ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

24 ವರ್ಷದ ಚೀನಾ ಹುಡುಗಿಗೆ ಬಿಲೇನಿಯರ್ ಪಟ್ಟ!

|
Google Oneindia Kannada News

ಬೀಜಿಂಗ್, ಜ. 1: ವಿಶ್ವದ ಅತಿಚಿಕ್ಕ ವಯಸ್ಸಿನ ಬಿಲೇನಿಯರ್ ಪಟ್ಟ ಚೀನಾ ಪಾಲಾಗಿದೆ. ರಿಯಲ್ ಎಸ್ಟೇಟ್ ಉದ್ಯಮವೊಂದರಲ್ಲಿ 1.3 ಬಿಲಿಯನ್ ಡಾಲರ್ ಒಡೆತನ ಹೊಂದಿರುವ ಚೀನಾದ 24 ವರ್ಷದ ಯುವತಿ ಹೊಸ ಶ್ರೀಮಂತೆಯಾಗಿ ಹೊರಹೊಮ್ಮಿದ್ದಾಳೆ.

ಫೇಸ್ ಬುಕ್ ಸಹ ಸಂಸ್ಥಾಪಕ ಡಸ್ಟೀನ್ ಮೋಸ್ಕೋವಿಜ್ ಅವರನ್ನು ಹಿಂದಿಕ್ಕಿದ ಕೇ ಪೇರಿನಾ ಹೋಯ್ ತಿಂಗ್ ಅತಿ ಚಿಕ್ಕ ವಯಸ್ಸಿನ ಬಿಲೇನಿಯರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾಳೆ. ಚೀನಾದ ರೀಯಲ್ ಎಸ್ಟೇಟ್ ಉದ್ಯಮ ಸಂಸ್ಥೆ ಲೋಗಾನ್ ಪ್ರಾಪರ್ಟಿ ಡೆವಲಪರ್ ಎಂಬ ಸಂಸ್ಥೆಯ ಅಧ್ಯಕ್ಷೆ ಮತ್ತು ಸಿಇಒ ಆಗಿರುವ ಹೋಯ್ ತಿಂಗ್ ಕಂಪನಿಯ ಶೇ. 85 ರಷ್ಟು ಷೇರಿನ ಒಡೆತನ ಹೊಂದಿದ್ದಾಳೆ ಎಂದು ಚೀನಾದ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.[ಭಾರತದಲ್ಲಿದ್ದಾರೆ 122 ಬಿಲೇನಿಯರ್ ಗಳು]

money

ಲಂಡನ್ ವಿಶ್ವವಿದ್ಯಾಲಯವೊಂದರಲ್ಲಿ ಪದವಿ ಪಡೆದಿರುವ ಹೋಯ್ ತಿಂಗ್ ಸದ್ಯ ಹಾಂಗ್ ಕಾಂಗ್ ನಲ್ಲಿ ವಾಸವಾಗಿದ್ದಾಳೆ. ಆಕೆಯ ಒಡೆತನದ ಲೋಗಾನ್ ಪ್ರಾಪರ್ಟಿ ಸಂಸ್ಥೆ ಅನೇಕ ಚಿಕ್ಕ ಕಂಪನಿಗಳನ್ನು ಹೊಂದಿದೆ.

ಮಧ್ಯಮ ವರ್ಗ ಮತ್ತು ಮೇಲ್ವರ್ಗದವರಿಗೆ ವಸತಿ ಕಲ್ಪಿಸಿಕೊಡುವ ಸಲುವಾಗಿ ಹುಟ್ಟಿಕೊಂಡ ಸಂಸ್ಥೆಯು ಪಾರಂಪರಿಕವಾಗಿ ಕೇ ಪೇರಿನಾ ಹೋಯ್ ತಿಂಗ್ ಕೈ ಸೇರಿದ್ದರೂ ಕಿರಿಯ ಶ್ರೀಮಂತೆ ಎಂಬ ಹೆಗ್ಗಳಿಕೆ ತಂದುಕೊಡಲು ಕಾರಣವಾಗಿದೆ.

English summary
A 24-year-old Chinese woman with stakes worth $1.3 billion in a real estate firm, has become the world's youngest billionaire, replacing Facebook co-founder Dustin Moskovitz. Kei Perenna Hoi Ting, chairman and CEO of Chinese real estate developer Logan Property.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X