ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಮಾರಿಯಾ: ಆಣೆಕಟ್ಟಿನಲ್ಲಿ ಸ್ಟಂಟ್ ಮಾಡಲು ಹೋದ ಪೊಲೀಸ್ ಕಾನ್ಸ್‌ಟೆಬಲ್ ಸಾವು

|
Google Oneindia Kannada News

ಉಮಾರಿಯಾ ಆಗಸ್ಟ್ 22: ಮಧ್ಯಪ್ರದೇಶದ ಉಮಾರಿಯಾ ಜಿಲ್ಲೆಯಲ್ಲಿ ಎಡೆಬಿಡದೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಈ ನಡುವೆ ರಭಸದ ಪ್ರವಾಹದಲ್ಲಿ ಮುಳುಗಿರುವ ಎರಡನೇ ಘಟನೆ ಬೆಳಕಿಗೆ ಬಂದಿದೆ. ಚಾಂಡಿಯಾ ವ್ಯಾಪ್ತಿಯ ಕರ್ಹಿಯಾ ಗ್ರಾಮದಲ್ಲಿರುವ ಮಹಾನದಿ ಅಣೆಕಟ್ಟಿನಲ್ಲಿ ಸ್ನಾನ ಮಾಡಲು ಹೋದ ಪೊಲೀಸ್ ಪೇದೆ ಪ್ರೀತಮ್ ಲೋಧಿ (25) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ನದಿಯ ನೀರಿನ ಮಟ್ಟ ಏರಿಕೆಯಾಗಿ ಸ್ಥಳದಲ್ಲೇ ಇರುವ ರಾಜ್ಯ ವಿಪತ್ತು ನಿರ್ವಹಣಾ ತಂಡಕ್ಕೆ ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಪೊಲೀಸ್ ಪೇದೆಯೊಬ್ಬರು ಉಕ್ಕಿ ಹರಿಯುವ ಆಣೆಕಟ್ಟಿನಲ್ಲಿ ಸ್ನಾನ ಮಾಡಲು ಹೋಗಿ ಸಾವನ್ನಪ್ಪಿದ್ದಾರೆ.

ಪೊಲೀಸ್ ಅಧಿಕಾರಿಯೊಬ್ಬರು ನದಿಯಲ್ಲಿ ಮುಳುಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಪೇದೆ ಸ್ಟಂಟ್ ಮಾಡುತ್ತಿರುವು ಕಂಡು ಬಂದಿದೆ. ಅವರ ಸಾಹಸದ ವಿಡಿಯೋ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ನದಿಯ ಮಧ್ಯದಲ್ಲಿ ನಿರ್ಮಿಸಿರುವ ಅಣೆಕಟ್ಟಿನ ಮೇಲೆ ಪೊಲೀಸರು ನಡೆದುಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಅದರ ನಂತರ ಅವರು ವೇಗದ ಪ್ರವಾಹಕ್ಕೆ ಹಾರುತ್ತಾರೆ. ಜಂಪ್ ಆದ ನಂತರ ಬಹಳ ಸಮಯದವರೆಗೆ ಪೋಲೀಸ್ ಕಾಣಿಸುವುದಿಲ್ಲ. ಆದರೆ ಕೆಲವು ಕ್ಷಣಗಳ ನಂತರ ಅವನು 2-3 ಬಾರಿ ಮೇಲಕ್ಕೆ ಮತ್ತು ಕೆಳಗೆ ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು. ನಂತರ ಅವರು ಎಲ್ಲಿಯೂ ಕಾಣುವುದಿಲ್ಲ.

ವಿಡಿಯೋ ನೋಡಿದರೆ ಅನಿಸುವುದೇನು?

ವಿಡಿಯೋ ನೋಡಿದರೆ ಅನಿಸುವುದೇನು?

ಆರಂಭದಲ್ಲಿ ಪೊಲೀಸ್ ಪೇದೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ವಿಡಿಯೋ ನೋಡಿದರೆ ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿರುವಂತೆ ಕಾಣುತ್ತಿಲ್ಲ. ಸ್ಟಂಟ್ ಮಾಡಲು ನದಿಗೆ ಹೋಗಿ ಪ್ರಾಣ ಕಳೆದುಕೊಂಡಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಪೇದೆಯ ಶವ ಇನ್ನೂ ಪತ್ತೆಯಾಗದಿದ್ದರೂ, ಸ್ಥಳೀಯರು ಮತ್ತು ಇತರರು ಆತನ ಪತ್ತೆಗೆ ಪ್ರಯತ್ನಿಸುತ್ತಿದ್ದಾರೆ.

ನೀರು ಕಡಿಮೆಯಾಗುವುದನ್ನು ಕಾಯುತ್ತಿರುವ ರಕ್ಷಣಾ ತಂಡ

ನೀರು ಕಡಿಮೆಯಾಗುವುದನ್ನು ಕಾಯುತ್ತಿರುವ ರಕ್ಷಣಾ ತಂಡ

ರಾಜ್ಯ ವಿಪತ್ತು ನಿರ್ವಹಣಾ ಸಿಬ್ಬಂದಿ ಮಳೆ ಕಡಿಮೆಯಾಗಲು ಕಾಯುತ್ತಿದ್ದಾರೆ. ಇಲ್ಲಿ 2 ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿತ್ತು ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಬಲವಾದ ಪ್ರವಾಹಕ್ಕೆ 2 ಜೀವಗಳು ಬಲಿಯಾಗಿವೆ. ಮೊದಲನೇ ಘಟನೆ ಪಕ್ಕದ ಧನವಾಹಿ ಗ್ರಾಮದಲ್ಲಿ ನಡೆದಿದೆ. ಜಿಲ್ಲಾಸ್ಪತ್ರೆ, ಗ್ರಾಮದ ಸಮೀಪ ಹಾದು ಹೋಗಿರುವ ನರಸರಹ ನಾಲೆಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ 10 ವರ್ಷದ ಅಮಾಯಕ ಕೊಚ್ಚಿಕೊಂಡು ಹೋಗಿದ್ದು, ಇಲ್ಲಿಯವರೆಗೆ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿಲ್ಲ.

ಜನರ ಮನೆಗಳಿಗೂ ನುಗ್ಗಿದ ಮಳೆ ನೀರು

ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಪರಿಸ್ಥಿತಿ ಹದಗೆಟ್ಟಿದೆ. ನದಿಯ ಚರಂಡಿಗಳು ತುಂಬಿ ಹರಿಯುತ್ತಿದ್ದು, ಜನರ ಮನೆಗಳಿಗೂ ನೀರು ನುಗ್ಗುತ್ತಿದೆ. ಗ್ರಾ.ಪಂ.ಗುಳಗುಳಿ ಗ್ರಾಮದಲ್ಲಿ ನೀರು ಸಂಗ್ರಹಗೊಂಡಿದ್ದು, ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಘುಂಗುಟಿ ಗ್ರಾಮದಲ್ಲಿ ಚರಂಡಿಯ ನೀರು ಜನರ ಮನೆಗಳಿಗೆ ತುಂಬಿದ್ದು, ಇದರಿಂದ ಜನರ ಕಚ್ಚೆ ಮನೆಗಳು ಕುಸಿಯುವ ಭೀತಿ ಎದುರಾಗಿದೆ. ಜಿಲ್ಲಾಡಳಿತದ ಅಧಿಕಾರಿಗಳು ಎಲ್ಲೆಡೆ ಧಾವಿಸಿ ಪರಿಸ್ಥಿತಿಯ ನಿಗಾ ವಹಿಸಿದ್ದಾರೆ.

ತರಾಟೆ ತೆಗೆದುಕೊಂಡ ನೆಟ್ಟಿಗರು

ತರಾಟೆ ತೆಗೆದುಕೊಂಡ ನೆಟ್ಟಿಗರು

ಉಮಾರಿಯಾಯಲ್ಲಿ ಕಳೆದ ಕೆಲ ದಿನಗಳಿಂದ ಭಾರಿ ಮಳೆಯಾಗುತ್ತಿದೆ. ನದಿಗಳು ಮಾತ್ರವಲ್ಲದೇ ರಸ್ತೆಗಳು, ತಗ್ಗು ಪ್ರದೇಶಗಳಿಗೂ ನೀರು ನುಗ್ಗಿದೆ. ಜನಜೀವನ ಅಸ್ತವ್ಯಸ್ಥಗೊಂಡಿದೆ. ಹೀಗಿರುವಾಗ ಪೇದೆ ಈ ಸಾಹಸಕ್ಕೆ ಕೈ ಹಾಖಿದ್ದು ಯಾಕೆ ಎನ್ನುವ ಪ್ರಶ್ನೆ ಉದ್ಬವಿಸಿದೆ. ರಕ್ಷಣಾ ತಂಡಗಳೇ ನದಿ ನೀರಿನಲ್ಲಿ ಕೊಚ್ಚಿ ಹೋದ ಅಮಾಯಕರನ್ನು ಪತ್ತೆ ಹಚ್ಚುವಲ್ಲಿ ವಿಫಲವಾಗಿ ಕುಳಿತಿರುವಾಗ ಪೇದೆ ಈ ಸಾಹಸಕ್ಕೆ ಕೈ ಹಾಕಿರುವ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಪೇದೆ ಆತ್ಮಹತ್ಯೆ ಮಾಡಿಕೊಳ್ಳಲು ನೀರಿಗಿಳಿದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ವಿಡಿಯೋ ನೋಡಿದರೆ ಪೇದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕಾಣಿಸುತ್ತಿಲ್ಲ. ಈವರೆಗೆ ಪೇದೆ ಶವ ಪತ್ತೆಯಾಗಿಲ್ಲ. ರಕ್ಷಣಾ ತಂಡಗಳು ಅವರ ಹುಡುಕಾಟ ನಡೆಸಿವೆ.

English summary
Police constable Pritam Lodhi (25) drowned in Mahanadi dam at Karhiya village in Chandia range of Madhya Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X