ಬೀದರ್: ರಾಜ್ಯಾದ್ಯಂತ ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ಪಾಲನೆ
ಬೀದರ್, ಮೇ 6: ಕೋವಿಡ್ ಮಹಾಮಾರಿಗೆ ಮನುಕುಲವೇ ತತ್ತರಿಸಿದ್ದು, ಸಾವು-ನೋವುಗಳು ಅವ್ಯಾಹತವಾಗಿ ಸಾಗುತ್ತಿವೆ. ಕೊರೊನಾ ಸೋಂಕಿನಿಂದ ಬಡ ಜನರ ಬದುಕು ಬೀದಿಗೆ ಬಂದಿದೆ.
ಪ್ರತಿದಿನದ ಆಹಾರಕ್ಕೂ ಪರಿತಪಿಸಬೇಕಾದ ಸ್ಥಿತಿ ಒದಗಿಬಂದಿದ್ದು, ಈ ನಡುವೆ ರಾಜ್ಯಾದ್ಯಂತ ಕೋವಿಡ್‌ನಿಂದ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳ ಪಾಲನೆ ಮತ್ತು ಪೋಷಣೆಯ ಜವಾಬ್ದಾರಿ ವಹಿಸಿಕೊಳ್ಳಲು ಬೀದರ್ ಜಿಲ್ಲೆ ಭಾಲ್ಕಿ ಹಿರೇಮಠ ಸಂಸ್ಥಾನ ಮುಂದೆ ಬಂದಿದೆ.

ಹಿರೇಮಠ ಸಂಸ್ಥಾನದ ಹಿರಿಯ ಸ್ವಾಮೀಜಿ ಡಾ.ಬಸವಲಿಂಗ ಪಟ್ಟದೇವರು ಮಕ್ಕಳ ಪಾಲನೆ, ಪೋಷಣೆ ಜೊತೆಗೆ ಅವರು ಬಯಸುವವರೆಗೂ ಶಿಕ್ಷಣ ಕೊಡಿಸಲಾಗುವುದು ಎಂದು ತಿಳಿಸಿದ್ದಾರೆ.

Recommended Video
ಪತ್ನಿಗೆ ವಿಶ್ ಮಾಡಿ ಟ್ರೊಲ್ ಆದ ಬೂಮ್ರ | Oneindia Kannada
ಈ ಬಗ್ಗೆ ಸಾರ್ವಜನಿಕರು ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದೇವರು (94489 47571), ಆಡಳಿತಾಧಿಕಾರಿ ಮೋಹನ್ ರೆಡ್ಡಿ (94489 477570) ಸಂಖ್ಯೆಗೆ ಕರೆ ಮಾಡಿ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.












Click it and Unblock the Notifications