'ತಾಯಿ' ಸುಮಿತ್ರಾ ಮಾತ್ರವೇ ನನ್ನನ್ನು ಗದರಿಸಬಹುದು: ನರೇಂದ್ರ ಮೋದಿ
Recommended Video
ಇಂದೋರ್, ಮೇ 13: "ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಮಾತ್ರವೇ ನನ್ನನ್ನು ಗದರಿಸಬಹುದು. ಅವರಿಗೆ ನಾನು ಆ ಸ್ವಾತಂತ್ರ್ಯ ನೀಡಿದ್ದೇನೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಭಾಗವಹಿಸಿದ್ದ ಮೋದಿ, ಇಂದೋರ್ ಸಂಸದೆ ಸುಮಿತ್ರಾ ಮಹಾಜನ್ ಅವರನ್ನು ಅವರ ಇಂದೋರ್ ಕ್ಷೇತ್ರದ ಜನ ಪ್ರೀತಿಯಿಂದ ಕರೆಯುವಂತೆ 'ತಾಯಿ' ಎಂದು ಕರೆದರು.
'ಸುಮಿತ್ರಾ ಮಹಾಜನ್ ಅವರ ಕರ್ತವ್ಯ ನಿಷ್ಠೆ ಮತ್ತು, ನೈಪುಣ್ಯತೆಗೆ ಅವರೇ ಸಾಟಿ. ಆದ್ದರಿಂದಲೇ ಅವರ ಬಗ್ಗೆ ಜನರಿಗೆ ಸಾಕಷ್ಟು ಗೌರವ" ಎಂದು ಮೋದಿ ಹೇಳಿದರು.

"ನಾನು ಪ್ರಧಾನಿ ಎಂಬುದು ನಿಮ್ಮೆಲ್ಲರಿಗೂ ಗೊತ್ತು. ಆದರೆ ನಾನು ಬಿಜೆಪಿಯಲ್ಲಿ ನನ್ನನ್ನು ಗದರುವ ಸ್ವಾತಂತ್ರ್ಯವನ್ನೂ ಕೊಟ್ಟಿರುವುದು ಸುಮಿತ್ರಾ ಮಹಾಜನ್ ಅವರಿಗೆ ಎಂಬುದು ಬಹುಶಃ ಯಾರಿಗೂ ಗೊತ್ತಿಲ್ಲ" ಎಂದು ಅವರು ಹೇಳಿದರು. "ಇಂದೋರ್ ಅನ್ನು ಹೀಗೆಯೇ ಅಭಿವೃದ್ಧಿಪಡಿಸಬೇಕು ಎಂಬ 'ತಾಯಿ' ಅವರ ಗುರಿಯನ್ನು ಅವರು ಸಂಪೂರ್ಣವಾಗಿ ತಲುಪಿದ್ದಾರೆ. ಇನ್ನೂ ಬಾಕಿ ಇದೆ ಎಂಬುದು ಯಾವುದೂ ಇಲ್ಲ" ಎಂದು ಮೋದಿ ಸುಮಿತ್ರಾ ಮಹಾಜನ್ ಅವರ ಕೆಲಸವನ್ನು ಹಾಡಿ ಹೊಗಳಿದರು.
ಇಂದೋರ್ ಕ್ಷೇತ್ರದ ಎಂಟು ಬಾರಿ ಸಂಸದೆಯಾಗಿ ಆಯ್ಕೆಯಾಗಿದ್ದ 76 ವರ್ಷ ವಯಸ್ಸಿನ ಸುಮಿತ್ರಾ ಮಹಾಜನ್, ಈ ಬಾರಿ ತಾವು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ತಾವೇ ಘೋಷಿಸಿದ್ದರು. ಆದರೆ ಎಂದಿಗೂ ತಾವು ಬಿಜೆಪಿಯೊಂದಿಗೇ ಇದ್ದು, ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದಿದ್ದರು.
ಸುಮಿತ್ರಾ ಮಹಾಜನ್ ಸ್ಪರ್ಧಿಸದ ಕಾರಣಕ್ಕೆ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಶಂಕರ್ ಲಾಲ್ವಣಿ ಮತ್ತು ಕಾಂಗ್ರೆಸ್ ನಿಂದ ಪಂಕಜ್ ಸಂಘ್ವಿ ಸ್ಪರ್ಧಿಸಿದ್ದಾರೆ. ಇಂದೋರ್ ಕ್ಷೇತ್ರಕ್ಕೆ ಮೇ 19 ರಂದು ಮತದಾನ ನಡೆಯಲಿದ್ದು, ಮೇ 23 ರಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications