• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಧ್ಯಪ್ರದೇಶದ ಸಿಎಂ ಕಮಲನಾಥ್ ಅವರ ಅಳಿಯ ಬಂಧನ

|

ನವದೆಹಲಿ, ಆಗಸ್ಟ್ 20: ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್ ಅವರ ಅಳಿಯ ರತುಲ್ ಪುರಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೋಮವಾರ ತಡರಾತ್ರಿ ಬಂಧಿಸಿದ್ದಾರೆ.

ಬ್ಯಾಂಕಿನಿಂದ ಸುಮಾರು 354 ಕೋ.ರೂ. ಸಾಲ ಪಡೆದು ವಂಚಿಸಿದ ಆರೋಪವನ್ನು ಪುರಿ ಎದುರಿಸುತ್ತಿದ್ದಾರೆ. ಪುರಿ ಅವರ ಮೇಲೆ ಮನಿಲಾಂಡ್ರಿಂಗ್ (PMLA) ಕೇಸ್ ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯವು ತನಿಖೆ ನಡೆಸುತ್ತಿದೆ.

ಪುರಿ ಅವರು ಮೊಸೆರ್ ಬೇರ್‌ ಸಂಸ್ಥೆಯಲ್ಲಿ ಮಾಜಿ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು. ಮೊಸೆರ್ ಬೇರ್ ಕಂಪೆನಿಯು 2009ರಿಂದ ವಿವಿಧ ಬ್ಯಾಂಕ್‌ಗಳಿಂದ ಸಾಲಪಡೆದಿದ್ದರು.

"ಸಾಲ ಪಡೆಯಲು ಪುರಿ ಹಾಗೂ ನಾಲ್ವರು ನಿರ್ದೇಶಕರು, ನಕಲಿ ದಾಖಲೆಗಳನ್ನು ನೀಡಿದ್ದರು. ಸುಮಾರು 354 ಕೋಟಿ ರು ಸಾಲ ಪಡೆದು ವಂಚಿಸಿದ್ದಾರೆ" ಎಂದು ಸರ್ಕಾರಿ ಸ್ವಾಮ್ಯ ಸೆಂಟ್ರಲ್ ಬ್ಯಾಂಕ್ ದೂರು ನೀಡಿತ್ತು.

ಆಗಸ್ಟ್ 18ರಂದು ಮೊಸೆರ್ ಬೇರ್ ಸಂಸ್ಥೆ ಪ್ರವರ್ಧಕ ದೀಪಕ್ ಪುರಿ, ಪುರಿ ತಾಯಿ ನೀತಾಪುರಿ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿತ್ತು. ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದಲ್ಲೂ ಪುರಿ ಹೆಸರು ಕೇಳಿ ಬಂದಿದೆ.

English summary
Businessman Ratul Puri, nephew of Madhya Pradesh chief minister Kamal Nath, has been arrested by the Enforcement Directorate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X