Adani Group: ಇತಿಹಾಸ ನಿರ್ಮಿಸಿದ ಅದಾನಿ ಗ್ರೂಪ್, 90,000 ಕೋಟಿ ರೂಪಾಯಿ ಆದಾಯ ದಾಖಲು
ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಅತಿದೊಡ್ಡ ಉದ್ದಿಮೆಗಳನ್ನು ಸ್ಥಾಪಿಸಿ, ಭಾರತದ ಹೆಸರನ್ನು ಜಾಗತಿಕ ಮಟ್ಟದಲ್ಲಿ ಪ್ರಕಾಶಿಸುವಂತೆ ಮಾಡುತ್ತಿರುವ ಅದಾನಿ ಗ್ರೂಪ್ ಇದೀಗ ಮತ್ತೊಂದು ಇತಿಹಾಸ ನಿರ್ಮಾಣ ಮಾಡಿದೆ. ಭಾರತದ ಅತಿದೊಡ್ಡ ಮೂಲಸೌಕರ್ಯ ಸಂಸ್ಥೆ ಆಗಿರುವ ಅದಾನಿ ಗ್ರೂಪ್ ತನ್ನ ಹೊಸ ತ್ರೈಮಾಸಿಕ ವರದಿ ಬಿಡುಗಡೆ ಮಾಡಿದ್ದು, ದಾಖಲೆ ಪ್ರಮಾಣದಲ್ಲಿ ಆದಾಯ ಸಂಗ್ರಹ ಮಾಡಿದೆ. ಅದಾನಿ ಪೋರ್ಟ್‌ಫೋಲಿಯೋ ಟ್ರೇಲಿಂಗ್-ಟ್ವೆಲ್ವ್-ಮಂತ್ (TTM) ಮತ್ತು Q1FY26 ಹಣಕಾಸು ವರದಿಯ ಜೊತೆಗೆ ಅದರ ಕ್ರೆಡಿಟ್ ಮಾಹಿತಿಯನ್ನು ಕೂಡ ಇದೀಗ ಪ್ರಕಟಿಸಿದೆ.
ಅದಾನಿ ಗ್ರೂಪ್ EBITDA ಪ್ರಥಮ ಬಾರಿಗೆ ಟ್ರೇಲಿಂಗ್-ಟ್ವೆಲ್ವ್-ಮಂತ್ ಆಧಾರದಲ್ಲಿ 90,000 ಕೋಟಿಯ ಮಿತಿ ದಾಟಿದೆ ಮತ್ತು ಈ ಮೂಲಕ ಅದಾನಿ ಗ್ರೂಪ್‌ನ Q1 EBITDA ಕೂಡ ದಾಖಲೆ ಮಟ್ಟ ತಲುಪಿದೆ. ಈ ದೃಢ ಪ್ರದರ್ಶನವು ಹೊಸ ಯೋಜನೆಗಳ (ಪ್ರಮುಖವಾಗಿ AEL ಅಡಿಯಲ್ಲಿ ವಿಮಾನ ನಿಲ್ದಾಣಗಳು) ಜೊತೆಗೆ ಅದಾನಿ ಗ್ರೀನ್ ಎನರ್ಜಿ, ಅದಾನಿ ಎನರ್ಜಿ ಸೊಲ್ಯೂಶನ್ಸ್, ಅದಾನಿ ಪೋರ್ಟ್ಸ್ & SEZ, ಮತ್ತು ಅಂಬುಜಾ ಸಿಮೆಂಟ್ಸ್ ಮುಂತಾದ ಬ್ಯುಸಿನೆಸ್‌ನಲ್ಲಿ ನಿರಂತರ ಬೆಳವಣಿಗೆ ದಾಖಲು ಮಾಡಿದೆ. ಇನ್ನು ಈ ವ್ಯವಹಾರ ಮೂಲದಿಂದ ಬಂದ ಬಲವಾದ ಕೊಡುಗೆ AEL ಪ್ರಸ್ತುತ ವ್ಯವಹಾರದಲ್ಲಿ ದಾಖಲೆ ನಿರ್ಮಿಸಿದೆ.

AEL ಪ್ರಸ್ತುತ ವ್ಯವಹಾರದಲ್ಲಿ ಕಂಡುಬಂದ ನಕಾರಾತ್ಮಕ ಬೆಳವಣಿಗೆ ಮುಖ್ಯವಾಗಿ IRM ಅಂದ್ರೆ ಒಕ್ಕೂಟಿತ ಸಂಪನ್ಮೂಲ ನಿರ್ವಹಣೆಯಲ್ಲಿ ವ್ಯಾಪಾರ ಪ್ರಮಾಣ ಮತ್ತು ಸೂಚ್ಯಂಕ ಬೆಲೆ ಅಸ್ಥಿರತೆ ಇರುವುದರಿಂದ ಮೂಡಿದೆ. ನಿರಂತರ EBITDA ವಿಸ್ತರಣೆ ವರ್ಷಾವಧಿಯ ಯೋಜಿತ ಮೌಲ್ಯದ ಹೂಡಿಕೆಗೆ (1.5-1.6 ಲಕ್ಷ ಕೋಟಿ ರೂಪಾಯಿ ವರ್ಷಕ್ಕೆ) ಬಲವಾದ ಬೆಂಬಲ ಒದಗಿಸುತ್ತದೆ.
53,843 ಕೋಟಿ ರೂಪಾಯಿ ನಗದು
ಕ್ರೆಡಿಟ್ ವಿಭಾಗದಲ್ಲಿ, ಪೋರ್ಟ್‌ಫೋಲಿಯೊ ಮಟ್ಟದ ಸಾಲದ ಪ್ರಮಾಣ ಜಾಗತಿಕವಾಗಿ ಅತ್ಯಂತ ಕಡಿಮೆ ಮಟ್ಟದಲ್ಲಿ (Net Debt to EBITDA 2.6 ಪಟ್ಟು) ಮುಂದುವರಿದು ಬಂದಿದೆ ಹಾಗೂ 53,843 ಕೋಟಿ ರೂಪಾಯಿ ಬಲವಾದ ನಗದು ಇರಿಸಲಾಗುತ್ತಿದೆ. ಈ ಮೂಲಕ ಅದಾನಿ ಗ್ರೂಪ್ ತನ್ನ ಹೊಸ ತ್ರೈಮಾಸಿಕ ವರದಿಯಲ್ಲಿ ಮಹತ್ವದ ಬೆಳವಣಿಗೆ ದಾಖಲು ಮಾಡಿರುವುದು ಚೈತನ್ಯ ತುಂಬುವ ಜೊತೆಗೆ, ಜಗತ್ತಿನ ಮೂಲೆ ಮೂಲೆಯಲ್ಲೂ ತನ್ನ ಮತ್ತಷ್ಟು ಬ್ಯುಸಿನೆಸ್ ಮೂಲಗಳನ್ನು ಶುರು ಮಾಡಲು ಹುಮ್ಮಸ್ಸು ಕೂಡ ನೀಡಿದೆ.
ಕಂಪನಿ ಮಾಹಿತಿಯಂತೆ Q1FY26 ಮುಖ್ಯಾಂಶಗಳು
ಅದಾನಿ ಎಂಟರ್‌ಪ್ರೈಸಸ್ (AEL): ಇಂಕ್ಯುಬೇಟೆಡ್ ವ್ಯವಹಾರಗಳು ಉನ್ನತ ಬೆಳವಣಿಗೆ ಹಾದಿಯಲ್ಲಿದೆ.
ANIL ಭಾರತದಲ್ಲಿ ಮೊದಲ ಆಫ್-ಗ್ರಿಡ್ 5 ಮೆಗಾವಾಟ್ ಗ್ರೀನ್ ಹೈಡ್ರೋಜನ್ ಪೈಲಟ್ ಪ್ಲಾಂಟ್ ಅನ್ನು ಯಶಸ್ವಿಯಾಗಿ ನಿಭಾಯಿಸಿದೆ.
ಪ್ಯಾಕ್ಸ್ ಮೂಮೆಂಟ್ಸ್ (Pax movements) ವಾರ್ಷಿಕ ಹೋಲಿಕೆ ಮೇಲೆ (YoY) ಶೇ. 3 ಏರಿಕೆ ಕಂಡಿದ್ದು Q1FY26 ಅವಧಿಯಲ್ಲಿ ಈಗ 23.4 ದಶಲಕ್ಷಕ್ಕೆ (Mn) ತಲುಪಿದೆ. ಸರಕು ಸಾಗಣೆ (Cargo movements) ವಾರ್ಷಿಕ ಹೋಲಿಕೆ ಮೇಲೆ (YoY) 4% ಏರಿಕೆ ಕಂಡು Q1FY26 ಸಾಲಿನಲ್ಲಿ 0.28 ಮಿಲಿಯನ್ ಮೆಟ್ರಿಕ್ ಟನ್ (MMT) ತಲುಪಿದೆ.












Click it and Unblock the Notifications