ದೆವ್ವಗಳಿವೆ ಎಂದು ಸಾಬೀತು ಮಾಡಿದರೆ 50 ಸಾವಿರ ಬಹುಮಾನ

ಬರ್ಹಾಮ್ ಪುರ್ (ಒಡಿಶಾ), ಅಕ್ಟೋಬರ್ 24: ದೆವ್ವ ಇದೆ ಎಂದು ಸಾಬೀತು ಮಾಡಿದರೆ ಐವತ್ತು ಸಾವಿರ ರುಪಾಯಿ ಬಹುಮಾನ ಘೋಷಣೆ ಮಾಡಲಾಗಿದೆ. ಮೂಢನಂಬಿಕೆ, ದೆವ್ವ- ಭೂತದ ಮೇಲಿನ ಭಯ ನಿವಾರಿಸಲು ಒಡಿಶಾದ ಗಂಜಾಂ ಜಿಲ್ಲೆ ಅಧಿಕಾರಿ ಈ ಘೋಷಣೆ ಮಾಡಿದ್ದಾರೆ. ನನಗೆ ಗೊತ್ತಿರುವ ಮಟ್ಟಿಗೆ ದೆವ್ವಗಳು ಇಲ್ಲ ಎಂದು ಗಂಜಾಂ ಜಿಲ್ಲಾಧಿಕಾರಿ ವಿಜಯ್ ಅಮೃತ ಕುಳಂಗೆ ಬುಧವಾರ ಸಮರ್ಥನೆ ನೀಡಿದ್ದಾರೆ.

ಯಾರಾದರೂ ದೆವ್ವಗಳು ಇವೆ ಎಂದು ಸಾಬೀತು ಮಾಡಿದರೆ ಅಥವಾ ಮೂಢನಂಬಿಕೆ ಪದ್ಧತಿಗಳನ್ನು ಸಮರ್ಥಿಸಿದರೆ ಅಂಥ ವ್ಯಕ್ತಿಗೆ ಐವತ್ತು ಸಾವಿರ ರುಪಾಯಿ ನೀಡುತ್ತೇನೆ ಎಂದು ಕುಳಂಗೆ ಹೇಳಿದ್ದಾರೆ.

50 Thousand Reward To Who Can Proves Ghost Exist

ವಾಮಾಚಾರ, ದೆವ್ವ- ಭೂತಗಳಿಂದ ಯಾವುದೇ ವ್ಯಕ್ತಿಗೆ ಕಾಯಿಲೆಗಳು ಬರುವುದಿಲ್ಲ. ಆದರೂ ಕೆಲವರು ತಮ್ಮ ಸಂಬಂಧಿಕರಿಗೆ ವಾಮಾಚಾರದಿಂದಲೇ ಅನಾರೋಗ್ಯವಾಗಿದೆ ಎಂದು ನಂಬುತ್ತಾರೆ. ಅನಾರೋಗ್ಯದಲ್ಲಿ ಇರುವ ವ್ಯಕ್ತಿಗಳನ್ನು ವೈದ್ಯರ ಬಳಿ ಕರೆದೊಯ್ಯುವ ಬದಲು ವಾಮಾಚಾರ ಮಾಡುವವರ ಬಳಿ ಕರೆದೊಯ್ಯುತ್ತಾರೆ ಎಂದಿದ್ದಾರೆ.

ಈಚೆಗೆ ಜಿಲ್ಲೆಯಲ್ಲಿ ವಾಮಾಚಾರಕ್ಕೆ ಸಂಬಂಧಿಸಿದಂತೆ ಎರಡು ಘಟನೆಗಳು ನಡೆದವು. ಆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಈ ಘೋಷಣೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+