ಹುಮನಾಬಾದ್ ತಾಲೂಕಿನಲ್ಲಿ ಭೂಕಂಪನದ ಅನುಭವ; ಜನರಿಗೆ ಆತಂಕ
ಬೀದರ್, ಅಕ್ಟೋಬರ್, 16: ಹುಮನಾಬಾದ್ ತಾಲೂಕಿನ ಹಿಲಾಲಪುರ್ ಹಾಗೂ ಸಕ್ಕರಗಂಜ ಗ್ರಾಮಗಳ ಮಧ್ಯದಲ್ಲಿ ಬೆಳಗ್ಗೆ 10:44ರ ಸುಮಾರಿಗೆ ಭೂಕಂಪ ಆಗಿರುವುದು ತಿಳಿದುಬಂದಿದೆ. ಈ ಎರಡು ಗ್ರಾಮಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಭೂಮಿ ಕಂಪಿಸಿದ್ದರಿಂದ ಆತಂಕಕ್ಕೆ ಒಳಗಾಗಿದ್ದಾರೆ.
ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆಯಲ್ಲಿ ಭೂಮಿಯ 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಭೂಕಂಪ ಸಂಭವಿಸಿದೆ. ಸದ್ಯ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಈ ಹಿಂದೆಯೂ ತಾಲ್ಲೂಕಿನ ನಿಂಬೂರ್, ಸೀತಾಳಗೇರಾ, ಹುಣಸನಾಳ, ಕುಮಾರ್ ಚಿಂಚೋಳಿ ಗ್ರಾಮಗಳಲ್ಲಿ ಭೂಕಂಪದಂತೆ ನಿಗೂಢವಾದ ಶಬ್ದ ಕೇಳಿಬಂದಿತ್ತು. ಮತ್ತೆ ಇದೀಗ ತಾಲೂಕಿನಲ್ಲಿ ಭೂಕಂಪನ ಸಂಭವಿಸಿರುವ ಹಿನ್ನೆಲೆಯಲ್ಲಿ ಜನರು ಆತಂಕಗೊಂಡಿದ್ದಾರೆ.
ಬೀದರ್; ಶಾಹಿನ್ ಶಾಲೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ
ಭಯಭೀತರಾಗಿದ್ದ ಶಿರಾಳಕೊಪ್ಪದ ಜನರು
ಈ ಹಿಂದೆಯೂ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದಲ್ಲಿ ಭೂಮಿ ಕಂಪಿಸಿದ್ದು, ಜನ ಆತಂಕಕ್ಕೆ ಒಳಗಾಗಿದ್ದರು. ಶಿರಾಳಕೊಪ್ಪ ಪಟ್ಟಣದ 3 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಬೆಳಗಿನ ಜಾವ ಭೂಮಿ ಕಂಪಿಸಿದ ಅನುಭವವಾಗಿತ್ತು. ಅಲ್ಲದೆ ಭೂಕಂಪದ ಜೊತೆ ಜನರಿಗೆ ಭಾರಿ ಶಬ್ಧ ಕೇಳಿಸಿದೆ. ಇದರಿಂದ ಜನರಲ್ಲಿ ಆತಂಕಗೊಂಡಿದ್ದರು. ನಂತರ ಶಿರಾಳಕೊಪ್ಪದಲ್ಲಿ ಯಾವುದೇ ರೀತಿಯ ಭೂಕಂಪನ ಆಗಿಲ್ಲ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಸ್ಪಷ್ಟನೆಯನ್ನು ನೀಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ನಕಲಿ ಫೋಟೋ ಹರಿದಾಡುತ್ತಿದೆ. ಬೆಂಗಳೂರಿನ ಕೇಂದ್ರದಿಂದ ಮಾಹಿತಿಯನ್ನು ಪಡೆಯಲಾಗಿದೆ. ಎಲ್ಲೂ ಭೂಮಿ ಕಂಪಿಸಿದ ಬಗ್ಗೆ ದಾಖಲಾಗಿಲ್ಲ. ಭಯ ಪಡುವ ಅಗತ್ಯವಿಲ್ಲ ಎಂದಿದ್ದರು.
ವಿಜಯಪುರದಲ್ಲೂ ಭೂಕಂಪನದ ಸದ್ದು
ಇನ್ನು ನಗರದಲ್ಲಿಯೂ ಈ ಹಿಂದೆ ಮತ್ತೆ ಭಾರೀ ಸ್ಫೋಟದ ಸದ್ದಿನೊಂದಿಗೆ ಭೂಮಿಯು ಕಂಪಿಸಿತ್ತು. ಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 2.5ರಷ್ಟು ದಾಖಲಾಗಿತ್ತು. ವಿಜಯಪುರ ಬಳಿಯ ಅಲಿಯಾಬಾದ್ ಭೂಕಂಪನದ ಕೇಂದ್ರವಾಗಿತ್ತು. ವಿಜಯಪುರ ನಗರದಲ್ಲಿ ಬೆಳ್ಳಂಬೆಳಗ್ಗೆ ಮೂರು ಬಾರಿ ಲಘು ಭೂಕಂಪನ ಆಗಿತ್ತು. 3.45, 3.46 ಹಾಗೂ 5.56ಕ್ಕೆ ಭೂಕಂಪನ ದಾಖಲಾಗಿತ್ತು. ಭೂಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ ಕ್ರಮವಾಗಿ 2.0, 1.9 ಮತ್ತು 3.2 ಎಂದು ದಾಖಲಾಗಿತ್ತು. ಜನರು ನಿದ್ದೆಯಲ್ಲಿದ್ದ ಕಾರಣ ಹೆಚ್ಚಿನದಾಗಿ ಭೂಕಂಪನದ ಅನುಭವ ಅಷ್ಟಾಗಿ ಆಗಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ವಿಜಯಪುರದಲ್ಲಿ ಪದೇ ಪದೇ ಭೂಕಂಪನದ ಅನುಭವ ಜನರಿಗೆ ಆಗುತ್ತಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.