500 ರುಪಾಯಿಗೆ 4G ಸ್ಮಾರ್ಟ್ ಫೋನ್, ರು. 60ಕ್ಕೆ ಕಾಲ್, ಇಂಟರ್ ನೆಟ್
ತುಂಬ ಕಡಿಮೆ ಬೆಲೆಯ ಫೋನ್ ಅಂದರೂ ಸಾವಿರ ರುಪಾಯಿ ಆದರೂ ಬೇಕು. ಅದರಿಂದ ತೀರಾ ಹೆಚ್ಚಿನ ಫೀಚರ್ ಕೂಡ ನಿರೀಕ್ಷಿಸುವುದು ಸಾಧ್ಯವಿಲ್ಲ. ಆದರೆ ಭಾರ್ತಿ ಏರ್ ಟೆಲ್, ವೊಡಾಫೋನ್ ಹಾಗೂ ಐಡಿಯಾದಿಂದ ಅತ್ಯಂತ ಕಡಿಮೆ ಬೆಲೆಗೆ 4G ಸ್ಮಾರ್ಟ್ ಫೋನ್ ಕೊಡುವ ಪ್ರಯತ್ನ ಚಾಲ್ತಿಯಲ್ಲಿದೆ.
ಅದೂ ಐನೂರು ರುಪಾಯಿಗೆ ಫೋನ್ ಹಾಗೂ ತಿಂಗಳಿಗೆ ಅರವತ್ತರಿಂದ ಎಪ್ಪತ್ತು ರುಪಾಯಿಗೆ ವಾಯ್ಸ್ ಕಾಲ್ ಹಾಗೂ ಇಂಟರ್ ನೆಟ್ ಡೇಟಾ ನೀಡುವ ಪ್ಲಾನ್ ತರುವ ಆಲೋಚನೆ ಇದೆ. ಇದು ರಿಲಯನ್ಸ್ ಜಿಯೋ ಪರಿಚಯಿಸಿರುವ ತಿಂಗಳಿಗೆ ನಲವತ್ತೊಂಬತ್ತು ರುಪಾಯಿ ಪ್ಲಾನ್ ಗಿಂತ ಭಿನ್ನ ಎಂದು ಹೇಳಿಕೊಳ್ಳಲಾಗಿದೆ.

ರಿಲಯನ್ಸ್ ಜಿಯೋ ಕಂಪೆನಿಯಿಂದ ಆಫರ್ ಗಳನ್ನು ನೀಡಿದ ನಂತರ ಈ ಮೂರು ಟೆಲಿಕಾಂ ಕಂಪೆನಿಗಳು ಸಾವಿರದ ಐನೂರು ರುಪಾಯಿಗೂ ಕಡಿಮೆ ದರದ ಫೋನ್, ಅನಿಯಮಿತ ಕರೆಗಳು, ಇಂಟರ್ ನೆಟ್ ಡೇಟಾ ಇತ್ಯಾದಿ ಕೊಡುಗೆಗಳನ್ನು ನೀಡುತ್ತಿವೆ. ಮಾರ್ಚ್ ಹೊತ್ತಿಗೆ ಕಡಿಮೆ ದರದ, ಗೂಗಲ್ ಆಪರೇಟಿಂಗ್ ಸಿಸ್ಟಮ್ ನ ಮೈಕ್ರೋಮಾಕ್ಸ್ ಮೊಬೈಲ್ ಬಿಡುಗಡೆ ಆಗುವ ಸಾಧ್ಯತೆ ಇದೆ.












Click it and Unblock the Notifications