Bank loan: ಸಿಬಿಲ್ ಸ್ಕೋರ್ ಹೆಚ್ಚಿಸಿಕೊಂಡು ಬ್ಯಾಂಕ್ ಸಾಲ ಪಡೆಯುವುದು ಹೇಗೆ ?
ಬ್ಯಾಂಕ್‌ಗಳಲ್ಲಿ ನಿಮಗೆ ಸಾಲ ಸಿಗಬೇಕಾದರೆ ಸಿಬಿಲ್ ಸ್ಕೋರ್ ಅತ್ಯಂತ ಮುಖ್ಯವಾಗುತ್ತದೆ. ನೀವು ಯಾವುದೇ ಮಾದರಿಯ ವಹಿವಾಟುಗಳನ್ನು ನಡೆಸಬೇಕಾದರೂ ಸಿಬಿಲ್ ಸ್ಕೋರ್ ಎನ್ನುವುದು ಅಂತ್ಯಂತ ಮುಖ್ಯವಾಗುತ್ತದೆ. ಸಿಬಿಲ್ ಸ್ಕೋರ್‌ನ ಆಧಾರದ ಮೇಲೆಯೇ ನಿಮಗೆ ಬ್ಯಾಂಕ್‌ನಿಂದ ಲೋನ್‌ಗಳು ಸಿಗುತ್ತವೆ. ಹಾಗಾದರೆ ಸಿಬಿಲ್ ಸ್ಕೋರ್ ಉತ್ತಮಪಡಿಸಿಕೊಂಡು ಬ್ಯಾಂಕ್ ಸಾಲ ಪಡೆಯುವುದು ಹೇಗೆ ಎನ್ನುವ ಸರಳ ವಿಧಾನ ಹಾಗೂ 5 ಪ್ರಮುಖ ಪಾಯಿಂಟ್ಸ್‌ಗಳು ಇಲ್ಲಿವೆ.
ಬ್ಯಾಂಕ್‌ಗಳಲ್ಲಿ ನೀವು ಸಾಲ ಪಡೆಯುವುದಕ್ಕೆ ಸಿಬಿಲ್ ಸ್ಕೋರ್ ತುಂಬಾನೇ ಮುಖ್ಯ. ನಿಮ್ಮ ಸಿಬಿಲ್ ಸ್ಕೋರ್ ನೋಡಿಯೇ ನಿಮ್ಮ ಸಾಲದ ಅಪ್ಲಿಕೇಷನ್ ಅನ್ನು ಅಪ್ರೂವ್ ಮಾಡಬೇಕಾ ಬೇಡವೇ ಎಂದು ನಿರ್ಧರಿಸಲಾಗುತ್ತದೆ. ಹೀಗಾಗಿ ನಿಮ್ಮ CIBIL ಸ್ಕೋರ್ ಅತ್ಯಂತ ಪ್ರಮುಖ ಅಂಶವಾಗಿದೆ. ಕಡಿಮೆ CIBIL ಸ್ಕೋರ್ ಇದ್ದರೆ ನಿಮಗೆ ಸಾಲ ಸಿಗುವುದು ತುಂಬಾ ಕಷ್ಟವಾಗುತ್ತದೆ. ನಿಮಗೆ ಉತ್ತಮ ಸಿಬಿಲ್ ಸ್ಕೋರ್ ಇದ್ದರೆ ಕಡಿಮೆ ಬಡ್ಡಿದರದಲ್ಲಿ ಹಾಗೂ ಅತ್ಯಂತ ಬೇಗ ಸಾಲ ಸಿಗುತ್ತದೆ. ಉತ್ತಮ ಸಿಬಿಲ್ ಸ್ಕೋರ್ ಎನ್ನುವುದು ನೀವು ವ್ಯವಹಾರದಲ್ಲಿ ಎಷ್ಟು ಉತ್ತಮರಾಗಿದ್ದೀರಿ ಎನ್ನುವುದನ್ನು ತೋರಿಸುತ್ತದೆ. ನಿಮ್ಮ CIBIL ಸ್ಕೋರ್ ಅನ್ನು ಹೆಚ್ಚಿಸಿಕೊಳ್ಳಲು 5 ಪ್ರಮುಖ ಸಲಹೆಗಳು ಇಲ್ಲಿವೆ. ಈ ಸಲಹೆಯನ್ನು ನೀವು ಅನುಸರಿಸಿದೆ ನಿಮ್ಮ ಸಿಬಿಲ್ ಸ್ಕೋರ್ ಹೆಚ್ಚಾಗುವುದು ನಿಶ್ಚಿತ.

ಸಾಲ ಮಾಡುವ ಮುಂಚೆ ಇರುವ ಸಾಲ ತೀರಿಸಿ: ಏಕಕಾಲಕ್ಕೆ ಹಲವು ಸಾಲಗಳನ್ನು ಮಾಡುವುದರಿಂದ ನಿಮ್ಮ ಸಾಲದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಸಾಧ್ಯವಾದಷ್ಟು ಕಡಿಮೆ ಅಥವಾ ಹೆಚ್ಚು ಸಾಲ ಮಾಡಿಕೊಳ್ಳುವುದನ್ನು ಕಡಿಮೆ ಮಾಡಿ. ಏಕಕಾಲಕ್ಕೆ ಹಲವು ಸಾಲಗಳನ್ನು ಕಟ್ಟುವುದರಿಂದ ಸಾಲ ಕಟ್ಟುವುದು ಏರುಪೇರಾದರೆ ನಿಮ್ಮ ಸಿಬಿಲ್ ಸ್ಕೋರ್‌ನ ಮೇಲೆ ಪರಿಣಾಮ ಬೀರುತ್ತದೆ.
EMI ಪಾವತಿ ಮಾಡಿ: ಸಿಬಿಲ್ ಸ್ಕೋರ್ ಚೆನ್ನಾಗಿ ಇರಿಸಿಕೊಳ್ಳುವುದಕ್ಕೆ ಸರಳ ಹಾಗೂ ಅತ್ಯಂತ ಮುಖ್ಯ ಅಂಶವೆಂದರೆ ನೀವು ತೆಗೆದುಕೊಂಡಿರುವ ಇಎಂಐಗಳನ್ನು ಪಾವತಿ ಮಾಡುವುದು. ಮಾತ್ರವಲ್ಲ ಸರಿಯಾದ ಸಮಯಕ್ಕೆ ಇಎಂಐ ಪಾವತಿ ಮಾಡುವುದು. ಇಎಂಐ ಸರಿಯಾಗಿ ಪಾವತಿ ಮಾಡದೆ ಇದ್ದರೆ ನಿಮ್ಮ CIBIL ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರಿ, ಸ್ಕೋರ್ ಕಡಿಮೆ ಆಗುತ್ತದೆ. ಇಎಂಐ ಸರಿಯಾಗಿ ಕಟ್ಟಲು ಆಟೋ ಕಟ್ / ಪ್ರತಿ ತಿಂಗಳೂ ನೇರವಾಗಿ ಬ್ಯಾಂಕ್‌ನಿಂದಲೇ ಇಎಂಐ ಕಟ್ ಆಗುವಂತೆ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ. ಅಂದರೆ ಸ್ವಯಂ ಚಾಲಿತವಾಗಿ ಹಣ ಕಡಿತವಾಗುವ ಪ್ರಕ್ರಿಯೆ.
ಕ್ರೆಡಿಟ್ ಬಳಕೆ ಕಡಿಮೆ ಮಾಡಿ: ನೀವು ಸಿಬಿಲ್ ಸ್ಕೋರ್ ಮಾತ್ರವಲ್ಲ ನಿಮ್ಮ ಆರ್ಥಿಕ ವ್ಯವಹಾರವನ್ನು ಚೆನ್ನಾಗಿ ಇರಿಸಿಕೊಳ್ಳಲು ಕ್ರೆಡಿಟ್‌ನ ಮೇಲೆ ಕಣ್ಣಿರಿಸಿ. ಕ್ರೆಡಿಟ್ ಅಂದರೆ ಸಾಲ ಹೆಚ್ಚಾಗದಂತೆ ನೋಡಿಕೊಳ್ಳಿ. ಎಷ್ಟು ಹಿಂದಿರುಗಿಸಲು ಸಾಧ್ಯವೋ ಅಷ್ಟು ಮಾತ್ರ ಸಾಲ ಮಾಡಿಕೊಳ್ಳಿ. ನಿಮ್ಮ ಕ್ರೆಡಿಟ್ ಬಳಕೆಯನ್ನು ನಿಮ್ಮ ಆದಾಯದ ಅರ್ಧದಷ್ಟು ಮೊತ್ತ ಮೀರದಂತೆ ಎಚ್ಚರಿಕೆ ವಹಿಸಿ.
ಕ್ರೆಡಿಟ್ ವ್ಯತ್ಯಾಸ ಗಮನಿಸಿ: ಸಾಮಾನ್ಯವಾಗಿ ಕ್ರೆಡಿಟ್‌ಗಳಲ್ಲಿ ಕೆಲವೊಂದು ವ್ಯತ್ಯಾಸಗಳು ಆಗಿರುತ್ತವೆ. ನಿಮ್ಮ ಗೃಹ ಸಾಲ ಸೇರಿದಂತೆ ವಿವಿಧ ಸಾಲಗಳನ್ನು ಮೊತ್ತ ಎಷ್ಟಿದೆ ಹಾಗೂ ಯಾವ ಹಂತದಲ್ಲಿ ಇದೆ ಎನ್ನುವುದನ್ನು ಗಮನಿಸಿ. ಒಂದೊಮ್ಮೆ ಈ ಕಾರಣಗಳಿಗೆ ನಿಮ್ಮ CIBIL ಕ್ರೆಡಿಟ್ ಸ್ಕೋರ್ ಕಡಿಮೆ ಆಗಿರುವ ಸಾಧ್ಯತೆ ಇರುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ನಿಯಮಿತವಾಗಿ ಚೆಕ್ ಮಾಡಿ.
ಸಾಲ ಪಡೆಯಿರಿ: ನೀವು ಸಿಬಿಲ್ ಸ್ಕೋರ್ ಅನ್ನು ಉತ್ತಮಪಡಿಸಿಕೊಳ್ಳಲು ಸಣ್ಣ ಸಣ್ಣ ಸಾಲವನ್ನು ಮಾಡಬಹುದು. ಯಾಕೆಂದರೆ, ಸಿಬಿಲ್ ಸ್ಕೋರ್ ನೋಡುವುದೇ ನೀವು ಯಾವ ರೀತಿ ಹಾಗೂ ಎಷ್ಟು ಸಾಲವನ್ನು ಮಾಡಿದ್ದೀರಿ ಮತ್ತು ಆ ಸಾಲವನ್ನು ನಿಗದಿತ ಸಮಯದಲ್ಲಿ ಯಾವ ರೀತಿ ಹಿಂದಿರುಗಿಸಿದ್ದೀರಿ ಎನ್ನುವ ಆಧಾರದ ಮೇಲೆ.












Click it and Unblock the Notifications