• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

"ಹಸುವಿನ ಸಗಣಿ, ಮೂತ್ರ ದೇಶದ ಆರ್ಥಿಕತೆ ಬಲಪಡಿಸುತ್ತದೆ" ಶಿವರಾಜ್ ಚೌಹಾಣ್

|
Google Oneindia Kannada News

ಭೋಪಾಲ್ ನವೆಂಬರ್ 14: ಗೋವು, ಅದರ ಸಗಣಿ ಮತ್ತು ಮೂತ್ರವು ವ್ಯಕ್ತಿಯ ಆರ್ಥಿಕತೆಯನ್ನು ಬಲಪಡಿಸುತ್ತದೆ ಮತ್ತು ದೇಶವನ್ನು ಆರ್ಥಿಕವಾಗಿ ಸಮರ್ಥವಾಗಿ ಮಾಡುತ್ತದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಶನಿವಾರ ಹೇಳಿದ್ದಾರೆ. ಸರ್ಕಾರವು ಹಸುಗಳ ಅಭಯಾರಣ್ಯಗಳು ಮತ್ತು ಆಶ್ರಯಗಳನ್ನು ಅಭಿವೃದ್ಧಿಪಡಿಸಿದೆ. ಆದರೆ ಸರ್ಕಾರ ಮಾತ್ರ ಏಕಾಂಗಿಯಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಇದಕ್ಕೆ ಸಮಾಜದ ಸಹಭಾಗಿತ್ವದ ಅಗತ್ಯವಿದೆ ಎಂದು ಶಿವರಾಜ್ ಸಿಂಗ್ ಹೇಳಿದ್ದಾರೆ. ಭಾರತೀಯ ಪಶುವೈದ್ಯಕೀಯ ಸಂಘವು ಆಯೋಜಿಸಿದ್ದ ಮಹಿಳಾ ಪಶುವೈದ್ಯರ "ಶಕ್ತಿ 2021" ಸಮಾವೇಶದಲ್ಲಿ ಮಾತನಾಡಿದ ಅವರು ಗೋವು, ಅವುಗಳ ಸಗಣಿ ಮತ್ತು ಮೂತ್ರದ ಮೂಲಕ ನಾವು ನಮ್ಮದೇ ಆರ್ಥಿಕತೆಯನ್ನು ಬಲಪಡಿಸಬಹುದು ಎಂದರು. ಜೊತೆಗೆ ದೇಶವನ್ನು ಆರ್ಥಿಕವಾಗಿ ಸಬಲಗೊಳಿಸಬಹುದು ಎಂದು ಅವರು ಹೇಳಿದರು.

ಮಧ್ಯಪ್ರದೇಶದ ಸ್ಮಶಾನಗಳಲ್ಲಿ ಮೃತದೇಹಗಳನ್ನು ಸುಡಲು ಶವಗಳ ಬದಲಿಗೆ ಮರಗಳ ಕಟ್ಟಿಗೆ ಬದಲು ಸಗಣಿಗಳನ್ನು ಒಣಗಿಸಿ ಮಾಡಲಾದ ದಿಮ್ಮಿಗಳನ್ನು ಬಳಸಲಾಗುತ್ತಿದೆ. ಸಣ್ಣ ರೈತರು ಮತ್ತು ಜಾನುವಾರು ಮಾಲೀಕರಿಗೆ ಹಸು ಸಾಕಣೆ ಹೇಗೆ ಲಾಭದಾಯಕ ವ್ಯವಹಾರವಾಗಬಹುದು ಎನ್ನುವುದನ್ನು ತಿಳಿಯುವುದು ಅತ್ಯಗತ್ಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪಶುವೈದ್ಯರು ಮತ್ತು ತಜ್ಞರು ಸಲಹೆಗಳನ್ನು ರೈತರು ಪಡೆಯಬೇಕು. ಫಲಿತಾಂಶ ಆಧಾರಿತ ಕೆಲಸದಲ್ಲಿ ರೈತರು ತೊಡಗಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪರ್ಶೋತ್ತಮ್ ರೂಪಾಲಾ, ಗುಜರಾತ್‌ನ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಸು ಸಾಕಣೆಯೊಂದಿಗೆ ಸಂಬಂಧ ಹೊಂದಿದ್ದಾರೆ. ಇದು ಡೈರಿ ವ್ಯವಹಾರದ ಯಶಸ್ಸಿಗೆ ಕಾರಣವಾಗಿದೆ. ಈ ಕ್ಷೇತ್ರದಲ್ಲಿ ಉದ್ಯಮಶೀಲತೆಯನ್ನು ಆಯ್ಕೆ ಮಾಡುವ ಮಹಿಳಾ ಪಶುವೈದ್ಯಕೀಯ ಪದವೀಧರರಿಗೆ ಸಹಾಯ ಮಾಡುವಂತೆ ರೂಪಾಲಾ ಕೇಂದ್ರವನ್ನು ಒತ್ತಾಯಿಸಿದರು.

English summary
Madhya Pradesh Chief Minister Shivraj Singh Chouhan on Saturday said the cow, as well as its dung and urine, can strengthen an individual's economy and make the country financially capable.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X