ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳವಾರ 5G ಸ್ಪೆಕ್ಟ್ರಮ್ ಹರಾಜು ಪ್ರಾರಂಭ

|
Google Oneindia Kannada News

ನವದೆಹಲಿ, ಜುಲೈ. 25: ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಿಂದ ಅನುಮತಿ ಪಡೆದಿದ್ದ 5g ಟೆಲಿಕಾಂ ಸ್ಪೆಕ್ಟ್ರಮ್ ಹರಾಜು ಮಂಗಳವಾರ ಆರಂಭವಾಗಲಿದೆ.

ಒಟ್ಟು 72 ಗಿಗಾಹರ್ಟ್ಜ್ ಸಾಮಾರ್ಥ್ಯದ ಸ್ಪೆಕ್ಟ್ರಮ್ 4.3 ಟ್ರಿಲಿಯನ್ ಕೋಟಿ ಮೌಲ್ಯದ ಮತ್ತು 20 ವರ್ಷಗಳ ಮಾನ್ಯತೆಯ ಅವಧಿಯೊಂದಿಗೆ ಹರಾಜಿನ ಸಮಯದಲ್ಲಿ ಮಾರಾಟವಾಗಲಿದೆ.ಇದಕ್ಕಾಗಿ ಹರಾಜು ಕೂಗಲು ಕೋಟ್ಯಾಧಿಪತಿಗಳು ತಯಾರಾಗುತ್ತಿದ್ದಾರೆ. ಹೀಗಾಗಿ ಹರಾಜಿನ ಬಗ್ಗೆ ಒಂದಷ್ಟು ಮಾಹಿತಿಗಳು ಇಲ್ಲಿವೆ.

5G ಸ್ಪೆಕ್ಟ್ರಂ ಹರಾಜಿಗೆ ಅದಾನಿ ಎಂಟ್ರಿ, ಏರ್‌ಟೆಲ್ ಷೇರುಗಳು ಕುಸಿತ 5G ಸ್ಪೆಕ್ಟ್ರಂ ಹರಾಜಿಗೆ ಅದಾನಿ ಎಂಟ್ರಿ, ಏರ್‌ಟೆಲ್ ಷೇರುಗಳು ಕುಸಿತ

(1.) ಅದಾನಿ ಗ್ರೂಪ್ (ಗೌತಮ್ ಅದಾನಿ), ರಿಲಯನ್ಸ್ ಜಿಯೋ (ಮುಖೇಶ್ ಅಂಬಾನಿ), ಭಾರ್ತಿ ಏರ್‌ಟೆಲ್ (ಸುನೀಲ್ ಭಾರ್ತಿ ಮಿತ್ತಲ್) ಮತ್ತು ವೊಡಾಫೋನ್ ಐಡಿಯಾದಂತಹ ಉದ್ಯಮ ದೈತ್ಯರು 5g ಟೆಲಿಕಾಂ ಸ್ಪೆಕ್ಟ್ರಮ್ ಹರಾಜು ಕಣದಲ್ಲಿದ್ದಾರೆ. ಬಿಡ್ಡಿಂಗ್‌ನಲ್ಲಿ ಕ್ವಾರ್ಟೆಟ್ ಪ್ರಾಬಲ್ಯ ಸಾಧಿಸುವ ಸಾಧ್ಯತೆಯಿದೆ.

(2.) ನಾಲ್ಕು ಕಂಪನಿಗಳು ಒಟ್ಟಾಗಿ ₹21,800 ಕೋಟಿಯಷ್ಟು ಹಣದ ಠೇವಣಿಗಳನ್ನು ಸಲ್ಲಿಸಿವೆ ಎಂದು ಲೈವ್‌ ಮಿಂಟ್ ವರದಿ ಮಾಡಿದೆ. ಇದು ₹ 2.3 ಟ್ರಿಲಿಯನ್ (ಒಟ್ಟು ಮೊತ್ತದ 53%) ಮೌಲ್ಯದ ಸ್ಪೆಕ್ಟ್ರಮ್‌ಗೆ ಬಿಡ್ ಮಾಡಲು ಅವಕಾಶ ನೀಡುತ್ತದೆ.

5G ತಂತ್ರಜ್ಞಾನ ತ್ವರಿತ ಗತಿಯಲ್ಲಿ ಅಳವಡಿಕೆ: ನಿರ್ಮಲಾ ಘೋಷಣೆ5G ತಂತ್ರಜ್ಞಾನ ತ್ವರಿತ ಗತಿಯಲ್ಲಿ ಅಳವಡಿಕೆ: ನಿರ್ಮಲಾ ಘೋಷಣೆ

(3.) ಆದಾಗ್ಯೂ, ಉದ್ಯಮದ ವಿಶ್ಲೇಷಕರನ್ನು ಉಲ್ಲೇಖಿಸಿ ವರದಿ, ಟೆಲಿಕಾಂ ಸೇವಾ ಪೂರೈಕೆದಾರರು ಹರಾಜಿಗೆ ಹಾಕಲಾಗುವ 10 ಬ್ಯಾಂಡ್‌ಗಳಲ್ಲಿ ಆಕ್ರಮಣಕಾರಿಯಾಗಿ ಕೂಗಿ ಹರಾಜು ದೊಡ್ಡ ಮಟ್ಟದ ಕುತೂಹಲ ಕೆರಳಿಸುವ ಸಾಧ್ಯತೆಯಿಲ್ಲ ಎಂದು ಹೇಳಿದೆ.

(4.) ಏತನ್ಮಧ್ಯೆ, IIFL ಸೆಕ್ಯುರಿಟೀಸ್‌ನ ವಿಶ್ಲೇಷಕರು ನಾಲ್ಕು ಪ್ರಮುಖ ಬಿಡ್‌ದಾರರು 3.5GHz, 26 GHz, 850 MHz ಮತ್ತು 900MHz ಬ್ಯಾಂಡ್‌ಗಳಲ್ಲಿ ₹1.14 ಟ್ರಿಲಿಯನ್ ಮೌಲ್ಯದ ಸ್ಪೆಕ್ಟ್ರಮ್ ಅನ್ನು ಖರೀದಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಪ್ರತಿ ಯೂನಿಟ್‌ಗೆ ₹317 ಕೋಟಿ ಮೌಲ್ಯದ ಸುಮಾರು 330 ಯೂನಿಟ್ ಏರ್‌ವೇವ್‌ಗಳನ್ನು ಹೊಂದಿರುವ 3.5Ghz ಬ್ಯಾಂಡ್ ಬಿಡ್‌ದಾರರಲ್ಲಿ ಹೆಚ್ಚು ಜನಪ್ರಿಯವಾಗಿದೆ ಎಂದು ನಿರೀಕ್ಷಿಸಲಾಗಿದೆ.

100MHz ಮತ್ತು 50-80MHz ನಡುವೆ ಆಯ್ಕೆ

100MHz ಮತ್ತು 50-80MHz ನಡುವೆ ಆಯ್ಕೆ

(5.) ಈ ಬ್ಯಾಂಡ್‌ನೊಳಗೆ, ಭಾರತದ ಎರಡು ದೊಡ್ಡ ಸಂಸ್ಥೆಗಳಾದ ಜಿಯೋ ಮತ್ತು ಏರ್‌ಟೆಲ್ ಪ್ರಮುಖ ವಲಯಗಳಲ್ಲಿ 100MHz ಮತ್ತು 50-80MHz ನಡುವೆ ಆಯ್ಕೆಯಾಗುವ ಸಾಧ್ಯತೆಯಿದೆ. ಮುಂಬೈ, ದೆಹಲಿ, ಗುಜರಾತ್ ಮತ್ತು ಕೇರಳದ ಪ್ರಬಲ ವಲಯಗಳಲ್ಲಿ ವೋಡಾಫೋನ್ ಐಡಿಯಾದ ಅನುಗುಣವಾದ ಅಂಕಿ ಅಂಶವು ಸುಮಾರು 40MHz ಆಗಿರಬಹುದು ಎಂದು ವರದಿ ಹೇಳಿದೆ.

(6.) 26GHz ಬ್ಯಾಂಡ್‌ನಲ್ಲಿ ಅತ್ಯಂತ ಅರ್ಥಪೂರ್ಣ ಭಾಗವಹಿಸುವಿಕೆ ನಡೆಯಬಹುದು. ಇಲ್ಲಿ, ಅದಾನಿ ಗ್ರೂಪ್ ದೇಶಾದ್ಯಂತ 100MHz ಅನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ.

ಹೊಸ ತಂತ್ರಜ್ಞಾನಕ್ಕೆ ಬೆಂಬಲ

ಹೊಸ ತಂತ್ರಜ್ಞಾನಕ್ಕೆ ಬೆಂಬಲ

ಸ್ಮಾರ್ಟ್ ಪಾವತಿ ವ್ಯವಸ್ಥೆಗಳು ಈಗಾಗಲೇ ದೇಶದಾದ್ಯಂತ ಮತ್ತು ಪ್ರಪಂಚದಾದ್ಯಂತದ ನಗರಗಳಲ್ಲಿ ರೂಢಿಯಲ್ಲಿವೆ. 5G ತಂತ್ರಜ್ಞಾನವು ಹೆಚ್ಚಿನ ವೇಗದ ಮೂಲಕ ವೇಗವಾಗಿ ಪಾವತಿ ಆಯ್ಕೆಗಳನ್ನು ಸುಗಮಗೊಳಿಸುತ್ತದೆ ಮತ್ತು ಹೊಸ ತಂತ್ರಜ್ಞಾನಗಳನ್ನು ಸಹ ಬೆಂಬಲಿಸುತ್ತದೆ. 5G ಡೌನ್‌ಲೋಡ್‌ಗಳನ್ನು ವೇಗವಾಗಿ ಮಾಡುತ್ತದೆ.

ವರ್ಚುವಲ್ ರಿಯಾಲಿಟಿ ವಿಡೀಯೋ ಸಾಧ್ಯ

ವರ್ಚುವಲ್ ರಿಯಾಲಿಟಿ ವಿಡೀಯೋ ಸಾಧ್ಯ

ಕಳೆದ ಕೆಲವು ವರ್ಷಗಳಿಂದ ಮೊಬೈಲ್ ಫೋನ್‌ಗಳಲ್ಲಿ ವೀಡಿಯೊಗಳನ್ನು ನೋಡುವುದು ತಡವಾಗುತ್ತಿದೆ. 5G ತಂತ್ರಜ್ಞಾನದ ಪರಿಚಯದೊಂದಿಗೆ ಹೆಚ್ಚಿದ ಬ್ಯಾಂಡ್‌ ವ್ಯಾಪ್ತಿಯಿಂದಾಗಿ ವೀಡಿಯೊ ಸ್ಟ್ರೀಮಿಂಗ್ ವೇಗವು ಗಮನಾರ್ಹವಾಗಿ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದರ ಜೊತೆಗೆ, ವರ್ಚುವಲ್ ರಿಯಾಲಿಟಿ ಮತ್ತು ವರ್ಧಿತ ರಿಯಾಲಿಟಿ ವೀಡಿಯೊಗಳನ್ನು ಸಹ ವೀಕ್ಷಿಸಲು ಸಾಧ್ಯವಾಗುತ್ತದೆ ಎಂದು ಕೆಲವು ಅಧ್ಯಯನಗಳು ಹೇಳುತ್ತವೆ.

ಜುಲೈ 26, 2022 ರಂದು ಪ್ರಾರಂಭ

ಜುಲೈ 26, 2022 ರಂದು ಪ್ರಾರಂಭ

ದೊಡ್ಡ ಟೆಕ್ ಸಂಸ್ಥೆಗಳಿಂದ ಕ್ಯಾಪ್ಟಿವ್ 5G ನೆಟ್‌ವರ್ಕ್‌ಗಳನ್ನು ಸ್ಥಾಪಿಸಲು ಸರ್ಕಾರವು ತನ್ನ ಒಪ್ಪಿಗೆಯನ್ನು ನೀಡಿತ್ತು. 5 ಜಿ ಸ್ಪೆಕ್ಟ್ರಮ್ ಹರಾಜು ಜುಲೈ 26, 2022 ರಂದು ಪ್ರಾರಂಭವಾಗಲಿದೆ. ಜುಲೈ ಅಂತ್ಯದ ವೇಳೆಗೆ ಮುಕ್ತಾಯಗೊಳ್ಳುತ್ತದೆ. ಈ ವರ್ಷದ ಸೆಪ್ಟೆಂಬರ್ ವೇಳೆಗೆ ಜಾರಿಗೆ ಬರುವುದಾಗಿ ನಿರೀಕ್ಷಿಸಲಾಗಿದೆ. ಸ್ಪೆಕ್ಟ್ರಮ್ ಅನ್ನು 20 ವರ್ಷಗಳವರೆಗೆ ಗುತ್ತಿಗೆಗೆ ನಿಯೋಜಿಸಲಾಗುತ್ತದೆ.

English summary
The 5g telecom spectrum auction, which was cleared by the Prime Minister Narendra Modi-led Union Cabinet in June, will begin on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X