• search
  • Live TV
ಭುವನೇಶ್ವರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಿವ್ಯಾಂಗರನ್ನು ಮದುವೆಯಾದರೆ ಸರ್ಕಾರದಿಂದ ಸಿಗುತ್ತೆ 2.5 ಲಕ್ಷ ರೂ

|

ಭುವನೇಶ್ವರ, ಫೆಬ್ರವರಿ 24: ದಿವ್ಯಾಂಗರನ್ನು ಮದುವೆಯಾದರೆ 2.5 ಲಕ್ಷ ರೂ ಪ್ರೋತ್ಸಾಹಧನ ನೀಡುವುದಾಗಿ ಒಡಿಶಾ ಸರ್ಕಾರ ಘೋಷಿಸಿದೆ.ದಿವ್ಯಾಂಗರು ಮದುವೆಯಿಂದ ಹಿಂದುಳಿದಿರುವುದನ್ನು ಸರಿಪಡಿಸಬೇಕೆನ್ನುವ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರ ಪ್ರೋತ್ಸಾಹ ಧನವನ್ನು ನೀಡುತ್ತಿದೆ.

ಈ ಕುರಿತಂತೆ ಸಾಮಾಜಿಕ ಭದ್ರತೆ ಮತ್ತು ವಿಕಲಚೇತನರ ಸಬಲೀಕರಣವಿಭಾಗದ ಆಯುಕ್ತ ಭಾಸ್ಕರ್ ಶರ್ಮಾ ಪ್ರಕಟಣೆ ಹೊರಡಿಸಿದ್ದಾರೆ.ಈವರೆಗೆ ದಿವ್ಯಾಂಗರನ್ನು ಮದುವೆಯಾಗುವವರಿಗೆ 50 ಸಾವಿರ ರೂ ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಇದೀಗ ಅದನ್ನು 2.5 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ.

14 ವರ್ಷದ ಬಾಲಕಿ ಮದುವೆಯಾದ 50 ವರ್ಷದ ಪಾಕಿಸ್ತಾನ ಸಂಸದ

ಮಾನದಂಡಗಳಲ್ಲಿ ಒಳಪಟ್ಟಿರುವ ದಿವ್ಯಾಂಗರು ವ್ಯಕ್ತಿಯನ್ನು ಯಾವುದೇ ರೀತಿವರದಕ್ಷಿಣೆ ಅಥವಾ ವಧುದಕ್ಷಿಣೆ ತೆಗೆದುಕೊಳ್ಳದೆ ಮದುವೆಯಾದರೆ ಈ ಪ್ರೋತ್ಸಾಹ ಧನ ಸಿಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹಾಗೆಯೇ ವಧುವಿಗೆ 18 ವರ್ಷ ಹಾಗೂ ವರನಿಗೆ 21 ವರ್ಷ ತುಂಬಿರಬೇಕು ಎಂದು ಹೇಳಲಾಗಿದೆ.

English summary
The Odisha Government has enhanced the amount of incentive for marrying a divyang person from ₹ 50,000 to ₹ 2,50,000 per eligible couple, an official said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X