• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಡಿಯೋ: ಕಾಂಗ್ರೆಸ್ ಕಚೇರಿ ಎದುರೇ ಕೈ ನಾಯಕರು ಹೀಗೆ ಹೊಡೆದಾಡುವುದೇ?

|

ಭೂಪಾಲ್, ಜನವರಿ.26: ದೇಶಾದ್ಯಂತ 71ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಆದರೆ, ಮಧ್ಯಪ್ರದೇಶದಲ್ಲಿ ಮಾತ್ರ ಧ್ವಜಾರೋಹಣ ವಿಚಾರಕ್ಕೆ ಇಬ್ಬರು ಕಾಂಗ್ರೆಸ್ ನಾಯಕರು ಕೈ ಕೈ ಮಿಲಾಯಿಸಿದ ಘಟನೆ ನಡೆದಿದೆ.

ಇಂದೋರ್ ನಲ್ಲಿರುವ ಕಾಂಗ್ರೆಸ್ ಕಚೇರಿ ಎದುರಿನಲ್ಲಿ ಧ್ವಜಾರೋಹಣ ಮಾಡಲು ಕಾಂಗ್ರೆಸ್ ನಾಯಕರೇ ಬಡಿದಾಡಿಕೊಂಡಿದ್ದಾರೆ. ಕಾಂಗ್ರೆಸ್ ನ ದೇವಂದ್ರ ಸಿಂಗ್ ಯಾದವ್ ಹಾಗೂ ಚಂದ್ರು ಕುಂಜಿರ್ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆದು ಇಬ್ಬರು ನಾಯಕರು ಎಲ್ಲರ ಮುಂದೆಯೇ ಕೈ ಕೈ ಮಿಲಾಯಿಸಿದ್ದಾರೆ.

ಗಣರಾಜ್ಯೋತ್ಸವ ಸಂಭ್ರಮದ ನಡುವೆ ಅಸ್ಸಾಂನಲ್ಲಿ ನಾಲ್ಕು ಸ್ಫೋಟ

ಇಬ್ಬರು ಕಾಂಗ್ರೆಸ್ ನಾಯಕರ ಬೀದಿಜಗಳದಿಂದ ಸ್ಥಳದಲ್ಲಿ ಕೆಲವು ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ನಂತರ ಮಧ್ಯಪ್ರವೇಶಿಸಿದ ಪೊಲೀಸರು ಕಾಂಗ್ರೆಸ್ ನಾಯಕರ ಜಗಳವನ್ನು ಬಿಡಿಸಿದರು.

ಇಬ್ಬರ ಜಗಳದ ವಿಡಿಯೋ ವೈರಲ್:

ಕುರ್ಚಿಗಾಗಿ ಕಿತ್ತಾಡುವುದು ಸರ್ವೇ ಸಾಮಾನ್ಯ. ಆದರೆ, ಸಂವಿಧಾನದ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಬದಲು ಇದರಲ್ಲೂ ರಾಜಕಾರಣ ನಡೆಸಲಾಗುತ್ತಿದೆ. ಇದಕ್ಕೆ ಇಂದೋರ್ ನಲ್ಲಿ ನಡೆದ ಘಟನೆ ಪುಷ್ಟಿ ನೀಡುವಂತೆ ಮಾಡಿದೆ. ಇಬ್ಬರು ಕಾಂಗ್ರೆಸ್ ನಾಯಕರು ಕಿತ್ತಾಡಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ.

English summary
Republic Day Celebration: Two Congress Leaders Brawl During The Flag Hoisting Ceremony In Indore Party Office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X