• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಪ್ಪು ಮಾಡಿದ್ದರೆ ನನ್ನ ಮನೆಯೂ ಐಟಿ ದಾಳಿ ನಡೆಸಲಿ: ಮೋದಿ

|

ಸಿಧಿ (ಮಧ್ಯ ಪ್ರದೇಶ), ಏಪ್ರಿಲ್ 26: ವಿಪಕ್ಷಗಳ ಮೇಲೆ ಹರಿಹಾಯ್ದ ನರೇಂದ್ರ ಮೋದಿ, ನಾನು ತಪ್ಪು ಮಾಡಿದ್ದರೆ ನನ್ನ ಮನೆಯ ಮೇಲೂ ಐಟಿ ದಾಳಿ ನಡೆಸಲಿ ಎಂದು ಸವಾಲು ಎಸೆದರು.

ಮಧ್ಯಪ್ರದೇಶದ ಸಿಧಿಯಲ್ಲಿ ಬಿಜೆಪಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಕಾನೂನು ಎಲ್ಲರಿಗೂ ಸಮಾನವಾದುದು, ಮೋದಿ ತಪ್ಪು ಮಾಡಿದರೆ ನನ್ನ ಮೇಲೂ ಐಟಿ ದಾಳಿ ನಡೆಸಲಿ ಎಂದು ಹೇಳಿದರು.

ಹೆಂಡತಿ ಬಗ್ಗೆ ಹೆಸರು ಬಿಟ್ಟು ಬೇರೇನೂ ಗೊತ್ತಿಲ್ಲ ಮೋದಿಗೆ!

ಕಾಂಗ್ರೆಸ್‌ ಪಕ್ಷದ ಮೇಲೆ ವಾಗ್ದಾಳಿ ನಡೆಸಿದ ಮೋದಿ, ತುಘಲಕ್ ರಸ್ತೆಯು ಹಗರಣದ ಹಣವನ್ನು ಒಂದು ಕುಟುಂಬದ ಪ್ರಚಾರಕ್ಕಾಗಿ ಬಳಸುತ್ತಿದೆ ಎಂದರು. ಕಾಂಗ್ರೆಸ್ ಪಕ್ಷದ ಮುಖ್ಯ ಕಚೇರಿ ಇರುವುದು ದೆಹಲಿಯ ತುಘಲಕ್ ರಸ್ತೆಯಲ್ಲಿಯೇ.

ದೆಹಲಿಯಿಂದ ಭೋಪಾಲ್‌ ವರೆಗೆ ಕಾಂಗ್ರೆಸ್‌ನಲ್ಲಿ ಭ್ರಷ್ಟಾಚಾರವೇ ತುಂಬಿದೆ. ನಿಮ್ಮ ಚೌಕೀದಾರ ಜಾಗೃತನಾಗಿದ್ದಾನೆ, ಭ್ರಷ್ಟರನ್ನು ಅವರ ಸಹವರ್ತಿಗಳನ್ನು ಬಿಡುವುದಿಲ್ಲ ಎಂದು ಮೋದಿ ಹೂಂಕರಿಸಿದರು.

ಮೋದಿ ಆಸ್ತಿ ವಿವರ: ಸ್ವಂತ ಕಾರು ಹೊಂದಿಲ್ಲ, ಸಾಲ ಮಾಡಿಲ್ಲ

ತಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಹೇಳಿದ ಮೋದಿ, ಮಹಾಘಟಬಂಧನ್ ಅನ್ನು 'ಮಹಾಮಿಲಾವಟಿ' ಎಂದು ಛೇಡಿಸಿದರು. ಮೋದಿ ಅವರ ಸಮಾವೇಶದಲ್ಲಿ ಸಾವಿರಾರು ಮಂದಿ ಕಾರ್ಯಕರ್ತರು, ಜನರು ಭಾಗವಹಿಸಿದ್ದರು.

English summary
If i did something wrong income tax department can raid on my house also said Narendra Modi. He addressed a huge election campaign rally in Vidhi of Madya Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X