ವಿದೇಶಿ ಮಹಿಳೆಗೆ ಜನಿಸಿದವರು ದೇಶಭಕ್ತರಾಗಲು ಸಾಧ್ಯವೇ? ರಾಹುಲ್ ವಿರುದ್ದ ವಾಗ್ದಾಳಿ
ಭೋಪಾಲ್, ಜೂನ್ 29: ವಿವಾದಕಾರಿ ಹೇಳಿಕೆ ನೀಡುವುದರಲ್ಲಿ ಎತ್ತಿದ ಕೈಯಾಗಿರುವ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ದ ಹರಿತವಾದ ಮಾತನ್ನಾಡಿದ್ದಾರೆ.
Recommended Video
ಈ ಹಿಂದೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹಂತಕ ನಾಥೂರಾಂ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದು ವಿವಾದ ಸೃಷ್ಟಿಸಿದ್ದ ಪ್ರಗ್ಯಾ, "ವಿದೇಶಿ ಮಹಿಳೆಗೆ ಜನಿಸಿದ ಯಾರಾದರೂ ದೇಶಭಕ್ತರಾಗಲು ಸಾಧ್ಯವಿಲ್ಲ"ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.
"ರಾಹುಲ್ ಗಾಂಧಿಗೆ ಸುಸಂಸ್ಕೃತ ರೀತಿಯಲ್ಲಿ ಮಾತನಾಡಲು ಬರುವುದಿಲ್ಲ. ಕಾಂಗ್ರೆಸ್ ದೇಶಭಕ್ತಿಯನ್ನು ಹೊಂದಿರುವ ಪಕ್ಷವಲ್ಲ. ಎರಡು ರಾಷ್ಟ್ರಗಳ ಪೌರತ್ವವನ್ನು ಹೊಂದಿರುವ ವ್ಯಕ್ತಿಯಿಂದ ದೇಶಪ್ರೇಮವನ್ನು ನಿರೀಕ್ಷಿಸಲು ಸಾಧ್ಯವೇ"ಎಂದು ಪ್ರಗ್ಯಾ ಠಾಕೂರ್ ಪ್ರಶ್ನಿಸಿದ್ದಾರೆ.

"ಮಣ್ಣಿನ ಮಗ ಮಾತ್ರ ದೇಶವನ್ನು ರಕ್ಷಿಸಬಲ್ಲನೆಂದು ಚಾಣಕ್ಯ ಹೇಳಿದ್ದು ಸರಿಯಾಗಿಯೇ ಇದೆ. ವಿದೇಶಿ ಮಹಿಳೆಗೆ ಜನಿಸಿದವರು ಎಂದಿಗೂ ದೇಶಭಕ್ತರಾಗಲು ಸಾಧ್ಯವಿಲ್ಲ"ಎಂದು ಪ್ರಗ್ಯಾ ಠಾಕೂರ್ ಹೇಳಿದ್ದಾರೆ.
ಕಾಂಗ್ರೆಸ್ ಪ್ರತಿಕ್ರಿಯೆ: ರಾಹುಲ್ ಗಾಂಧಿ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖಂಡ ನರೇಂದ್ರ ಸಲೂಜಾ, "ನಾವು ಪ್ರಗ್ಯಾ ಠಾಕೂರ್ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ"ಎಂದು ಹೇಳಿದ್ದಾರೆ.
"ಮಹಾತ್ಮ ಗಾಂಧಿಯವರ ಹಂತಕನನ್ನು ದೇಶಭಕ್ತನೆಂದು ಹೊಗಳಬಲ್ಲ ಜನಪ್ರತಿನಿಧಿಯೊಬ್ಬರು ಏನು ಬೇಕಾದರೂ ಹೇಳುವ ಮಟ್ಟಕ್ಕೆ ಹೋಗಬಹುದು"ಎಂದು ನರೇಂದ್ರ ಸಲೂಜಾ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications