ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಯೋಜನೆಗಳಿಗೆ ಏಪ್ರಿಲ್ ಕೊನೆಯ ವಾರದೊಳಗೆ ಅನುಮೋದನೆ: ಸಿಎಂ

|
Google Oneindia Kannada News

ಬೀದರ್, ಏಪ್ರಿಲ್ 09 : ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಈ ಬಾರಿಯ ಆಯವ್ಯಯದಲ್ಲಿ 3000 ಕೋಟಿ ರೂ. ನ್ನು ಮೀಸಲಿಟ್ಟಿದ್ದು, ಅಭಿವೃದ್ಧಿಯ ಕ್ರಿಯಾಯೋಜನೆಗಳಿಗೆ ಏಪ್ರಿಲ್ ಕೊನೆಯ ವಾರದೊಳಗೆ ಅನುಮೋದನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಬಸವ ಕಲ್ಯಾಣ ಕ್ಷೇತ್ರ ಸಮಿತಿ, ಬಸವಕಲ್ಯಾಣ ವಿಕಾಸ ಅಕಾಡೆಮಿ ಕಲಬುರಗಿ ಇವರ ವತಿಯಿಂದ ಆಯೋಜಿಸಿದ್ದ" ಬಸವ ಕಲ್ಯಾಣವನ್ನು ಸುಂದರ ಸಾಂಸ್ಕೃತಿಕ ನಗರವನ್ನಾಗಿಸುವ ವಿವಿಧ ಯೋಜನೆಗಳ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಬಸವಕಲ್ಯಾಣದಲ್ಲಿ ಅನುಭವ ಮಂಟಪದ ಮರುಸೃಷ್ಟಿಗೆ ಮುಂದಾದ ಸರ್ಕಾರಬಸವಕಲ್ಯಾಣದಲ್ಲಿ ಅನುಭವ ಮಂಟಪದ ಮರುಸೃಷ್ಟಿಗೆ ಮುಂದಾದ ಸರ್ಕಾರ

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ವೈಚಾರಿಕ ಪರ್ವದ ಜೊತೆಗೆ ಅಭಿವೃದ್ಧಿ ಪರ್ವವನ್ನೂ ಸರ್ಕಾರ ತರಲಿದೆ. ಏಪ್ರಿಲ್ ಕೊನೆಯ ವಾರದಲ್ಲಿ ಎಲ್ಲ ಕ್ರಿಯಾಯೋಜನೆಗಳಿಗೆ ಅನುಮೋದನೆ ನೀಡಿ, ಆಭಿವೃದ್ಧಿ ಕಾರ್ಯಕ್ರಮಗಳು ಹಳ್ಳಿಹಳ್ಳಿಗೆ, ಮನೆಮನೆಗೆ ತಲುಪುವಂತೆ ನೋಡಿಕೊಳ್ಳನಲಾಗುವುದು .ಈ ಭಾಗದಲ್ಲಿ14000 ಹುದ್ದೆಗಳ ಭರ್ತಿಗೆ ಅನುಮತಿ ನೀಡಲಾಗಿದೆ. ಇದರಲ್ಲಿ 5000 ಶಿಕ್ಷಕರ ನೇಮಕಾತಿಗೆ ಅನುಮೋದನೆ ನೀಡಲಾಗಿದೆ. 371 ಜೆ ಅದರ ಆಶಯ, ನ್ಯಾಯಸಮ್ಮತವಾದ ಅಭಿವೃದ್ಧಿಗೆ ಸರ್ಕಾರ ಸಂಕಲ್ಪ ಮಾಡಿದೆ ಎಂದು ತಿಳಿಸಿದರು.

Kalyana Karnataka Development Projects Approved By Last Week Of April: CM

ಮೇ ಮೊದಲನೇ ವಾರದಲ್ಲಿ ಅನುಭವ ಮಂಟಪ ಪ್ರಾರಂಭ:

ಅನುಭವ ಮಂಟಪ ಕಟ್ಟಡ ಮೇ ಮೊದಲನೆ ವಾರದಲ್ಲಿ ಅಧಿಕೃತವಾಗಿ ಪ್ರಾರಂಭವಾಗಲಿದೆ. ವೈಚಾರಿಕಾ ಕ್ರಾಂತಿ ನಿರಂತರವಾಗಿ ನಡೆಯಲು ಸಹಕರಿಸಲಿದೆ. ಸಾಮಾಜಿಕ ಹಾಗೂ ವೈಚಾರಿಕ ಚಿಂತನೆಗೆ ಅನುಭವ ಮಂಟಪ ಪ್ರೇರಣಾ ಶಕ್ತಿ ನೀಡಲಿದೆ. ನಾಯಕರಾದ ಯಡಿಯೂರಪ್ಪನವರು 500 ಕೋಟಿ ರೂ. ಮೀಸಲಿರಿಸಿ ಅನುಭವ ಮಂಟಪ ನಿರ್ಮಾಣಕ್ಕೆ ನಾಂದಿ ಹಾಡಿದರು. ಬಸವಕಲ್ಯಾಣದ ಸಮಗ್ರ ಅಭಿವೃದ್ಧಿಗೆ ಹಾಗೂ ಶಿವಶರಣರ ಸ್ಮಾರಕದ ಅಭಿವೃದ್ಧಿ ಹಾಗೂ ರಕ್ಷಣೆ ಸರ್ಕಾರ ಮಾಡಲಿದೆ ಎಂದು ತಿಳಿಸಿದರು

Kalyana Karnataka Development Projects Approved By Last Week Of April: CM

ಕಲ್ಯಾಣ ಕರ್ನಾಟಕದ ಅಭಿವೃದ್ಧಿ :

ಬಸವರಾಜ ಪಾಟೀಲ ಸೇಡಂ ಅವರ ಪ್ರಾಮಾಣಿಕತೆ, ಬದ್ಧತೆಯಿಂದ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಕೌಶಲ್ಯಯುತ ಮಾನವ ಸಂಪನ್ಮೂಲ ವೃದ್ಧಿಗಾಗಿ ವಿಶೇಷ ಸಮಿತಿ ರಚಿಸಿ 200 ಕೋಟಿ. ರೂ.ಗಳನ್ನು ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ನೀಡಲಾಗಿದೆ. ಪ್ರತಿಯೊಂದು ಹಳ್ಳಿಯಲ್ಲಿ ತರಬೇತಿ, ಕೌಶಲ್ಯಾಭಿವೃದ್ಧಿ, ಉದ್ಯೋಗ, ಆರೋಗ್ಯ , ಶೀಕ್ಷಣ, ಸಂಘಟಿತ ವ್ಯಾಪಾರ ವಹಿವಾಟುಗಳಿಗೆ ಪ್ರೋತ್ಸಾಹ, ಹೀಗೆ ಸಮಗ್ರ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕಂಕಣಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೆ ಸರ್ಕಾರದ ಸಹಕಾರ ಇರಲಿದೆ ಎಂದು ತಿಳಿಸಿದರು.

Kalyana Karnataka Development Projects Approved By Last Week Of April: CM

ಬಸವಣ್ಣನವರು ಇಂದಿಗೂ ಪ್ರಸ್ತುತ :

12ನೇ ಶತಮಾನ ಭಾರತ ದೇಶಕ್ಕೆ ಪ್ರಮುಖವಾದ ಪರಿವರ್ತನಾ ಶತಮಾನ. ಸಾಮಾನ್ಯ ಜನರಿಗೆ ಆದರ್ಶಗಳನ್ನು, ಬದುಕುವ ದಾರಿಯನ್ನು ತೊರಿಸಿಕೊಟ್ಟವರು ಬಸವೇಶ್ವರರು. ಕಲಬೇಡ, ಕೊಲಬೇಡ ಎನ್ನುವ ಮೂಲಕ ಮನುಷ್ಯನ ಚಾರಿತ್ರ್ಯ ಹೇಗಿರಬೇಕು, ಕಾಯಕವೇ ಕೈಲಾಸ ಎನ್ನುವ ಮೂಲಕ ದುಡಿಮೆಯಿಲ್ಲದ ಬದುಕು ಬದುಕಲ್ಲ, ಸಮಾಜದಲ್ಲಿ ದಯವೇ ಧರ್ಮದ ಮೂಲವಯ್ಯ ಎಂದು ಇಂದಿಗೂ ಪ್ರಸ್ತುತವಾಗಿರುವ ವಿಚಾರಗಳಿಗೆ ಸ್ಪಷ್ಟತೆಯನ್ನು ಆಗಲೇ ನೀಡಿದ್ದರು . ಬಸವಣ್ಣನವರು ಇಂದಿಗೂ ಪ್ರಸ್ತುತ ಎಂದರು.

Recommended Video

DHL Cargo ರನ್‌ವೇನಲ್ಲಿ ಇಳೀತ್ತಿದ್ದ ವಿಮಾನ ನೆಲಕ್ಕೆ ಬಡಿದು ಇಬ್ಭಾಗವಾಗಿದ್ದು ಹೇಗೆ? ವಿಡಿಯೋ ನೋಡಿ | Oneindia

English summary
Chief Minister Basavaraja Bommai said 3000 crore rupees reserve for Kalyana Karnataka development plans will be approved within the last week of April.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X