• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶೀಲ ಶಂಕಿಸಿ ಗುಪ್ತಾಂಗ ಹೊಲಿದರೂ ಪತಿಯನ್ನು ಬಂಧಿಸಬೇಡಿ ಎಂದ ಪತ್ನಿ

|
Google Oneindia Kannada News

ಭೋಪಾಲ್, ಆಗಸ್ಟ್ 28: ಪತ್ನಿಯ ಶೀಲ ಶಂಕಿಸಿ ಆಕೆಯ ಗುಪ್ತಾಂಗಕ್ಕೆ ಪತಿ ಹೊಲಿಗೆಹಾಕಿರುವ ಘಟನೆ ಮಧ್ಯಪ್ರದೇಶದಲ್ಲಿ ವರದಿಯಾಗಿದೆ.

ಮಧ್ಯಪ್ರದೇಶದ ಸಿಂಗ್ರೌಲಿಯ ರೈಲಾ ಘಟನೆ ನಡೆದಿದ್ದು, ಪ್ರಕರಣದ ಬಗ್ಗೆ ಪತ್ನಿ ಆರೋಪಿ ಗಂಡನ ವಿರುದ್ಧ ದೂರು ದಾಖಲಿಸಿರುವುದಾಗಿ ಅಸಿಸ್ಟೆಂಟ್ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಸೋನ್ಕಾರ್ ಮಾಹಿತಿ ನೀಡಿದ್ದಾರೆ.

ಆರೋಪಿ ಪತಿ ತಲೆ ಮರೆಸಿಕೊಂಡಿದ್ದು, ಏತನ್ಮಧ್ಯೆ ತನಗೆ ಪತಿ ಚಿತ್ರಹಿಂಸೆ ನೀಡಿದರೂ ಕೂಡಾ ಗಂಡನ ವಿರುದ್ಧ ಯಾವುದೇ ರೀತಿಯ ಕಠಿಣ ಕ್ರಮ ತೆಗೆದುಕೊಳ್ಳಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

ಪತಿ ಈ ರೀತಿಯ ಘೋರ ಕೃತ್ಯವನ್ನು ಪುನರಾವರ್ತಿಸದಂತೆ ಗದರಿಸುವಂತೆ ಪೊಲೀಸರ ಬಳಿ ಪತ್ನಿ ವಿನಂತಿಸಿಕೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದು, ಮಹಿಳೆ ಸಿಂಗ್ರೌಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆ ಸ್ಥಿತಿ ಸ್ಥಿರ ವಾಗಿರುವುದಾಗಿ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.

ಗುಪ್ರಾಂಗಕ್ಕೆ ಹೊಲಿಗೆ ಹಾಕಿದ ಬಳಿಕ ಆಕೆ ರಕ್ತದ ಮಡುವಿನಲ್ಲಿ ಬಿದ್ದಿದ್ದಳು, ಬಳಿಕ ಪತ್ನಿ ಆಕೆಯ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ತಕ್ಷಣ ಮಹಿಳೆಯ ಪೋಷಕರು ಅಳಿಯನ ವಿರುದ್ಧ ದೂರು ದಾಖಲಿಸಿದ್ದಾರೆ.

ವೈದ್ಯಕೀಯ ಪರೀಕ್ಷೆ ಮಾಡಿದ ಬಳಿಕ ಮಹಿಳೆ ಮೇಲೆ ಹಲ್ಲೆ ನಡೆದಿರುವುದು ಸತ್ಯ ಎಂದು ತಿಳಿದುಬಂದಿದೆ. ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇನ್ನೂ ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಪತ್ನಿ ಶೀಲ ಶಂಕಿಸಿ ಅಲ್ಯೂಮಿನಿಯಂ ತಂತಿಯಿಂದ ಆಕೆಯ ಗುಪ್ತಾಂಗವನ್ನು ಹೊಲಿದಿದ್ದ ಘಟನೆ ವರದಿಯಾಗಿತ್ತು.

English summary
In Madhya Pradesh’s Singrauli district, a man stitched her wife’s genitals because he suspected she was cheating on him. The woman, however, asked the police not to take any stern action against her husband despite the torture she had to endure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X