• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅದಿತಿಯಿಂದ ಸ್ಯಾಮ್‍ಸಂಗ್ ಗ್ಯಾಲಕ್ಸಿ ನೋಟ್5 ಅನಾವರಣ

By Mahesh
|

ಬೆಂಗಳೂರು, ಸೆ. 28: ದೇಶದಲ್ಲಿ ಅತಿ ವೇಗದಲ್ಲಿ ಬೆಳೆಯುತ್ತಿರುವ ಬೃಹತ್ ಎಲೆಕ್ಟ್ರಾನಿಕ್ಸ್ ರೀಟೆಲ್ ಚೈನ್ ಆಗಿರುವ ರಿಲಯನ್ಸ್ ಡಿಜಿಟಲ್ ನಲ್ಲಿ ವಿಶ್ವದ ಅತ್ಯಂತ ಸುಧಾರಿತ ಸ್ಮಾಟ್ ಫೋನ್ ಸ್ಯಾಮ್‍ಸಂಗ್ ಗ್ಯಾಲಕ್ಸಿ ನೋಟ್5 ಬಿಡುಗಡೆಯಾಯಿತು.

ಗ್ರಾಹಕರಿಗೆ ಅತ್ಯಾಧುನಿಕ ಹಾಗೂ ಉತ್ತಮ ತಂತ್ರಜ್ಞಾನ ತಲುಪಿಸುವಲ್ಲಿ ಖ್ಯಾತಿಯನ್ನು ಪಡೆದಿರುವಂಥ ರಿಲಯನ್ಸ್ ಡಿಜಿಟಲ್, ಈ ಒಂದು ಸ್ಮಾರ್ಟ್ ಫೋನ್ ಅನುಭವವನ್ನು ಗ್ರಾಹಕರಿಗೆ ತಲುಪಿಸುವ ನಿಟ್ಟಿನಲ್ಲಿ ಸ್ಯಾಮ್‍ಸಂಗ್ ಇಂಡಿಯಾ ಎಲೆಕ್ಟ್ರಾನಿಕ್ಸ್ ಜತೆ ಸಹಭಾಗಿತ್ವ ಪಡೆದುಕೊಂಡಿದೆ. [ಸ್ಯಾಮ್ ಸಂಗ್ ದಬ್ಬಿ ಅಗ್ರಪಟ್ಟಕ್ಕೇರಿದ ಮೈಕ್ರೋಮ್ಯಾಕ್ಸ್]

ಅಭೂತಪೂರ್ವ ವೇದಿಕೆಯಲ್ಲಿ ನಡೆದ ಈ ಸ್ಯಾಮ್‍ಸಂಗ್ ಗ್ಯಾಲಕ್ಸಿ ನೋಟ್ 5ರ ಬಿಡುಗಡೆ ಸಮಾರಂಭದಲ್ಲಿ ಖ್ಯಾತ ಬಾಲಿವುಡ್ ತಾರೆಯಾಗಿರುವ ಅದಿತಿ ರಾವ್ ಹೈದರಿ ಪಾಲ್ಗೊಂಡು, ಪ್ರೇಕ್ಷಕರನ ಕಣ್ಮನ ಸೆಳೆದರು.

ರಿಲಯನ್ಸ್ ಡಿಜಿಟಲ್ ಮೂಲಕ ಸ್ಮಾಮ್‍ಸಂಗ್ ಗ್ಯಾಲಕ್ಸಿ ನೋಟ್5ಕ್ಕೆ ಪ್ರೀಬುಕ್ಕಿಂಗ್ ಮಾಡಿದ ಕೆಲವು ಅದೃಷ್ಟಶಾಲಿ ಗ್ರಾಹಕರಿಗೆ, ನಟಿ ಅದಿತಿ ರಾವ್ ಹೈದರಿ ಅವರು ಸ್ಮಾರ್ಟ್ ಫೋನ್ ವಿತರಣೆ ಮಾಡಿದರು. ರಿಲಯನ್ಸ್ ಡಿಜಿಟಲ್, ಸ್ಯಾಮ್‍ಸಂಗ್ ಗ್ಯಾಲಕ್ಸಿ ನೋಟ್5ಗೆ ಪ್ರೀಬುಕ್ ಮಾಡುವುದಕ್ಕೆ ವಿಶೇಷ ಅವಕಾಶವೊಂದನ್ನು ಕಲ್ಪಿಸಿದ್ದು, ಅಲ್ಲಿ ಬುಕ್ ಮಾಡಿದ ಗ್ರಾಹಕರು ಬಿಡುಗಡೆಯಾದ ಮೊದಲ ದಿನವೇ ಫೋನ್ ಅನ್ನು ಪಡೆದುಕೊಂಡರು.

ಸ್ಯಾಮ್‍ಸಂಗ್ ನ ಸಿಗ್ನೇಚರ್ ಟೂಲ್ಸ್ ಎಸ್ ಪೆನ್ ಲಭ್ಯ

ಸ್ಯಾಮ್‍ಸಂಗ್ ನ ಸಿಗ್ನೇಚರ್ ಟೂಲ್ಸ್ ಎಸ್ ಪೆನ್ ಲಭ್ಯ

ಹೊಸ ವಿನ್ಯಾಸದ ಜತೆ ಹೊರ ಬಂದಿರುವ ಸ್ಯಾಮ್‍ಸಂಗ್ ಗ್ಯಾಲಕ್ಸಿ ನೋಟ್ 5 ಅಸಾಮಾನ್ಯವಾಗಿರುವ ಪ್ರೊಡಕ್ಟಿವಿಟಿ ಟೂಲ್ಸ್ ಅನ್ನು ಕೊಡುತ್ತಿದ್ದು, ಅದರಲ್ಲಿ ಸ್ಯಾಮ್‍ಸಂಗ್ ನ ಸಿಗ್ನೇಚರ್ ಟೂಲ್ಸ್ ಎಂದೇ ಖ್ಯಾತಿ ಪಡೆದಿರುವ ಎಸ್ ಪೆನ್ ಸೌಲಭ್ಯವಿದೆ.

ಇದರ ಮೂಲಕ ಹೆಚ್ಚು ಕ್ಷಮತೆ ಪಡೆಯಲು ಸಾಧ್ಯವಿದೆ. ಈ ಸ್ಮಾರ್ಟ್ ಫೋನ್ ರೂಪ ಹಾಗೂ ಉದ್ಯಮದಲ್ಲೇ ಹೆಚ್ಚು ಜನಪ್ರಿಯವಾಗಿರುವ ಲಕ್ಷಣಗಳ ಅದ್ಭುತ ಸಂಯೋಗವಾಗಿದೆ.

ಹೆಚ್ಚು ಸದೃಢವಾಗಿರುವ ಪ್ರೊಸೆಸರ್

ಹೆಚ್ಚು ಸದೃಢವಾಗಿರುವ ಪ್ರೊಸೆಸರ್

ಹೆಚ್ಚು ಸದೃಢವಾಗಿರುವ ಪ್ರೊಸೆಸರ್ ಇದೆ. ಇದು 4 ಜಿಬಿ RAM ಸಾಮರ್ಥ್ಯವನ್ನು ಹೊಂದಿದ್ದು, ಇದು ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲೇ ಶಕ್ತಿಶಾಲಿ ಪ್ರೊಸೆಸಿಂಗ್ ಶಕ್ತಿಯನ್ನು ಹೊಂದಿರುವ ಮೊಬೈಲ್ ಎನಿಸಿಕೊಂಡಿದೆ. ಇದರ ನೆರವಿನಿಂದ ಬಳಕೆದಾರರು ಸೀಮಾತೀತ ಮಲ್ಟಿಟಾಸ್ಕಿಂಗ್ ಅವಕಾಶ ಪಡೆಯುತ್ತಾರೆ. ಮೆಸೇಜ್ ಜತೆಗೆ ಸಾಮಾಜಿಕ ತಾಣವನ್ನು ಬೇಗ ಅಪ್‍ಡೇಟ್ ಮಾಡಬಹುದು. ಗ್ರಾಫಿಕ್ಸ್ ಗಳು ಹೆಚ್ಚಾಗಿರುವ ಗೇಮ್ ಗಳನ್ನು ಲ್ಯಾಗ್ ಟೈಮ್ ತೊಂದರೆ ಇಲ್ಲದೆ, ಆಡಲು ಸಾಧ್ಯವಿದೆ.

ಪ್ರೀಬುಕ್ಕಿಂಗ್ ಮೂಲಕ ಮೊದಲ ಬಾರಿಗೆ ಮಾರಾಟ

ಪ್ರೀಬುಕ್ಕಿಂಗ್ ಮೂಲಕ ಮೊದಲ ಬಾರಿಗೆ ಮಾರಾಟ

ನಾವು ಗ್ರಾಹಕರಿಗೆ ಅತ್ಯುನ್ನತ ತಂತ್ರಜ್ಞಾನ ದೊರೆಯುವಂತೆ ಮಾಡುವ ಪ್ರಯತ್ನ ಮಾಡುತ್ತಲೇ ಇರುತ್ತೇವೆ. ಅದೇ ರೀತಿ ಸ್ಯಾಮ್‍ಸಂಗ್ ಗ್ಯಾಲಕ್ಸಿ ನೋಟ್5 ಅನ್ನು ಗ್ರಾಹಕರ ಮುಂದೆ ಪ್ರದರ್ಶಿಸಲು ಹಾಗೂ ಪ್ರೀಬುಕ್ಕಿಂಗ್ ಮಾಡುವ ಮೂಲಕ ದೇಶದಲ್ಲೇ ಮೊದಲ ಬಾರಿಗೆ ಈ ಸ್ಮಾರ್ಟ್ ಫೋನ್ ಪಡೆಯುವ ಅವಕಾಶ ಸೃಷ್ಟಿಸಿದ್ದೇವೆ ಎಂದು ರಿಲಯನ್ಸ್ ಡಿಜಿಟಲ್ ನ ಸಿಇಒ ಬ್ರಿಯಾನ್ ಬೇಡ್ ಹೇಳಿದರು.

ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ಇಂಡಿಯಾ

ಗ್ಯಾಲಕ್ಸಿ ನೋಟ್ 5ನಲ್ಲಿರುವ ರಿವರ್ಡ್ ಕ್ಯಾಮೆರಾ ಮೋಡ್, ಸ್ಮಾರ್ಟ್ಫೋನ್ ನ ವಿಡಿಯೋ ಲೈವ್ ಬ್ರಾಡ್ ಕಾಸ್ಟಿಂಗ್ ಸಾಮರ್ಥ್ಯವನ್ನು ಹೆಚ್ಚಿಸಿದೆ. ಇದಲ್ಲದೆ, ವಿಡಿಯೋ ಕೊಲಾಜ್ ಹಾಗೂ ವಿಡಿಯೋ ಹೈಲೈಟ್ ಲಕ್ಷಣಗಳು ಕೂಡ ಭಾರತದ ಆರ್ ಅಂಡ್ ಡಿ ತಂಡದ ಪ್ರಯತ್ನವಾಗಿದೆ. ಅದೇ ರೀತಿ ಬ್ಯುಸಿನೆಸ್ ಪ್ರೊಫೈಲ್ ಲಕ್ಷಣದ ಮೂಲಕ, ಉದ್ಯಮಿಗಳಿಗೆ ತಮ್ಮ ಉದ್ಯಮವನ್ನು ಪ್ರಚುರ ಪಡಿಸಲು ಅವಕಾಶ ನೀಡಿದೆ.

ಸ್ಯಾಮ್‍ಸಂಗ್ ನ ಸಿಗ್ನೇಚರ್ ಟೂಲ್ಸ್ ಎಸ್ ಪೆನ್ ಲಭ್ಯ

ಸ್ಯಾಮ್‍ಸಂಗ್ ನ ಸಿಗ್ನೇಚರ್ ಟೂಲ್ಸ್ ಎಸ್ ಪೆನ್ ಲಭ್ಯ

ಸ್ಯಾಮ್‍ಸಂಗ್ ಗ್ಯಾಲಕ್ಸಿ ನೋಟ್ ಜಗತ್ತಿನ ಮೊಬೈಲ್ ವಿಭಾಗದಲ್ಲಿನ ಐಕಾನ್ ಆಗಿದ್ದು, ಅದರಲ್ಲೂ ಸುಂದರವಾಗಿ ನಿರ್ಮಿಸಿರುವ ಗ್ಯಾಲಕ್ಸಿ ನೋಟ್5 ಎಸ್ ಪೆನ್ ಆಧಾರಿತವಾಗಿ ಉತ್ಪಾದಿಸಿ ಇನ್ನೊಂದು ಹಂತಕ್ಕೆ ಸಾಗಿದೆ

ವಿಶಿಷ್ಟ ಸೌಲಭ್ಯಗಳುಳ್ಳ ಸ್ಮಾರ್ಟ್ ಫೋನ್

ವಿಶಿಷ್ಟ ಸೌಲಭ್ಯಗಳುಳ್ಳ ಸ್ಮಾರ್ಟ್ ಫೋನ್

4 ಜಿಬಿ RAM, ಎಸ್ ಪೆನ್ ಅಲ್ಲದೆ ರಿವರ್ಡ್ ಕೆಮರಾ ಮೋಡ್, ಲೈವ್ ವಿಡಿಯೋ ಬ್ರಾಡ್ ಕಾಸ್ಟ್ , ವಿಡಿಯೋ ಕಲಾಜ್, ವಿಡಿಯೋ ಮುಖ್ಯಾಂಶ, ಪಿಡಿಎಫ್ ಸುಲಭ ನಿರ್ವಹಣೆ, 5.7 ಇಂಚ್ ಕ್ವಾಡ್ ಎಚ್ ಡಿ ಸೂಪರ್ AMOLED ಡಿಸ್ ಪ್ಲೇ, 4K UHD ವಿಡಿಯೋ ಫಿಲ್ಮಿಂಗ್, ಲೈವ್ ಬ್ರಾಡ್ ಕಾಸ್ಟಿಂಗ್, ಸ್ಮಾರ್ಟ್ ಫೋನ್, ಟ್ಯಾಬ್ಲೆಟ್

ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಕೋ

ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಕೋ

84ದೇಶಗಳಲ್ಲಿ ಸುಮಾರು 3,19,000 ಉದ್ಯೋಗಿಗಳನ್ನು ಹೊಂದಿರುವ ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಕೋ. ಲಿಮಿಟೆಡ್ ಇಂಟರ್ನೆಟ್, ಸ್ಮಾರ್ಟ್ ಫೋನ್, ಕೆಮರಾ, ಪ್ರಿಂಟರ್ಸ್ ಇನ್ನಿತರ ಸಾಧನಗಳನ್ನು ಪರಿಚಯಿಸಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Reliance Digital, India’s largest and fastest growing electronics retail chain, today unveiled the world’s most advanced smartphone, Samsung Galaxy Note5 in Bengaluru. Bollywood Diva Aditi Rao Hydari who captivated the audience with a spectacular stage launch of the Samsung Galaxy Note5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more