India
  • search
  • Live TV
ಭುವನೇಶ್ವರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಸೋಂಕಿತ ಮಾವನನ್ನು ಹೊತ್ತೊಯ್ದು ಮಾನವೀಯತೆ ತೋರಿದ ಸೊಸೆ

|
Google Oneindia Kannada News

ಭುವನೇಶ್ವರ, ಜೂನ್ 05: ಕೊರೊನಾ ಸಮಯದಲ್ಲಿ ಇರುವ ಒಂದಷ್ಟು ಮಾನವೀಯತೆಯೂ ಕಣ್ಮರೆಯಾಗಿದೆ. ಮೊದಲು ನಾವು ಬದುಕಿದರೆ ಸಾಕು ಎಂದು ಆಲೋಚಿಸುವ ಸಮಯದಲ್ಲಿ ಈ ಸೊಸೆ ಮಾಡಿದ ಕೆಲಸ ನಿಜಕ್ಕೂ ಶ್ಲಾಘನೀಯ. ಕೊರೊನಾ ಸೋಂಕಿತ ಮಾವನನ್ನು ಹೊತ್ತು ಸೊಸೆಯೊಬ್ಬರು ಆಸ್ಪತ್ರೆಗೆ ಸಾಗಿರುವ ಘಟನೆ ಭುವನೇಶ್ವರದಲ್ಲಿ ನಡೆದಿದೆ.

ಪತಿ ಸೂರಜ್ ಬೇರೆ ಉರಿನಲ್ಲಿ ಕೆಲಸ ಮಾಡುತ್ತಿದ್ದಾರೆ, ಮನೆಯಲ್ಲಿ 74 ವರ್ಷದ ಮಾವನಿಗೆ ಕೊರೊನಾ ತಗುಲಿದೆ. ಆರೋಗ್ಯ ಸ್ಥಿತಿ ತುಂಬಾ ಹದಗೆಟ್ಟಿದ್ದ ಕಾರಣ ಏನು ಮಾಡುವುದೆಂದು ಮಹಿಳೆಗೆ ತೋಚಲಿಲ್ಲ ಹಾಗಾಗಿ ಮಾವನನ್ನು ಹೊತ್ತು ಕೋವಿಡ್‌ ಕೇಂದ್ರಕ್ಕೆ ತೆರಳಿದ್ದಾಳೆ.

ಕೊರೊನಾ ನಿರ್ವಹಣೆಗೆ ಮಾದರಿಯಾದ ಒಡಿಶಾ ಸರ್ಕಾರ ಕೊರೊನಾ ನಿರ್ವಹಣೆಗೆ ಮಾದರಿಯಾದ ಒಡಿಶಾ ಸರ್ಕಾರ

ಇವರು ರಹಾದಲ್ಲಿರುವ ಭಟಿಗಾವ್ ನಿವಾಸಿ, ಹತ್ತಿರದ ಕೋವಿಡ್‌ ಕೇರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಕೊರೊನಾ ಪಾಸಿಟಿವ್ ಇರುವುದರಿಂದ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮಾವನಿಗೆ ಕೊರೊನಾ ಸೋಂಕು ಇದೆ ಎಂದು ತಿಳಿದರೂ ತನ್ನ ಪ್ರಾಣವನ್ನು ಲೆಕ್ಕಿಸಲು ಅವರನ್ನು ಹೊತ್ತು ಕೋವಿಡ್ ಕೇಂದ್ರಕ್ಕೆ ಸಾಗಿದ ಸೊಸೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮಾವನನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದಾಗಿ ಮಹಿಳೆಗೆ ಮನೆಯಲ್ಲಿಯೇ ಪ್ರತ್ಯೇಕವಾಗಿರಲು ತಿಳಿಸಿದ್ದಾರೆ. ಕೋವಿಡ್‌ ಕೇಂದ್ರಕ್ಕೆ ಮಾವ ಒಬ್ಬರನ್ನು ಕಳುಹಿಸಲು ಆಕೆ ಒಪ್ಪದ ಕಾರಣ ಇಬ್ಬರನ್ನೂ ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯಲಾಗಿತ್ತು.

English summary
Niharika’s husband and Thuleshwar Das’s son Suraj was away from home for job reasons, so she was in charge, taking care of her father-in-law in her husband’s absence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X