ಮಧ್ಯಪ್ರದೇಶ; ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಕ್ವಾರಂಟೈನ್
ಭೋಪಾಲ್, ಏಪ್ರಿಲ್ 06 : ಮಧ್ಯಪ್ರದೇಶದ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಕ್ವಾರಂಟೈನ್‌ನಲ್ಲಿದ್ದಾರೆ. ಐಎಎಸ್ ಅಧಿಕಾರಿ ಸೇರಿದಂತೆ ಇಲಾಖೆಯ 11 ಸಿಬ್ಬಂದಿಗಳಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ.
ಇಲಾಖೆಯ ಇಬ್ಬರು ಐಎಎಸ್ ಅಧಿಕಾರಿಗಳು, ಇಲಾಖೆಯ ನಿರ್ದೇಶಕರಿಗೆ ಕೊರೊನಾ ಸೋಂಕು ತಗುಲಿದೆ ಎಂಬುದು ಶನಿವಾರ ಖಚಿತವಾಗಿದೆ. ಇವರಲ್ಲಿ 8 ಜನರ ವರದಿ ಭಾನುವಾರ ಹೊರ ಬಂದಿದೆ. ರಾಜ್ಯದಲ್ಲಿ ಇದುವರೆಗೂ 193 ಪ್ರಕರಣ ದಾಖಲಾಗಿದ್ದು, 14 ಜನರು ಮೃತಪಟ್ಟಿದ್ದಾರೆ.
ಹೆಚ್ಚುವರಿ ನಿರ್ದೇಶಕರು, ಜಂಟಿ ನಿರ್ದೇಶಕರು, ನಾಲ್ವರು ಸಹಾಯಕ ನಿರ್ದೇಶಕರು ಸೇರಿದಂತೆ ಹಿರಿಯ ಅಧಿಕಾರಿಗಳು ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಈ ಎಲ್ಲಾ ಅಧಿಕಾರಿಗಳು ಸೋಂಕು ಖಚಿತವಾದ ಅಧಿಕಾರಿಗಳ ಜೊತೆ ಸಭೆಗಳಲ್ಲಿ ಪಾಲ್ಗೊಂಡಿದ್ದರು.

ಐಎಎಸ್ ಅಧಿಕಾರಿ ಆಸ್ಪತ್ರೆಯಲ್ಲ ಕ್ವಾರಂಟೈನ್‌ನಲ್ಲಿ ಇರಲು ನಿರಾಕರಿಸಿದ್ದಾರೆ. ಆದ್ದರಿಂದ, ಭೋಪಾಲ್ ಸ್ಥಳೀಯ ಆಡಳಿತ ಅವರ ನಿವಾಸಕ್ಕೆ ಸ್ಟಿಕ್ಕರ್ ಅಂಟಿಸಿದ್ದು, ಯಾರೂ ಮನೆಗೆ ಭೇಟಿ ನೀಡಬಾರದು ಎಂದು ಸೂಚನೆ ನೀಡಿದೆ.
ಮಾಧ್ಯಮದವರ ಕರೆಯನ್ನು ಐಎಎಸ್ ಅಧಿಕಾರಿಗಳು ಸ್ವೀಕಾರ ಮಾಡಿಲ್ಲ. ವಿಡಿಯೋ ಮೆಸೇಜ್ ಒಂದು ಹರಿದಾಡುತ್ತಿದೆ. "ನಾನು ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೂ ಬೇರೆಯವರಿಂದ ಸೋಂಕು ಹಬ್ಬಿವರುವ ಸಾಧ್ಯತೆ ಇದೆ. ನನಗೆ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲ. ನಾನು ಆರೋಗ್ಯವಾಗಿದ್ದಾನೆ" ಎಂದು ಸಂದೇಶದಲ್ಲಿ ತಿಳಿಸಲಾಗಿದೆ.
ಹೆಸರು ಹೇಳಲು ಇಚ್ಚಿಸಿದ ಅಧಿಕಾರಿಯೊಬ್ಬರು ವಿವಿಧ ಇಲಾಖೆಗಳ 50ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಸೋಂಕು ಹರಡಿದೆ. ಅವರೆಲ್ಲರೂ ಸ್ವಯಂ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಇಂಧೋರ್ ಮತ್ತು ಭೋಪಾಲ್‌ನಲ್ಲಿ ಹೆಚ್ಚು ಪ್ರಕರಣದಳು ದಾಖಲಾಗಿವೆ.












Click it and Unblock the Notifications