ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೋಪಾಲ್‌ನಲ್ಲಿ 'ವಿಚ್ಛೇದನ ಸಮಾರಂಭ'ದ ಆಹ್ವಾನ: ವಿರೋಧದ ಬಳಿಕ ಕಾರ್ಯಕ್ರಮ ರದ್ದು

|
Google Oneindia Kannada News

ಭೋಪಾಲ್‌, ಸೆಪ್ಟೆಂಬರ್ 22: ಮದುವೆ ಸಮಾರಂಭಗಳನ್ನು ನಾವು ನೀವೆಲ್ಲಾ ಕೇಳಿದ್ದೇವೆ. ಆದರೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ವಿಚ್ಛೇದನ ಸಮಾರಂಭವನ್ನು ಆಯೋಜಿಸಲಾಗಿತ್ತು. ನಂಬಲು ಅಸಾಧ್ಯವಾದರೂ ಇದು ನಿಜ. ಈ ಕಾರ್ಯಕ್ರಮವನ್ನು ಭಾಯಿ ವೆಲ್ಫೇರ್ ಸೊಸೈಟಿ ಆಯೋಜಿಸಿತ್ತು. ಕಾರ್ಯಕ್ರಮದ ಕೆಲವು ದಿನಗಳ ಮೊದಲು, ಆಮಂತ್ರಣ ಪತ್ರವು ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ ಆಗಿತ್ತು. ಇದಾದ ಬಳಿಕ ಈ ಸಮಾರಂಭದ ಬಗ್ಗೆ ಗಲಾಟೆ ನಡೆದಿದೆ. ಈ ಪ್ರತಿಭಟನೆಯಿಂದಾಗಿ ಈ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.

ವಿಚ್ಛೇದಿತ ಪುರುಷರಿಗೆ ವಿಚ್ಛೇದನ ಸಮಾರಂಭವನ್ನು ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಆಯೋಜಿಸಿತ್ತು. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ನೋಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಗ ಕೆಲವು ಸಂಘಟನೆಗಳು ಈ ಘಟನೆಯನ್ನು ವಿರೋಧಿಸಲು ಪ್ರಾರಂಭಿಸಿದವು. ಈ ಕಾರಣದಿಂದಾಗಿ ವಿಚ್ಛೇದನ ಸಮಾರಂಭವನ್ನು ರದ್ದುಗೊಳಿಸಲಾಯಿತು.

ಸೆಪ್ಟೆಂಬರ್ 18 ರಂದು ಭೋಪಾಲ್‌ನಲ್ಲಿ ನೋಂದಾಯಿತ ಎನ್‌ಜಿಒ 'ಭಾಯಿ ವೆಲ್‌ಫೇರ್ ಸೊಸೈಟಿ' ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಆಚರಣೆಯನ್ನು ಮಾಡಲು ಭೋಪಾಲ್ ಹೊರವಲಯದಲ್ಲಿ ರೆಸಾರ್ಟ್ ಅನ್ನು ಕಾಯ್ದಿರಿಸಲಾಗಿತ್ತು. ಕಾರ್ಯಕ್ರಮದ ಸಂಯೋಜಕ ಝಕಿ ಅಹ್ಮದ್ ಅವರು ಸೆಪ್ಟೆಂಬರ್ 11 ರ ಭಾನುವಾರ, ಕೆಲವು ಸಂಘಟನೆಗಳ ಪ್ರತಿಭಟನೆಯಿಂದಾಗಿ ರೆಸಾರ್ಟ್ ಮಾಲೀಕರು ಬುಕಿಂಗ್ ಅನ್ನು ರದ್ದುಗೊಳಿಸಿದ್ದಾರೆ ಎಂದು ಹೇಳಲಾಗಿದೆ. ಇದರಿಂದಾಗಿ ಈ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗಿಲ್ಲ.

Invitation to divorce ceremony in Bhopal: Event canceled after opposition

18 ಪುರುಷರ ವಿಚ್ಛೇದನ ಸಮಾರಂಭ ರದ್ದುಗೊಂಡಿದೆ. ಸಮಾರಂಭ ರದ್ದುಗೊಳಿಸಿದ ಬಳಿಕ ಯಾವುದೇ ವಿವಾದವನ್ನು ಬಯಸುವುದಿಲ್ಲ ಎಂದು ಎನ್‌ಜಿಒ ತಿಳಿಸಿದೆ. ಏಕೆಂದರೆ ಜನರಿಗೆ ಕಾನೂನು ಸಹಾಯವನ್ನು ಒದಗಿಸುವುದು ಮತ್ತು ಜನರು ಬಿಕ್ಕಟ್ಟಿನಿಂದ ಹೊರಬರಲು ಸಹಾಯ ಮಾಡುವುದು ಅವರ ಮುಖ್ಯ ಉದ್ದೇಶವಾಗಿದೆ. ಈ ಸಮಾರಂಭವು 18 ಪುರುಷರ ವಿಚ್ಛೇದನವನ್ನು ಆಚರಿಸಲು ಆಯೋಜಿಸಲಾಗಿತ್ತು. ಈ ಜನರು ಸುದೀರ್ಘ ಕಾಲ ಕಾನೂನು ಹೋರಾಟ ನಡೆಸಿದ್ದರು ಮತ್ತು ನಂತರ ಅವರು ಬಹಳ ಕಷ್ಟದಿಂದ ವಿಚ್ಛೇದನ ಪಡೆದರು ಎಂದು ಎನ್‌ಜಿಒ ಹೇಳಿದೆ. ಈ ಜನರು ವಿಚ್ಛೇದನ ಪಡೆಯಲು ದೊಡ್ಡ ಜೀವನಾಂಶವನ್ನು ಪಾವತಿಸಬೇಕಾಗುತ್ತದೆ. ವಿಚ್ಛೇದನವನ್ನು ನಾವು ಬೆಂಬಲಿಸುವುದಿಲ್ಲ ಎಂದು ಅದು ಹೇಳಿದೆ. ಆದರೆ ಮದುವೆಯು ಕಿರುಕುಳ ಮತ್ತು ಆತ್ಮಹತ್ಯೆಗೆ ಕಾರಣವಾದರೆ, ನಮ್ಮ ಸಂಸ್ಥೆ ಉಚಿತ ಕಾನೂನು ನೆರವು ನೀಡುವ ಮೂಲಕ ಅದನ್ನು ತಡೆಯಲು ಬಯಸುತ್ತದೆ ಎಂದಿದೆ.

English summary
There was an incident in Bhopal where a 'divorce ceremony' was organized for divorced men but was canceled after opposition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X