• search
 • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟ್ವಿಟ್ಟರ್‌ನಲ್ಲಿ 'ಬಿಜೆಪಿ' ಹೆಸರು ತೆಗೆದ ಜ್ಯೋತಿರಾಧಿತ್ಯ ಸಿಂಧಿಯಾ, ಏನಿದರ ಮರ್ಮ?

|
Google Oneindia Kannada News

ಬೋಪಾಲ್, ಜೂನ್ 6: ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರುವಲ್ಲಿ ಮಾಜಿ ಕಾಂಗ್ರೆಸ್ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಪ್ರಮುಖ ಪಾತ್ರ ವಹಿಸಿದ್ದರು.

   India surpasses Italy in Corona cases count | Oneindia kannada

   18 ವರ್ಷ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದ ಜ್ಯೋತಿರಾಧಿತ್ಯ ಸಿಂಧಿಯಾ ಆಪ್ತ ಸ್ನೇಹಿತ ರಾಹುಲ್ ಗಾಂಧಿಗೆ ಕೈ ಕೊಟ್ಟು ಬಿಜೆಪಿ ಬಾವುಟ ಹಿಡಿದಿದ್ದರು. ಇದರ ಪರಿಣಾಮ ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌವಾಣ್ ಸಾರಥ್ಯದಲ್ಲಿ ಕಮಲ ಅರಳಿತ್ತು.

   ಭವಿಷ್ಯಕ್ಕೆ ಹೆದರಿ ಹೋದ, ಸಿಂಧಿಯಾಗೆ ಬಿಜೆಪಿಯಲ್ಲಿ ಗೌರವ ಸಿಕ್ಕಲ್ಲ: ರಾಹುಲ್ ಗಾಂಧಿಭವಿಷ್ಯಕ್ಕೆ ಹೆದರಿ ಹೋದ, ಸಿಂಧಿಯಾಗೆ ಬಿಜೆಪಿಯಲ್ಲಿ ಗೌರವ ಸಿಕ್ಕಲ್ಲ: ರಾಹುಲ್ ಗಾಂಧಿ

   ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಎರಡ್ಮೂರು ತಿಂಗಳು ಕಳೆದಿಲ್ಲ. ಅಷ್ಟರಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾ ಕುರಿತು ಊಹಾಪೋಹಗಳು ಹುಟ್ಟಿಕೊಂಡಿದೆ. ಇದಕ್ಕೆ ಕಾರಣ, ಜ್ಯೋತಿರಾಧಿತ್ಯ ಸಿಂಧಿಯಾ ಟ್ವಿಟ್ಟರ್ ಖಾತೆಯ ವಿವರದಲ್ಲಿ 'ಬಿಜೆಪಿ' ಹೆಸರು ತೆಗೆದುಹಾಕಿರುವುದು. ಅಷ್ಟಕ್ಕೂ, ಟ್ವಿಟ್ಟರ್‌ನಲ್ಲಿ ಬಿಜೆಪಿ ಹೆಸರು ಏಕೆ ತೆಗೆಯಲಾಗಿದೆ? ಸಿಂಧಿಯಾ ಕೊಟ್ಟ ಕಾರಣವೇನು? ಮುಂದೆ ಓದಿ...

   ಕಾಂಗ್ರೆಸ್ ತೆಗೆದು ಬಿಜೆಪಿ ಹಾಕಿದ್ದ ಸಿಂಧಿಯಾ

   ಕಾಂಗ್ರೆಸ್ ತೆಗೆದು ಬಿಜೆಪಿ ಹಾಕಿದ್ದ ಸಿಂಧಿಯಾ

   ಮಾರ್ಚ್ ತಿಂಗಳಲ್ಲಿ ಕಾಂಗ್ರೆಸ್ ಪಕ್ಷ ಬಿಟ್ಟ ಜ್ಯೋತಿರಾಧಿತ್ಯ ಸಿಂಧಿಯಾ ಬಿಜೆಪಿ ಸೇರ್ಪಡೆಯಾಗಿದ್ದರು. ಅದಾದ ಬಳಿಕ ಟ್ವಿಟ್ಟರ್ ಖಾತೆಯ ಬಯೋಗ್ರಫಿಯಲ್ಲಿ ಕಾಂಗ್ರೆಸ್ ಹೆಸರು ತೆಗೆದು ಬಿಜೆಪಿ ಎಂದು ಹಾಕಿದ್ದರು. ಆದ್ರೀಗ, ಬಿಜೆಪಿ ಹೆಸರನ್ನು ಕೂಡ ಅಲ್ಲಿಂದ ತೆಗೆದಿದ್ದಾರೆ. ಇದು ಸಹಜವಾಗಿ ಮಧ್ಯ ಪ್ರದೇಶದ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

   ಬಿಜೆಪಿಯಲ್ಲಿ ಗೊಂದಲ ಇಲ್ಲ

   ಬಿಜೆಪಿಯಲ್ಲಿ ಗೊಂದಲ ಇಲ್ಲ

   ಟ್ವಿಟ್ಟರ್ ಖಾತೆಯಲ್ಲಿ ಬಿಜೆಪಿ ಹೆಸರು ತೆಗೆದಿರುವ ಬಗ್ಗೆ ಜ್ಯೋತಿರಾಧಿತ್ಯ ಸಿಂಧಿಯಾ ಸ್ಪಷ್ಟನೆ ನೀಡಿದ್ದಾರೆ. ಟೈಮ್ಸ್ ನೌಗೆ ಪ್ರತಿಕ್ರಿಯೆ ನೀಡಿರುವ ಸಿಂಧಿಯಾ ''ಬಿಜೆಪಿಯಲ್ಲಿ ಯಾವುದೇ ಗೊಂದಲ ಇಲ್ಲ, ಟ್ವಿಟ್ಟರ್‌ನಲ್ಲಿ ಬಿಜೆಪಿ ಹೆಸರು ಬದಲಾಯಿಸಿರುವುದರ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳೆವೂ ಕೇವಲ ವದಂತಿಗಳಷ್ಟೇ'' ಎಂದಿದ್ದಾರೆ. ಈ ಹಿಂದೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುವ ವೇಳೆ ಟ್ವಿಟ್ಟರ್‌ನಲ್ಲಿ ಕಾಂಗ್ರೆಸ್ ಹೆಸರು ತೆಗೆದಿದ್ದನ್ನು ಗಮನಿಸಬಹುದು.

   ಬ್ರೇಕಿಂಗ್ ನ್ಯೂಸ್ : ಬಿಜೆಪಿ ಸೇರಿದ ಜ್ಯೋತಿರಾದಿತ್ಯ ಸಿಂಧಿಯಾಬ್ರೇಕಿಂಗ್ ನ್ಯೂಸ್ : ಬಿಜೆಪಿ ಸೇರಿದ ಜ್ಯೋತಿರಾದಿತ್ಯ ಸಿಂಧಿಯಾ

   ಬಿಜೆಪಿಯಲ್ಲಿ ಸಿಂಧಿಯಾಗೆ ಗೌರವ ಸಿಕ್ಕಲ್ಲ

   ಬಿಜೆಪಿಯಲ್ಲಿ ಸಿಂಧಿಯಾಗೆ ಗೌರವ ಸಿಕ್ಕಲ್ಲ

   ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರಿದ ಜ್ಯೋತಿರಾಧಿತ್ಯ ಸಿಂಧಿಯಾ ಭವಿಷ್ಯದ ಬಗ್ಗೆ ರಾಹುಲ್ ಗಾಂಧಿ ಮಾತನಾಡಿದ್ದರು. 'ಸಿಂಧಿಯಾ ರಾಜಕೀಯ ಭವಿಷ್ಯಕ್ಕೆ ಹೆದರಿ ಪಕ್ಷ ಬಿಟ್ಟು ಹೋಗಿದ್ದಾರೆ. ಅವರಿಗೆ ಬಿಜೆಪಿಯಲ್ಲಿ ಗೌರವ ಸಿಕ್ಕಲ್ಲ' ಎಂದಿದ್ದರು. ಟ್ವಿಟ್ಟರ್ ಖಾತೆಯಲ್ಲಿ ಬಿಜೆಪಿ ಹೆಸರು ತೆಗೆದ ಬಳಿಕ ಪಕ್ಷದ ಜೊತೆ ಸಿಂಧಿಯಾಗೆ ಭಿನ್ನಾಭಿಪ್ರಾಯವಾಗಿರಬಹುದಾ ಎಂಬ ಅನುಮಾನವೇ ಹೆಚ್ಚಿದೆ.

   ಸಿದ್ಧಾಂತ ಬಿಟ್ಟು RSS ಜೊತೆ ಹೋದರು

   ಸಿದ್ಧಾಂತ ಬಿಟ್ಟು RSS ಜೊತೆ ಹೋದರು

   'ಇದು ಸಿದ್ಧಾಂತದ ಹೋರಾಟ, ಒಂದು ಕಡೆ ಕಾಂಗ್ರೆಸ್ ಮತ್ತು ಬಿಜೆಪಿ-ಆರ್‌ಎಸ್‌ಎಸ್. ಜ್ಯೋತಿರಾಧಿತ್ಯ ಸಿಂಧಿಯಾ ಅವರ ಸಿದ್ಧಾಂತ ನನಗೆ ತಿಳಿದಿದೆ, ಅವನು ನನ್ನೊಂದಿಗೆ ಕಾಲೇಜಿನಲ್ಲಿದ್ದನು, ನನಗೆ ಅವನನ್ನು ಚೆನ್ನಾಗಿ ತಿಳಿದಿದೆ. ಅವರು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಚಿಂತಿಸಿ ತನ್ನ ಸಿದ್ಧಾಂತ ಬಿಟ್ಟು ಆರ್ ಎಸ್ ಎಸ್ ಜೊತೆ ಹೋದರು'' ಎಂದು ಹೇಳಿದ್ದರು.

   English summary
   BJP Leader Jyotiraditya Scindia removed BJP name from his twitter biography.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X