ಅತ್ಯಾಚಾರ ಸಂತ್ರಸ್ತೆ ಸಾವಿಗೆ ಸಿಗದ ನ್ಯಾಯ:ತಂದೆ ಆತ್ಮಹತ್ಯೆಗೆ ಯತ್ನ
ಭೋಪಾಲ್, ಅಕ್ಟೋಬರ್ 08: ಮಗಳ ಮೇಲೆ ಅತ್ಯಾಚಾರ ನಡೆದು ಎರಡು ತಿಂಗಳು ಕಳೆದಿದ್ದರೂ ಕೂಡ ಪೊಲೀಸರು ಎಫ್‌ಐಆರ್ ದಾಖಲಿಸಿಕೊಳ್ಳದೆ, ತನಿಖೆ ನಡೆಸದ ಸತಾಯಿಸುತ್ತಿದ್ದ ಕಾರಣ ನೊಂದ ತಂದೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ.
ಅಪ್ರಾಪ್ತ ಬಾಲಿಕಿ ಮೇಲೆ ಮದುವೆಮನೆಯೊಂದರಲ್ಲಿ ಏಳು ಮಂದಿ ಸೇರಿ ಸಾಮೂಹಿಕ ಅತ್ಯಾಚಾರ ಮಾಡಿದ್ದರು, ಬಳಿಕ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದೀಗ ಘಟನೆ ನಡೆದು ಎರಡು ತಿಂಗಳ ಬಳಿಕ ತಂದೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಪೊಲೀಸರು ಎಫ್‌ಐಆರ್ ದಾಖಲಿಸಿಕೊಳ್ಳಲೂ ಇಲ್ಲ ತನಿಖೆ ನಡೆಸಲೂ ಮುಂದೆಬರಲಿಲ್ಲ ಎನ್ನುವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಬಳಿಕ ಏಳು ಮಂದಿಯನ್ನು ಬಂಧಿಸಿದ್ದಾರೆ. ಕೊಂಡಗಾವ್ ಗ್ರಾಮದ ಹೊರ ಪ್ರದೇಶದಲ್ಲಿ ಬಾಲಕಿಯ ಶವಕ್ಕೆ ಅಂತ್ಯಸಂಸ್ಕಾರ ನಡೆಸಲಾಗಿತ್ತು, ಇದೀಗ ಅಟಾಪ್ಸಿಗಾಗಿ ಪೊಲೀಸರು ಅಲ್ಲಿಗೆ ತೆರಳಿದ್ದರು.

ಇಬ್ಬರು ಆರೋಪಿಗಳು ಇನ್ನೂ ನಾಪತ್ತೆಯಾಗಿದ್ದಾರೆ. ವಿಶೇಷ ತನಿಖಾ ದಳವು ಅವರ ಬಂಧನಕ್ಕೆ ಬಲೆ ಬೀಸಿದೆ.
ಜುಲೈನಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆದಿತ್ತು, ಆದರೆ ಇದುವರೆಗೂ ಪೊಲೀಸರು ಯಾವುದೇ ತನಿಖೆ ನಡೆಸಿರಲಿಲ್ಲ. ಅತ್ಯಾಚಾರ ನಡೆದು ಒಂದು ದಿನದ ಬಳಿಕ ಆಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಬದುಕುಳಿಯಲಿಲ್ಲ.
ಬಾಲಕಿಯ ಸ್ನೇಹಿತರಿಗೂ ಕೂಡ ಆರೋಪಿಗಳು ಧಮ್ಕಿ ಹಾಕಿದ್ದರು. ಇಬ್ಬರು ಆಕೆಯನ್ನು ಕಾಡಿನೊಳಗೆ ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದರು. ಮರುದಿನ ಆಕೆ ಮನೆಗೆ ಬಂದಿದ್ದಳು, ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಳು.












Click it and Unblock the Notifications