ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವಲುಗಾರನಂತೆ ನಿಂತು ಮನೆಯೊಳಗೆ ಹಾವು ಬರದಂತೆ ತಡೆದ ಬೆಕ್ಕು

|
Google Oneindia Kannada News

ಭುವನೇಶ್ವರ, ಜುಲೈ 22: ಪ್ರಾಣಿಗಳಿಗೆ ಒಂದಿಷ್ಟು ಪ್ರೀತಿ ತೋರಿದರೂ ಮಾಲೀಕರಿಗೆ ಜೀವನವಿಡೀ ಪ್ರಾಮಾಣಿಕವಾಗಿರುತ್ತವೆ ಎನ್ನುವ ಮಾತಿದೆ. ಹಾಗೆಯೇ ಈ ಬೆಕ್ಕು ಕೂಡ ನಾಗರಹಾವನ್ನು ತನ್ನ ಮಾಲೀಕನ ಮನೆಯೊಳಗೆ ಬರದಂತೆ ತಡೆದಿದ್ದು, ಸುಮಾರು ಮೂವತ್ತು ನಿಮಿಷಗಳ ಕಾಲ ಕಾವಲುಗಾರನಂತೆ ನೋಡಿಕೊಂಡಿದೆ.

ಒಡಿಶಾದ ಭುವನೇಶ್ವರದಲ್ಲಿ ಈ ಸಂಗತಿ ನಡೆದಿದ್ದು, ಮುದ್ದಾದ ಬೆಕ್ಕಿನ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಸಹಾಯಕ ಸ್ಥಿತಿಯಲ್ಲಿದ್ದ ನಾಯಿಗೆ ಮರುಜನ್ಮ ನೀಡಿದ ಉಡುಪಿಯ ಯುವತಿಅಸಹಾಯಕ ಸ್ಥಿತಿಯಲ್ಲಿದ್ದ ನಾಯಿಗೆ ಮರುಜನ್ಮ ನೀಡಿದ ಉಡುಪಿಯ ಯುವತಿ

ಮಂಗಳವಾರ ಸಂಜೆ ಭುವನೇಶ್ವರದ ಸಂಪದ್ ಕುಮಾರ್ ಪರಿದಾ ಎಂಬುವರ ಮನೆ ಸಮೀಪ ಈ ಸಂಗತಿ ನಡೆದಿದೆ. ಸಂಪದ್ ಅವರ ಮನೆಯೊಳಗೆ ನಾಗರ ಹಾವು ಪ್ರವೇಶಿಸಲು ಮುಂದಾಗಿದ್ದು, ಆ ಹಾವನ್ನು ಒಳನುಗ್ಗದಂತೆ ತಡೆಯುವ ಬೆಕ್ಕಿನ ಪ್ರಯತ್ನದ ವಿಡಿಯೋ ವೈರಲ್ ಆಗಿದೆ.

Cat Protects Bhubaneswar Family From Cobra Stands Guard For 30 Minutes

ಏನನ್ನೋ ಕಂಡಂತೆ ಬೆಕ್ಕು ಓಡುತ್ತಿದ್ದುದನ್ನು ಕಂಡ ಮನೆಯವರು ಹೊರಗೆ ಬಂದು ನೋಡಿದಾಗ, ನಾಗರ ಹಾವು ಕಾಣಿಸಿದೆ. ನಾಗರ ಹಾವನ್ನು ನೋಡುತ್ತಿದ್ದಂತೆ ಪರಿದಾ ಮನೆಯವರು ಗಾಬರಿಯಾಗಿ, ಹಾವು ರಕ್ಷಣಾ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಅಷ್ಟರಲ್ಲಿ ಹಾವು ಮನೆಯೊಳಗೆ ಪ್ರವೇಶಿಸಲು ಸುಮಾರು ಬಾರಿ ಪ್ರಯತ್ನಿಸಿದೆ. ಆದರೆ ಇದಕ್ಕೆ ಎಡೆಮಾಡಿಕೊಡದ ಬೆಕ್ಕು ಕಾವಲಾಗಿ ನಿಂತಿದೆ. ಹಾವು ಬುಸುಗುಡುತ್ತಾ ಮುಂದಕ್ಕೆ ಬರಲು ಪ್ರಯತ್ನಿಸುತ್ತಿದ್ದರೂ ಅದನ್ನು ತಡೆದಿದೆ.

ಅರ್ಧ ಗಂಟೆ ನಂತರ ಸಹಾಯವಾಣಿ ಸ್ವಯಂ ಸೇವಕರು ಹಾವನ್ನು ಹಿಡಿದಿದ್ದಾರೆ. "ನಾನು ಇಲ್ಲಿಗೆ ಬರುವವರೆಗೂ ಹಾವನ್ನು ಒಳಹೋಗದಂತೆ ಬೆಕ್ಕು ಕಾವಲು ನಿಂತಿದೆ" ಎಂದು ಸ್ವಯಂಸೇವಕ ಅರುಣ್ ಹೇಳಿದ್ದಾರೆ.

"ಬೆಕ್ಕಿಗೆ ಈಗ ಒಂದೂವರೆ ವರ್ಷ. ನಮ್ಮ ಮನೆಯ ಸದಸ್ಯನೇ ಆಗಿಬಿಟ್ಟಿದೆ. ಇದು ಹಾವು ಮನೆಯೊಳಗೆ ಹೋಗದಂತೆ ತಡೆದಿದೆ" ಎಂದು ಪರೀದಾ ಸಂತಸ ವ್ಯಕ್ತಪಡಿಸಿದ್ದಾರೆ.

English summary
A Pet cat protects Bhubaneswar family from cobra, stands guard for 30 mins. Video of this incident viral in social media,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X