮತ್ತು ದೆಹಲಿ ಹಾಗೂ ಕೋಪನ್‌ಹೇಗನ್‌ಗಳಲ್ಲಿ ವಾರಕ್ಕೆ ಮೂರು ಬಾರಿ ವಿಮಾನಗಳನ್ನು ಕ್ರಮವಾಗಿ ಫೆಬ್ರವರಿ 18 ಮತ್ತು ಮಾರ್ಚ್ 1, 2023 ರಿಂದ ಪ್ರಾರಂಭಿಸಲಾಗುತ್ತದೆ. ಈ ಎಲ್ಲಾ ವಿಮಾನಗಳು 18 ಬಿಸಿನೆಸ್ ಕ್ಲಾಸ್ ಮತ್ತು 238 ಎಕಾನಮಿ ಕ್ಲಾಸ್ ಆಸನಗಳನ್ನು ಒಳಗೊಂಡಿರುವ ಏರ್ ಇಂಡಿಯಾದ ಬಿ787-8 ಡ್ರೀಮ್‌ಲೈನರ್ ವಿಮಾನದಿಂದ ಸೇವೆಯನ್ನು ಒಳಗೊಂಡಿರುತ್ತದೆ

Air India is going to start 6 new non-stop international flights to America, Europe

ಈ ವಿಮಾನಗಳ ಆರಂಭದೊಂದಿಗೆ ಏರ್ ಇಂಡಿಯಾ ಯುರೋಪ್‌ನ ಏಳು ನಗರಗಳಿಗೆ ವಾರಕ್ಕೆ 79 ತಡೆರಹಿತ ವಿಮಾನಗಳೊಂದಿಗೆ ಸೇವೆ ಸಲ್ಲಿಸುತ್ತದೆ. ಇದಲ್ಲದೆ ಯುನೈಟೆಡ್ ಕಿಂಗ್‌ಡಮ್‌ಗೆ 48 ಮತ್ತು ಕಾಂಟಿನೆಂಟಲ್ ಯುರೋಪ್‌ಗೆ 31 ವಿಮಾನಗಳನ್ನು ಸೇವೆಗೆ ನೀಡಲಿದೆ.

ಅಂತಾರಾಷ್ಟ್ರೀಯ ವಿಮಾನಗಳ ಸೇವೆ ವಿಸ್ತರಣೆಯ ಕುರಿತು ಪ್ರತಿಕ್ರಿಯಿಸಿದ ಏರ್ ಇಂಡಿಯಾದ ಸಿಇಒ ಮತ್ತು ಎಂಡಿ ಕ್ಯಾಂಪ್‌ಬೆಲ್ ವಿಲ್ಸನ್, "ನಮ್ಮ ಪಂಚವಾರ್ಷಿಕ ಪರಿವರ್ತನಾ ಯೋಜನೆಯಾದ ವಿಹಾನ್‌ ಎಐ ಪ್ರಮುಖ ಅಂಶವೆಂದರೆ ಭಾರತದ ಜಾಗತಿಕ ಮಾರ್ಗಗಳನ್ನು ಬಲಪಡಿಸುವುದು, ಭಾರತದ ಪ್ರಮುಖ ನಗರಗಳನ್ನು ಸಂಪರ್ಕಿಸುವುದಾಗಿದೆ. ನ್ಯೂಯಾರ್ಕ್, ಮಿಲನ್, ವಿಯೆನ್ನಾ, ಕೋಪನ್ ಹ್ಯಾಗನ್, ಪ್ಯಾರಿಸ್ ಮತ್ತು ಫ್ರಾಂಕ್‌ಫರ್ಟ್‌ಗೆ ಈ ಹೊಸ ತಡೆರಹಿತ ವಿಮಾನಗಳ ಪರಿಚಯಿಸುವುದು ಕೂಡ ಆ ಪ್ರಯಾಣದ ಮತ್ತೊಂದು ಪ್ರಯತ್ನವಾಗಿದೆ. ಇದು ನಮ್ಮ ವಿಮಾನ ಉದ್ಯೋಗಿಗಳ ಪಡೆಯು ವಿಸ್ತರಿಸುತ್ತಿದ್ದಂತೆ ವೇಗವನ್ನು ಪಡೆಯುತ್ತದೆ'' ಎಂದು ತಿಳಿಸಿದ್ದಾರೆ.

English summary
Air India on Wednesday announced the expansion of its global footprint with the launch of new flights connecting Mumbai with New York, Paris and Frankfurt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X