ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕಾಶ್‌ ಏರ್‌ವೇಸ್‌ನಿಂದ ಬೆಂಗಳೂರು- ಪುಣೆ ನೇರ ವಿಮಾನ

|
Google Oneindia Kannada News

ಬೆಂಗಳೂರು, ನವೆಂಬರ್‌ 3: ಆಕಾಶ್‌ ಏರ್‌ ವಿಮಾನಯಾನ ಸಂಸ್ಥೆ ನವೆಂಬರ್ 23ರಿಂದ ಬೆಂಗಳೂರಿನಿಂದ ಪುಣೆಗೆ ನೇರ ವಿಮಾನಯಾನವನ್ನು ಪ್ರಾರಂಭಿಸುತ್ತಿದೆ. ಇದು ಹೊಸ ಏರ್‌ಲೈನ್‌ ಆಕಾಶ್‌ ಸಂಸ್ಥೆಯಿಂದ ಇದು ಒಂಬತ್ತನೇ ಹೊಸ ಮಾರ್ಗವಾಗಿದೆ.

ಆಗಸ್ಟ್ 7 ರಂದು ತನ್ನ ವಿಮಾನಯಾನ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಆಕಾಶ್‌ ನವೆಂಬರ್ ಅಂತ್ಯದ ವೇಳೆಗೆ ಸುಮಾರು 58 ದೈನಂದಿನ ವಿಮಾನಗಳು ಮತ್ತು 400 ವಾರದ ವಿಮಾನಗಳನ್ನು ದಾಟುವ ನಿರೀಕ್ಷೆಯಿದೆ ಎಂದು ಬುಧವಾರ ಪ್ರಕಟಣೆ ತಿಳಿಸಿದೆ. ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಬೆಂಗಳೂರು ಮತ್ತು ಮುಂಬೈ ನಡುವಿನ ಸಂಪರ್ಕವನ್ನು ನವೆಂಬರ್ 23 ರಿಂದ ಆರು ಮತ್ತು ಏಳನೇ ಬಾರಿಗೆ ಹೆಚ್ಚಿಸಲಾಗುವುದು ಎಂದು ವಿಮಾನಯಾನ ಸಂಸ್ಥೆ ಹೇಳಿದೆ.

ಜಜೀರಾ ಏರ್‌ವೇಸ್‌ನಿಂದ ಕುವೈತ್-ಬೆಂಗಳೂರು ನೇರ ವಿಮಾನ ಸೇವೆಜಜೀರಾ ಏರ್‌ವೇಸ್‌ನಿಂದ ಕುವೈತ್-ಬೆಂಗಳೂರು ನೇರ ವಿಮಾನ ಸೇವೆ

ನವೆಂಬರ್ 23 ರಂದು ಬೆಂಗಳೂರು ಮತ್ತು ಪುಣೆ ನಡುವೆ ಸೇವೆಗಳನ್ನು ಪ್ರಾರಂಭಿಸಿದ ನಂತರ ಆಕಾಶ ಏರ್ ನವೆಂಬರ್ 26 ರಿಂದ ಇದೇ ಮಾರ್ಗದಲ್ಲಿ ಎರಡು ಬಾರಿಗೆ ಹೆಚ್ಚಿಸಲಾಗುತ್ತದೆ. ಮುಂಬೈ, ಅಹಮದಾಬಾದ್, ದೆಹಲಿ, ಚೆನ್ನೈ, ಕೊಚ್ಚಿ, ಗುವಾಹಟಿ ಮತ್ತು ಪುಣೆ ಎಂಬ ಏಳು ನಗರಗಳನ್ನು ಸಂಪರ್ಕಿಸಲು ಆಕಾಶ ಈಗ ಬೆಂಗಳೂರಿನಿಂದ 20 ದೈನಂದಿನ ವಿಮಾನಗಳನ್ನು ಒದಗಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

Aakash Air direct flight to Bengaluru-Pune

ಆಕಾಶ ಏರ್‌ನ ಸಹ- ಸಂಸ್ಥಾಪಕ ಮತ್ತು ಮುಖ್ಯ ವಾಣಿಜ್ಯ ಅಧಿಕಾರಿ ಪ್ರವೀಣ್ ಅಯ್ಯರ್, ಪುಣೆ ಮತ್ತು ಬೆಂಗಳೂರು ಎರಡು ಪ್ರಮುಖ ಐಟಿ ಹಬ್‌ಗಳನ್ನು ಸಂಪರ್ಕಿಸುವುದು. ಕೈಗೆಟುಕುವ ದರಗಳ ಜೊತೆಗೆ ನಮ್ಮ ಸಂಸ್ಥೆ ವರ್ಧಿತ ಸಂಪರ್ಕ ಮತ್ತು ಆಯ್ಕೆಗಳನ್ನು ನೀಡುತ್ತದೆ ಎಂದು ಹೇಳಿದರು.

Aakash Air direct flight to Bengaluru-Pune

ಅಹಮದಾಬಾದ್, ಬೆಂಗಳೂರು, ಕೊಚ್ಚಿ, ಚೆನ್ನೈ, ಮುಂಬೈ, ದೆಹಲಿ, ಗುವಾಹಟಿ, ಅಗರ್ತಲಾ ಮತ್ತು ಪುಣೆ - 9 ನಗರಗಳಲ್ಲಿ ಒಟ್ಟು 13 ಮಾರ್ಗಗಳೊಂದಿಗೆ ಆಕಾಶ ಏರ್ ತನ್ನ ಕಾರ್ಯಾಚರಣೆಯನ್ನು ಹಂತಹಂತವಾಗಿ ಹೆಚ್ಚಿಸುತ್ತಿದೆ.

English summary
Akash Air is starting direct flights from Bengaluru to Pune from November 23. This makes Bengaluru Pune the ninth city on new airline Aakash's routes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X