Breaking; ಬೀದರ್‌ ಮಾರ್ಗದಲ್ಲಿ 3 ಹೊಸ ರೈಲು, ವೇಳಾಪಟ್ಟಿ

ಬೆಂಗಳೂರು, ಡಿಸೆಂಬರ್ 04; ಬೀದರ್-ಹುಮನಾಬಾದ್ ಮಾರ್ಗವಾಗಿ ಮೂರು ಹೊಸ ರೈಲುಗಳು ಸಂಚಾರ ನಡೆಸಲಿವೆ. ರೈಲ್ವೆ ಇಲಾಖೆ ರೈಲುಗಳ ವಿವರ ಮತ್ತು ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಬೀದರ್ ಸಂಸದ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಕೇಂದ್ರ ರೈಲ್ವೆ ಸಚಿವರನ್ನು ಕೆಲವು ದಿನಗಳ ಹಿಂದೆ ಭೇಟಿಯಾಗಿದ್ದರು. ಬೀದರ್-ಹುಮನಾಬಾದ್-ಕಲಬುರಗಿ ಮಾರ್ಗದಲ್ಲಿ ಹೆಚ್ಚು ರೈಲು ಓಡಿಸಬೇಕು ಎಂದು ಮನವಿ ಮಾಡಿದ್ದರು.

ಈ ಮನವಿಗೆ ಸ್ಪಂದಿಸಿರುವ ರೈಲ್ವೆ ಇಲಾಖೆ ಮೂರು ವಿಶೇಷ ರೈಲುಗಳನ್ನು ಓಡಿಸಲಿದೆ. ಜನರು ರೈಲುಗಳ ಸದುಪಯೋಗ ಪಡೆಯಬೇಕು ಎಂದು ಸಚಿವ ಭಗವಂತ ಖೂಬಾ ಮನವಿ ಮಾಡಿದ್ದಾರೆ.

Indian Railways To Three Trains In Bidar Humnabad Schedule

ವೇಳಾಪಟ್ಟಿ; ರೈಲು ಸಂಖ್ಯೆ 07093/ 07094 ನಾಂದೇಡ್-ಯಶವಂತಪುರ-ನಾಂದೇಡ್‌, ರೈಲು ಸಂಖ್ಯೆ 01435/ 01436 ಲೋಕಮಾನ್ಯ ತಿಲಕ್ ಟರ್ಮಿನಲ್-ಸೊಲ್ಲಾಪುರ, ರೈಲು ಸಂಖ್ಯೆ 01437/ 01438 ಸೊಲ್ಲಾಪುರ-ತಿರುಪತಿ-ಸೊಲ್ಲಾಪುರ ಈ ರೈಲುಗಳು ಬೀದರ್-ಹುಮನಾಬಾದ್ ಮಾರ್ಗವಾಗಿ ಸಂಚಾರ ನಡೆಸಲಿವೆ.

ನಾಂದೇಡ್-ಯಶವಂತಪುರ-ನಾಂದೇಡ್‌ (ರೈಲು ಸಂಖ್ಯೆ 07093) ರೈಲು 5, 12, 19, 26ರ 4 ಸೋಮವಾರ ನಾಂದೇಡ್‌ನಿಂದ ಮಧ್ಯಾಹ್ನ 1.35ಕ್ಕೆ ಹೊರಡಲಿದೆ. ಪೂರ್ಣ, ಪರಭಣಿ, ಲಾತೂರ್ ರೋಡ್ ಮೂಲಕ ರಾತ್ರಿ 7.25ಕ್ಕೆ ಭಾಲ್ಕಿ, 7.50ಕ್ಕೆ ಬೀದರ್, 8.55ಕ್ಕೆ ಹುಮನಾಬಾದ್‌ಗೆ ತಲುಪಲಿದೆ. ಬಳಿಕ ಕಲಬುರಗಿ, ರಾಯಚೂರು, ಹಿಂದೂಪುರ, ಯಲಹಂಕ ಮಾರ್ಗವಾಗಿ ಮಂಗಳವಾರ ಬೆಳಗ್ಗೆ 11ಕ್ಕೆ ಯಶವಂತಪುರ ತಲುಪಲಿದೆ.

ಇನ್ನು ರೈಲು ಸಂಖ್ಯೆ 07094 ಯಶವಂತಪುರ-ನಾಂದೇಡ್-ಯಶವಂತಪುರ ರೈಲು 6, 13, 20, 27ರ 4 ಮಂಗಳವಾರದಂದು ಸಂಜೆ 4.15ಕ್ಕೆ ಯಶವಂತಪುರದಿಂದ ಹೊರಟು ಬುಧವಾರ ಮುಂಜಾನೆ 3.25ಕ್ಕೆ ಹುಮನಾಬಾದ್ ತಲುಪಲಿದೆ. ಬೆಳಗ್ಗೆ 5ಕ್ಕೆ ಬೀದರ್ ಮತ್ತು ಬೆಳಗ್ಗೆ 5.45 ಭಾಲ್ಕಿ, ಮಧ್ಯಾಹ್ನ 1ಕ್ಕೆ ನಾಂದೇಡ್ ತಲುಪಲಿದೆ.

ರೈಲು ಸಂಖ್ಯೆ 01435/ 01436 ಸೊಲ್ಲಾಪುರ ಲೋಕಮಾನ್ಯ ತಿಲಕ್ ಟರ್ಮಿನಲ್-ಸೋಲ್ಲಾಪುರ ಮತ್ತು 01437/ 01438 ಸೊಲ್ಲಾಪುರ-ತಿರುಪತಿ-ಸೊಲ್ಲಾಪುರ ವಿಶೇಷ ರೈಲುಗಳು ಡಿಸೆಂಬರ್ 13ರಿಂದ ಫೆಬ್ರುವರಿ 17ರ ತನಕ ವಾರಕ್ಕೊಮ್ಮೆ ಬೀದರ್, ಹುಮನಾಬಾದ್, ಕಲಬುರಗಿ ಮಾರ್ಗವಾಗಿ ಸಂಚಾರ ನಡೆಸಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+