Adani Group: ಅದಾನಿ ವಿಲ್ಮೇರ್ ಲಿಮಿಟೆಡ್ ಪಾಲಿನ ವಿಚಾರದಲ್ಲಿ ಅದಾನಿ ಗ್ರೂಪ್ ವತಿಯಿಂದ ಮಹತ್ವದ ನಿರ್ಧಾರ
ಅದಾನಿ ಗ್ರೂಪ್ ಜಗತ್ತಿನ ಅತಿದೊಡ್ಡ ಕಂಪನಿಗಳಲ್ಲಿ ಒಂದಾಗಿದ್ದು, ಭಾರತದ ಅಭಿವೃದ್ಧಿಗಾಗಿ ಭಾರಿ ದೊಡ್ಡ ಕೊಡುಗೆ ನೀಡುತ್ತಿದೆ. ಅದೇ ರೀತಿಯಾಗಿ ಭಾರತದ ಮೂಲಸೌಕರ್ಯ ಕ್ಷೇತ್ರ ಸೇರಿ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳಲ್ಲಿ ಅದಾನಿ ಗ್ರೂಪ್ ತೊಡಗಿಸಿಕೊಂಡಿದೆ. ಹೀಗಾಗಿ ಅದಾನಿ ಗ್ರೂಪ್ ಮೇಲೆ ಭಾರತೀಯರಿಗೆ ಸಾಕಷ್ಟು ಭರವಸೆಯು ಇದ್ದು, ಇದೀಗ ಅದಾನಿ ವಿಲ್ಮೇರ್ ಲಿಮಿಟೆಡ್ ಪಾಲಿನ ವಿಚಾರದಲ್ಲಿ ಅದಾನಿ ಗ್ರೂಪ್ ವತಿಯಿಂದ ಮಹತ್ವದ ನಿರ್ಧಾರ ಕೈಗೊಂಡು ಗಮನ ಸೆಳೆದಿದೆ.
ಇದೀಗ ಅದಾನಿ ವಿಲ್ಮೇರ್ ಲಿಮಿಟೆಡ್ ಸಂಸ್ಥೆಯಲ್ಲಿ ಇದ್ದ ತನ್ನ ಉಳಿದ ಶೇಕಡಾ 7 ರಷ್ಟು ಪಾಲು ಬ್ಲಾಕ್ ಡೀಲ್ ಅಂದ್ರೆ ಬ್ಲಾಕ್ ಒಪ್ಪಂದದ ಮೂಲಕ ಮಾರಾಟ ಮಾಡಿದೆ ಅದಾನಿ ಗ್ರೂಪ್. ಇದು ಬಲವಾದ ಸಾಂಸ್ಥಿಕ ಬೇಡಿಕೆ ಸೆಳೆಯುವ ಜೊತೆಗೆ, ಮಹತ್ವದ ಉತ್ತಮ ಬೆಳವಣಿಗೆಗೆ ಕೂಡ ನಾಂದಿ ಹಾಡಿದೆ ಎನ್ನುತ್ತಿದ್ದಾರೆ ತಜ್ಞರು. ವಹಿವಾಟಿನ ಬಗ್ಗೆ ತಿಳಿದವರ ಪ್ರಕಾರ ವ್ಯಾನ್‌ಗಾರ್ಡ್, ಚಾರ್ಲ್ಸ್ ಶ್ವಾಬ್, ಐಸಿಐಸಿಐ ಪ್ರುಡೆನ್ಶಿಯಲ್ ಎಂಎಫ್, ಎಸ್‌ಬಿಐ ಮ್ಯೂಚುಯಲ್ ಫಂಡ್ ಹಾಗೂ ಟಾಟಾ ಎಂಎಫ್, ಕ್ವಾಂಟ್ ಎಂಎಫ್ ಹಾಗೂ ಬಂಧನ್ ಎಂಎಫ್ ಸೇರಿ ದೇಶೀಯ ಮ್ಯೂಚುಯಲ್ ಫಂಡ್ ಸಂಸ್ಥೆಗಳು ಈ ಪಾಲು ಖರೀದಿ ಮಾಡಿರುವುದು ಮತ್ತಷ್ಟು ಗಮನ ಸೆಳೆದಿದೆ.

ಸಿಂಗಾಪುರ, ಯುಎಇ & ಏಷ್ಯಾದ ವಿವಿಧ ಮಾರುಕಟ್ಟೆಗಳಿಂದ ಹಲವು ಅಂತಾರಾಷ್ಟ್ರೀಯ ಮಟ್ಟದ ಹೂಡಿಕೆದಾರರು ಸಹ ಕ್ಲೀನ್-ಔಟ್ ಬ್ಲಾಕ್ ಖರೀದಿಸಿರುವುದು ಗಮನವನ್ನ ಸೆಳೆದಿದೆ. ಜಿಐಸಿ ರೀತಿಯ ವಿಲ್ಮೇರ್‌ನ ದೀರ್ಘಕಾಲೀನ ಸಾಂಸ್ಥಿಕ ಪಾಲುದಾರರು, ಪ್ರವರ್ತಕ ರಚನೆ ಸ್ಥಿರವಾಗುತ್ತಿದ್ದಂತೆ AWL ಗೆ ತಮ್ಮ ಮಾನ್ಯತೆ ಹೆಚ್ಚಿಸುವ ನಿರೀಕ್ಷೆಯು ಕೂಡ ಇದೆ ಎಂದು ಮಾರುಕಟ್ಟೆ ಮೂಲಗಳು ಮಾಹಿತಿ ನೀಡಿವೆ.
ಅಂದಹಾಗೆ ಈ ವಾರದ ಆರಂಭದಲ್ಲಿ ಅದಾನಿ ಗ್ರೂಪ್ AWLನಲ್ಲಿ ತನ್ನ 13 ಪ್ರತಿಶತ ಪಾಲು ಮಾರಾಟ ಮಾಡಿ ತನ್ನ ಪಾಲನ್ನು 7 ಪ್ರತಿಶತಕ್ಕೆ ಇಳಿಕೆ ಮಾಡಿಕೊಂಡಿತ್ತು. ನವೆಂಬರ್ 20 ರಂದು ಪ್ರತಿ ಷೇರಿಗೆ 275 ರೂಪಾಯಿ ರೀತಿ ಇರಿಸಿದ್ದ ಅಂತಿಮ 7 ಪ್ರತಿಶತ ಕ್ಲೀನ್-ಔಟ್ ಬ್ಲಾಕ್ ಸೇರಿದಂತೆ ಇದೀಗ ಅದಾನಿ ಎಂಟರ್‌ಪ್ರೈಸಸ್ ತನ್ನ 44 ಪ್ರತಿಶತ ಪಾಲನ್ನ ಸಂಪೂರ್ಣ ನಿರ್ಗಮಿಸಿದ ನಂತರ AWL ಅಗ್ರಿ ಬ್ಯುಸಿನೆಸ್ ಲಿಮಿಟೆಡ್ (ಈ ಹಿಂದೆ ಅದಾನಿ ವಿಲ್ಮೇರ್ ಲಿಮಿಟೆಡ್) ಪ್ರಮುಖ ಷೇರುದಾರರ ಪುನರ್ ರಚನೆಯೂ ಪೂರ್ಣಗೊಳಿಸಿದೆ. ಅದಾನಿ ಎಂಟರ್‌ಪ್ರೈಸಸ್‌ನಿಂದ ಇದರಲ್ಲಿ ಒಟ್ಟಾರೆ ಪಾಲು 15,707 ಕೋಟಿ ರೂಪಾಯಿ ಅಷ್ಟಿದೆ. ಪೂರ್ಣ ನಿರ್ಗಮನವು ಈಗ ಪೂರ್ಣಗೊಂಡ ನಂತರ, ಸಿಂಗಾಪುರ ಮೂಲದ ವಿಲ್ಮೇರ್ ಇಂಟರ್‌ನ್ಯಾಷನಲ್ ಅಂದಾಜು ಶೇಕಡಾ 57 ರಷ್ಟು ಪಾಲು ಹೊಂದಿದ ಏಕೈಕ ಪ್ರವರ್ತಕ ಆಗಲಿದೆ. ಇದು AWL ಗೆ ಸ್ಪಷ್ಟ ಬಹುರಾಷ್ಟ್ರೀಯ ಮಾಲೀಕತ್ವದ ಪ್ರೊಫೈಲ್ ಕೂಡ ನೀಡುತ್ತದೆ.
ಹೌದು, ಭಾರತದ ಅತಿದೊಡ್ಡ ಖಾದ್ಯ ತೈಲ ಬ್ರಾಂಡ್ ಆಗಿರುವ ಫಾರ್ಚುನ್ ಬ್ರ್ಯಾಂಡ್ ಮಾರಾಟ ಮಾಡುವ ಅದಾನಿ ವಿಲ್ಮೇರ್ ಲಿಮಿಟೆಡ್, ಗೋಧಿ ಹಿಟ್ಟು, ಅಕ್ಕಿ, ಬೇಳೆಕಾಳು & ಅಡುಗೆ ಮಾಡಲು ಸಿದ್ಧವಾಗಿರುವ ಉತ್ಪನ್ನಗಳಲ್ಲಿ ಸಮಗ್ರ ಆಹಾರ ಸಾಮಗ್ರಿಗಳ ವ್ಯವಹಾರವನ್ನ ಸಹ ನಿರ್ವಹಿಸುತ್ತದೆ. ವಿಲ್ಮೇರ್‌ನ ಜಾಗತಿಕ ಸೋರ್ಸಿಂಗ್ ನೆಟ್‌ವರ್ಕ್ ಮತ್ತು AWL ನ ಆಳವಾದ ದೇಶೀಯ ವಿತರಣೆಯಿಂದ ಕಂಪನಿ ವ್ಯವಹಾರದ ಮೂಲ ಅಂಶಗಳು ಬಲಿಷ್ಠವಾಗಿವೆ ಎಂದು ವಿಶ್ಲೇಷಕರು ಕೂಡ ವಿವರಿಸುತ್ತಾ ಇದ್ದಾರೆ.












Click it and Unblock the Notifications